ADVERTISEMENT

ರಾಮನಗರ: ನಗರಸಭೆ ವ್ಯಾಪ್ತಿಗೆ ಮಾಯಗಾನಹಳ್ಳಿ ಗ್ರಾ.ಪಂ. ಸೇರ್ಪಡೆಗೆ ವಿರೋಧ

​ಪ್ರಜಾವಾಣಿ ವಾರ್ತೆ
Published 15 ಅಕ್ಟೋಬರ್ 2025, 2:58 IST
Last Updated 15 ಅಕ್ಟೋಬರ್ 2025, 2:58 IST
<div class="paragraphs"><p>ರಾಮನಗರ ನಗರಸಭೆ ವ್ಯಾಪ್ತಿಗೆ&nbsp; ಮಾಯಗಾನಹಳ್ಳಿ ಗ್ರಾಮ ಪಂಚಾಯಿತಿ ಸೇರಿಸಲು ಮುಂದಾಗಿರುವುದನ್ನು ವಿರೋಧಿಸಿ, ಸ್ಥಳೀಯ ಮುಖಂಡರು ಹೆಚ್ಚುವರಿ ಜಿಲ್ಲಾಧಿಕಾರಿ ಆರ್. ಚಂದ್ರಯ್ಯ ಅವರಿಗೆ ಮಂಗಳವಾರ ಮನವಿ ಸಲ್ಲಿಸಿದರು.</p></div>

ರಾಮನಗರ ನಗರಸಭೆ ವ್ಯಾಪ್ತಿಗೆ  ಮಾಯಗಾನಹಳ್ಳಿ ಗ್ರಾಮ ಪಂಚಾಯಿತಿ ಸೇರಿಸಲು ಮುಂದಾಗಿರುವುದನ್ನು ವಿರೋಧಿಸಿ, ಸ್ಥಳೀಯ ಮುಖಂಡರು ಹೆಚ್ಚುವರಿ ಜಿಲ್ಲಾಧಿಕಾರಿ ಆರ್. ಚಂದ್ರಯ್ಯ ಅವರಿಗೆ ಮಂಗಳವಾರ ಮನವಿ ಸಲ್ಲಿಸಿದರು.

   

ರಾಮನಗರ: ಇಲ್ಲಿನ ನಗರಸಭೆಯನ್ನು ಗ್ರೇಡ್‌-1 ಆಗಿ ಮೇಲ್ದರ್ಜೆಗೇರಿ ಸಲು ಸಮೀಪದ ಮಾಯಗಾನಹಳ್ಳಿ ಗ್ರಾಮ ಪಂಚಾಯಿತಿಯನ್ನು ನಗರಸಭೆ ವ್ಯಾಪ್ತಿಗೆ ಸೇರಿಸಲು ಮುಂದಾಗಿರುವುದನ್ನು ವಿರೋಧಿಸಿ, ಸ್ಥಳೀಯ ಮುಖಂಡರು ಹೆಚ್ಚುವರಿ ಜಿಲ್ಲಾಧಿಕಾರಿ ಆರ್. ಚಂದ್ರಯ್ಯ ಅವರಿಗೆ ಮಂಗಳವಾರ ಮನವಿ ಸಲ್ಲಿಸಿದರು.

ಪಂಚಾಯಿತಿ ವ್ಯಾಪ್ತಿಗೆ ಸೇರಿದ ಮಾಯಗಾನಹಳ್ಳಿ, ಕೇತೋಹಳ್ಳಿ, ಸಂಗಬಸವನದೊಡ್ಡಿ, ಕೆಂಪನಹಳ್ಳಿ, ಬಸವನಪುರ, ಕೆಂಜಿಗರಹಳ್ಳಿ, ಕೆಂಜಿಗರಹಳ್ಳಿ ಕಾಲೊನಿ, ಗಂಗರಾಜನಹಳ್ಳಿ, ಮಾದಾಪುರ, ಗೋಪಾಲಪುರ, ಶಿವನೇಗೌಡನದೊಡ್ಡಿ, ರಾಂಪುರದೊಡ್ಡಿ, ಅರಳಿಮರದದೊಡ್ಡಿ ಧಾರಾಪುರ, ಕಪನಯ್ಯನದೊಡ್ಡಿ ಗ್ರಾಮಗಳು ಗ್ರಾಮಾಂತರ ಕೃಷಿ ಪ್ರಧಾನ ಪ್ರದೇಶವಾಗಿದೆ.

ADVERTISEMENT

ನಗರಸಭೆಗೆ ಗ್ರಾ.ಪಂ. ಸೇರಿಸಿದರೆ ಈಗಾಗಲೇ ಪಂಚಾಯತ್ ರಾಜ್ ವ್ಯವಸ್ಥೆಯಿಂದ ಸಿಗುತ್ತಿರುವ ಸೌಲಭ್ಯಗಳಿಂದ ಪಂಚಾಯಿತಿ ವಂಚಿತವಾಗಲಿದೆ. ನಗರಕ್ಕೆ ಸೇರಿದ ಬಳಿಕ ಕೃಷಿ ಪ್ರಧಾನವಾದ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳು ನಗರೀಕರಣಕ್ಕೆ ಬಲಿಯಾಗಲಿವೆ. ರೈತರು ಕೃಷಿ ಭೂಮಿ ಕಳೆದುಕೊಂಡು ಅತಂತ್ರ ಸ್ಥಿತಿ ತಲುಪಲಿದ್ದಾರೆ ಎಂದು ಆತಂಕ ವ್ಯಕ್ತಪಡಿಸಿದರು.

ಈ ಭಾಗದ ಗ್ರಾಮೀಣ ವಿದ್ಯಾರ್ಥಿಗಳು ಶಿಕ್ಷಣ ಹಾಗೂ ಉದ್ಯೋಗದಲ್ಲಿ ಗ್ರಾಮೀಣ ಮೀಸಲಾತಿ ಕಳೆದುಕೊಳ್ಳುತ್ತಾರೆ. ನಗರಸಭೆಯ ತೆರಿಗೆ ಕೂಪಕ್ಕೆ ಜನ ಬೀಳುತ್ತಾರೆ. ನೀರು ತೆರಿಗೆ, ಮನೆ ಕಂದಾಯ ಹೆಚ್ಚಾಗುತ್ತದೆ.ನರೇಗಾ ಸೌಲಭ್ಯ ಕೈ ತಪ್ಪಲಿದೆ. ಸಾರ್ವಜನಿಕ ಆಸ್ತಿಗಳ ನೋಂದಣಿ, ವಿಭಾಗ ಪತ್ರ ಮತ್ತು ಖರೀದಿ ಶುಲ್ಕಗಳು ಹೆಚ್ಚಾಗುತ್ತವೆ. ಹಾಗಾಗಿ, ನಾವು ಗ್ರಾ.ಪಂ.ನಲ್ಲೇ ಇರುತ್ತೇವೆ. ನಗರಸಭೆಗೆ ಸೇರಿಸಬಾರದು ಎಂದು ಒತ್ತಾಯಿಸಿದರು.

ಜೆಡಿಎಸ್ ರಾಮನಗರ ತಾಲ್ಲೂಕು ಘಟಕದ ಅಧ್ಯಕ್ಷ ಸಬ್ಬಕೆರೆ ಶಿವಲಿಂಗಪ್ಪ, ಪಿಎಲ್‍ಡಿ ಬ್ಯಾಂಕ್ ನಿರ್ದೇಶಕ ಮಾದಾಪುರ ಎಂ.ಆರ್. ಶಿವಕುಮಾರಸ್ವಾಮಿ, ಮುಖಂಡರಾದ ವಿ. ನರಸಿಂಹಮೂರ್ತಿ, ಕೇತೋಹಳ್ಳಿ ಯೋಗೇಶ್, ಕನ್ನಡಪರ ಹೋರಾಟಗಾರ ನೀಲೇಶ್‍ಗೌಡ, ಮಾಯಗಾನಹಳ್ಳಿ ರಾಜಶೇಖರ್ ವೆಂಕಟೇಶ್, ಶ್ರೀಧರ್, ವಿನಯ್ ಹಾಗೂ ಇತರರು ಇದ್ದರು.

ಕೆಲವರು ತಮ್ಮ ಸ್ವಾರ್ಥಕ್ಕಾಗಿ ರಾಮನಗರ ಗ್ರೇಡ್-1 ನಗರಸಭೆಗೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಬೆಳೆಯುತ್ತಿರುವ ರಾಮನಗರದ ಅಭಿವೃದ್ಧಿಗೆ ನಗರಸಭೆಯ ವಿಸ್ತರಣೆ ಅಗತ್ಯ. ಅದನ್ನು ಕೈ ಬಿಡುವ ಪ್ರಶ್ನೆಯೇ ಇಲ್ಲ.
– ಎಚ್.ಎ. ಇಕ್ಬಾಲ್ ಹುಸೇನ್ ಶಾಸಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.