ADVERTISEMENT

ಸಂಸತ್ತಿನಲ್ಲಿ ಹಕ್ಕು ಚ್ಯುತಿ ಮಂಡಿಸಿ ಛೀಮಾರಿ ಹಾಕಬೇಕು: ಮಂಜುನಾಥ್ ವಾಗ್ದಾಳಿ

ಚಂದ್ರಶೇಖರ್ ವಿರುದ್ಧ ಸಂಸದ ಮಂಜುನಾಥ್ ವಾಗ್ದಾಳಿ

​ಪ್ರಜಾವಾಣಿ ವಾರ್ತೆ
Published 1 ಅಕ್ಟೋಬರ್ 2024, 15:38 IST
Last Updated 1 ಅಕ್ಟೋಬರ್ 2024, 15:38 IST
ರಾಮನಗರದ ಸಂಸದರ ಕಚೇರಿಯಲ್ಲಿ ಸಂಸದ ಡಾ.ಸಿ.ಎನ್ ಮಂಜುನಾಥ್ ಸುದ್ದಿಗಾರರೊಂದಿಗೆ ಮಾತನಾಡಿದರು
ರಾಮನಗರದ ಸಂಸದರ ಕಚೇರಿಯಲ್ಲಿ ಸಂಸದ ಡಾ.ಸಿ.ಎನ್ ಮಂಜುನಾಥ್ ಸುದ್ದಿಗಾರರೊಂದಿಗೆ ಮಾತನಾಡಿದರು   

ರಾಮನಗರ: ಜವಾಬ್ದಾರಿಯುತ ಐಪಿಎಸ್ ಅಧಿಕಾರಿಯ ಹುದ್ದೆಯಲ್ಲಿದ್ದು  ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರ ಬಗ್ಗೆ ಕೀಳು ಮಟ್ಟದ ಭಾಷೆ ಬಳಸಿರುವ ಚಂದ್ರಶೇಖರ್ ವಿರುದ್ಧ ಸಂಸತ್ತಿನಲ್ಲಿ ಹಕ್ಕು ಚ್ಯುತಿ ಮಂಡನೆ ಮಾಡಿ ಛೀಮಾರಿ ಹಾಕಬೇಕು ಎಂದು ಸಂಸದ ಡಾ.ಸಿ.ಎನ್ ಮಂಜುನಾಥ್ ಅಭಿಪ್ರಾಯಪಟ್ಟರು.

ರಾಮನಗರದ ಸಂಸದರ ಕಚೇರಿಯಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕುಮಾರಸ್ವಾಮಿ ಕೂಡ ಆರೋಪಿ ಎನ್ನುವ ಮೂಲಕ ನೇರವಾಗಿ ಅವರನ್ನು ಪ್ರಾಣಿಗೆ ಹೋಲಿಸಿದ್ದು ಖಂಡನೀಯ. ಇಂತಹ ಅಧಿಕಾರಿಯ ವಿರುದ್ಧ ಉಗ್ರ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಕೇಂದ್ರ ಸಚಿವರಾದ ಕುಮಾರಸ್ವಾಮಿ ಅವರ ಬಗ್ಗೆಯೇ ಈ ರೀತಿ ಮಾತನಾಡಿರುವ ಚಂದ್ರಶೇಖರ್ ಸಾಮಾನ್ಯ ಜನರ ಜೊತೆಗೆ ಹೇಗೆ ವರ್ತಿಸಬಹುದು ಎಂದು ಊಹಿಸಬಹುದು. ಚಂದ್ರಶೇಖರ್ ಪತ್ರದ ಹಿಂದೆ ಸರ್ಕಾರದ ಪಾತ್ರ ಇದೆಯಾ ಎಂದು ಸುದ್ದಿಗಾರರು ಕೇಳಿದ ಪ್ರರ್ಶನೆಗೆ ಉತ್ತರಿಸಿದ ಮಂಜುನಾಥ್, ಈ ಬಗ್ಗೆ ನನಗೆ ಮಾಹಿತಿ ಇಲ್ಲ, ಆದರೆ ಈ ಅನುಮಾನವನ್ನು ಕುಮಾರಸ್ವಾಮಿ ಅವರೂ ವ್ಯಕ್ತಪಡಿಸಿದ್ದಾರೆ. ಇದನ್ನು ಬಹಿರಂಗ ಮಾಡಲು ತನಿಖೆ ನಡೆಯಬೇಕು ಎಂದರು.

ADVERTISEMENT


ಜಿಲ್ಲಾ ಬಿಜೆಪಿ ಅಧ್ಯಕ್ಷ ಆನಂದಸ್ವಾಮಿ ಹಾಗೂ ಮುಖಂಡರು ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.