ADVERTISEMENT

ಮಾಗಡಿ | ಹಾಲು ಉತ್ಪಾದಕರಿಗೆ ₹2 ಪ್ರೋತ್ಸಾಹ ಧನ ಹೆಚ್ಚಳ: ಎಚ್.ಎನ್.ಅಶೋಕ್

​ಪ್ರಜಾವಾಣಿ ವಾರ್ತೆ
Published 21 ಡಿಸೆಂಬರ್ 2025, 2:25 IST
Last Updated 21 ಡಿಸೆಂಬರ್ 2025, 2:25 IST
ಮಾಗಡಿಯಲ್ಲಿ ಪಶು ಇಲಾಖೆ ಆವರಣದಲ್ಲಿ ಸರ್ಕಾರದ ವತಿಯಿಂದ ಶೇ50ರಷ್ಟು ಸಬ್ಸಿಡಿ ದರದಲ್ಲಿ ವಿದ್ಯುತ್ ಚಾಲಿತ ಮೇವು ಕತ್ತರಿಸುವ ಯಂತ್ರವನ್ನು ಫಲಾನುಭವಿಗಳಿಗೆ ಬಮೂಲ್ ನಿರ್ದೇಶಕ ಎಚ್.ಎನ್.ಅಶೋಕ್ ವಿತರಣೆ ಮಾಡಿದರು. ಪಶು ಪಾಲನಾ ಇಲಾಖೆ ಸಹಾಯಕ ನಿರ್ದೇಶಕ ನಾಗಭೂಷಣ್, ತಾ.ಪಂ.ಇಒ ಜೈಪಾಲ್ ಜೊತೆಯಲ್ಲಿದ್ದರು
ಮಾಗಡಿಯಲ್ಲಿ ಪಶು ಇಲಾಖೆ ಆವರಣದಲ್ಲಿ ಸರ್ಕಾರದ ವತಿಯಿಂದ ಶೇ50ರಷ್ಟು ಸಬ್ಸಿಡಿ ದರದಲ್ಲಿ ವಿದ್ಯುತ್ ಚಾಲಿತ ಮೇವು ಕತ್ತರಿಸುವ ಯಂತ್ರವನ್ನು ಫಲಾನುಭವಿಗಳಿಗೆ ಬಮೂಲ್ ನಿರ್ದೇಶಕ ಎಚ್.ಎನ್.ಅಶೋಕ್ ವಿತರಣೆ ಮಾಡಿದರು. ಪಶು ಪಾಲನಾ ಇಲಾಖೆ ಸಹಾಯಕ ನಿರ್ದೇಶಕ ನಾಗಭೂಷಣ್, ತಾ.ಪಂ.ಇಒ ಜೈಪಾಲ್ ಜೊತೆಯಲ್ಲಿದ್ದರು   

ಮಾಗಡಿ: ಸರ್ಕಾರ ರೈತರಿಗೆ ಸಿಗುವ ಹಾಲಿನ ಪ್ರೋತ್ಸಾಹ ಧನವನ್ನು ಪ್ರತಿ ಲೀಟರ್‌ಗೆ ₹2 ಹೆಚ್ಚಿಸಿರುವುದಕ್ಕೆ ಬಮೂಲ್ ಹಾಲು ಸಹಕಾರಿ ಸಂಸ್ಥೆ ನಿರ್ದೇಶಕ ಎಚ್.ಎನ್.ಅಶೋಕ್ ಅಭಿನಂದನೆ ಸಲ್ಲಿಸಿದರು.

ಪಟ್ಟಣದ ಹಳೆ ಪಶು ಆಸ್ಪತ್ರೆ ಆವರಣದಲ್ಲಿ ಶನಿವಾರ ನಡೆದ ವಿದ್ಯುತ್ ಚಾಲಿತ ಮೇವು ಕತ್ತರಿಸುವ ಯಂತ್ರ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು. 

‘ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರೋತ್ಸಾಹ ಧನವನ್ನು ₹3ರಿಂದ ₹5 ಏರಿಕೆ ಮಾಡಿದ್ದರು. ಬೆಳಗಾವಿ ಅಧಿವೇಶನದಲ್ಲಿ ಇದನ್ನು ಮತ್ತೆ ₹2 ಹೆಚ್ಚಿಸಲಾಗಿದೆ. ಇದು ರೈತರಿಗೆ ಹೈನುಗಾರಿಕೆಯಲ್ಲಿ ಹೆಚ್ಚು ತೊಡಗಿಸಿಕೊಳ್ಳಲು ಪ್ರೋತ್ಸಾಹವಾಗಲಿದೆ’ ಎಂದು ಹೇಳಿದರು.

ADVERTISEMENT

ಪ್ರತಿದಿನ 18 ಲಕ್ಷ ಲೀಟರ್ ಹಾಲು ಉತ್ಪಾದನೆಯಾಗುತ್ತಿದೆ. ಇದರಲ್ಲಿ 10ಲಕ್ಷ ಲೀಟರ್ ಹಾಲು ನೇರ ಮಾರಾಟವಾಗುತ್ತದೆ ಎಂದು ತಿಳಿಸಿದರು.

ಉಳಿದ ಹಾಲನ್ನು ಕನಕಪುರದಲ್ಲಿ ಹಾಲು ಪದಾರ್ಥಗಳ ತಯಾರಿಕೆಗೆ ಬಳಸಲಾಗುತ್ತದೆ. ಮಾಗಡಿ ತಾಲ್ಲೂಕಿನಲ್ಲಿ ಮಾತ್ರ ಪ್ರತಿದಿನ ಸುಮಾರು ಎರಡು ಲಕ್ಷ ಲೀಟರ್ ಹಾಲು ಉತ್ಪಾದನೆಯಾಗುತ್ತಿದೆ ಮತ್ತು ಇದನ್ನು ಇನ್ನೂ 50 ಸಾವಿರ ಲೀಟರ್ ಹೆಚ್ಚಿಸುವ ಗುರಿ ಹೊಂದಲಾಗಿದೆ ಎಂದರು.

ವಾರ್ಷಿಕ ಕೇವಲ ಶೇ3 ಬಡ್ಡಿ ದರದಲ್ಲಿ, ₹2ಲಕ್ಷವರೆಗೆ ಹಸು ಖರೀದಿಗೆ ರೈತರಿಗೆ ಸಾಲದ ಅವಕಾಶವಿದೆ ಎಂದು ಹೇಳಿದರು.

ರೈತರು ಯಂತ್ರೋಪಕರಣಗಳನ್ನು ಬಳಸಿಕೊಂಡು ಪಶುಪಾಲನೆಯನ್ನು ಸುಲಭಗೊಳಿಸಿಕೊಳ್ಳಬೇಕು. ಬಮೂಲ್ ಸಂಸ್ಥೆಯೂ ರೈತರಿಗೆ ಸಾಕಷ್ಟು ಸೌಲಭ್ಯ ಮಾಡಿಕೊಡಲಿದೆ ಎಂದರು.

ಪಶುಪಾಲನಾ ಇಲಾಖೆ ತಾಲ್ಲೂಕು ಸಹಾಯಕ ನಿರ್ದೇಶಕ ನಾಗಭೂಷಣ್, ಕಾಲು-ಬಾಯಿ ರೋಗ ಮತ್ತು ಬರಡು ಹಸುಗಳ ಸಮಸ್ಯೆಯಿಂದಾಗಿ ರೈತರು ವಾರ್ಷಿಕ ಸುಮಾರು ಅಪಾರ ನಷ್ಟ ಅನುಭವಿಸುತ್ತಿದ್ದಾರೆ ಎಂದು ತಿಳಿಸಿದರು.

ರೋಗ ನಿಯಂತ್ರಣಕ್ಕಾಗಿ ಇಲಾಖೆಯು ನಿಯಮಿತ ಆರೋಗ್ಯ ಶಿಬಿರ ಏರ್ಪಡಿಸಲಿದೆ. ಶೇ50 ರಿಯಾಯಿತಿಯಲ್ಲಿ 15 ಫಲಾನುಭವಿ ರೈತರಿಗೆ ಮೇವು ಕತ್ತರಿಸುವ ಯಂತ್ರಗಳನ್ನು ವಿತರಿಸಲಾಯಿತು.

ಕಾರ್ಯಕ್ರಮದಲ್ಲಿ ಬಮೂಲ್ ಸಂಸ್ಥೆ ಉಪ ವ್ಯವಸ್ಥಾಪಕ ಡಾ.ಅಜಯ್, ತಾ.ಪಂ.ಸದಸ್ಯ ಜೈಪಾಲ್, ಪಶುವೈದ್ಯ ಡಾ.ಜಯಶ್ರೀ ಮತ್ತು ಡಾ.ರೆಡ್ಡಿ, ಮಾಜಿ ಎಪಿಎಂಸಿ ಅಧ್ಯಕ್ಷ ಚಕ್ರಬಾವಿ ಮಾರೇಗೌಡ ಮತ್ತು ಇತರರು ಇದ್ದರು.  

ರಾಜ್ಯ ಸರ್ಕಾರ ರೈತರಿಗೆ ದೊರಕುವ ಹಾಲಿನ ಪ್ರೋತ್ಸಾಹ ಧನವನ್ನು ಪ್ರತಿ ಲೀಟರ್ಗೆ ಎರಡು ರೂಪಾಯಿ ಹೆಚ್ಚಿಸಿರುವುದಕ್ಕೆ ಬಮೂಲ್ ಹಾಲು ಸಹಕಾರಿ ಸಂಸ್ಥೆಯ ನಿರ್ದೇಶಕ ಎಚ್.ಎನ್.ಅಶೋಕ್ ಅವರು ಅಭಿನಂದನೆ ಸಲ್ಲಿಸಿದ್ದಾರೆ.

ಪಟ್ಟಣದ ಹಳೆಯ ಪಶು ಆಸ್ಪತ್ರೆ ಆವರಣದಲ್ಲಿ ಶನಿವಾರ ನಡೆದ ವಿದ್ಯುತ್ ಚಾಲಿತ ಮೇವು ಕತ್ತರಿಸುವ ಯಂತ್ರ ವಿತರಣಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಈ ಕಾರ್ಯಕ್ರಮವನ್ನು ಪಶುಪಾಲನಾ ಇಲಾಖೆ ಮತ್ತು ಜಿಲ್ಲಾ ಪಂಚಾಯಿತಿ ಸಹಯೋಗದೊಂದಿಗೆ ಏರ್ಪಡಿಸಲಾಗಿತ್ತು.

"ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರೋತ್ಸಾಹ ಧನವನ್ನು ಮೂರು ರೂಪಾಯಿಯಿಂದ ಐದು ರೂಪಾಯಿಗೆ ಏರಿಕೆ ಮಾಡಿದ್ದರು. ಬೆಳಗಾವಿ ಅಧಿವೇಶನದಲ್ಲಿ ಇದನ್ನು ಮತ್ತೆ ಎರಡು ರೂಪಾಯಿ ಹೆಚ್ಚಿಸಲಾಗಿದೆ. ಇದು ರೈತರಿಗೆ ಹೈನುಗಾರಿಕೆಯಲ್ಲಿ ಹೆಚ್ಚು ತೊಡಗಿಸಿಕೊಳ್ಳಲು ಪ್ರೋತ್ಸಾಹವಾಗಲಿದೆ" ಎಂದು ಅಶೋಕ್ ಅವರು ಹೇಳಿದರು.

ತಾಲ್ಲೂಕಿನ ಡೈರಿ ಕಟ್ಟಡ ಉದ್ಘಾಟನೆ ಸಂದರ್ಭದಲ್ಲಿ ಬಮೂಲ್ ಅಧ್ಯಕ್ಷ ಡಿ.ಕೆ.ಸುರೇಶ್ ಅವರಿಗೆ ಪ್ರೋತ್ಸಾಹ ಧನ ಹೆಚ್ಚಿಸುವ ಮನವಿ ಮಾಡಿದ್ದಾಗಿ ಅವರು ನೆನಪಿಸಿದರು. ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಮುಖ್ಯಮಂತ್ರಿಯಾದರೆ ಇನ್ನೂ ಮೂರು ರೂಪಾಯಿ ಹೆಚ್ಚಿಸಿ ರೈತರಿಗೆ ಹೆಚ್ಚಿನ ಅನುಕೂಲ ಮಾಡಿಕೊಡುತ್ತಾರೆ ಎಂದು ಅವರು ನಂಬಿಕೆ ವ್ಯಕ್ತಪಡಿಸಿದರು.

ಪ್ರತಿದಿನ 18 ಲಕ್ಷ ಲೀಟರ್ ಹಾಲು ಉತ್ಪಾದನೆಯಾಗುತ್ತಿದ್ದು, ಇದರಲ್ಲಿ 10 ಲಕ್ಷ ಲೀಟರ್ ಹಾಲು ನೇರ ಮಾರಾಟವಾಗುತ್ತದೆ ಎಂದು ಅಶೋಕ್ ಅವರು ತಿಳಿಸಿದರು. ಉಳಿದ ಹಾಲನ್ನು ಕನಕಪುರದಲ್ಲಿ ಹಾಲು ಪದಾರ್ಥಗಳ ತಯಾರಿಕೆಗೆ ಬಳಸಲಾಗುತ್ತದೆ. ಮಾಗಡಿ ತಾಲ್ಲೂಕಿನಲ್ಲಿ ಮಾತ್ರ ಪ್ರತಿದಿನ ಸುಮಾರು ಎರಡು ಲಕ್ಷ ಲೀಟರ್ ಹಾಲು ಉತ್ಪಾದನೆಯಾಗುತ್ತಿದೆ ಮತ್ತು ಇದನ್ನು ಇನ್ನೂ 50 ಸಾವಿರ ಲೀಟರ್ ಹೆಚ್ಚಿಸುವ ಗುರಿ ಹೊಂದಲಾಗಿದೆ ಎಂದರು. ವಾರ್ಷಿಕ ಕೇವಲ 3% ಬಡ್ಡಿ ದರದಲ್ಲಿ, ಎರಡು ಲಕ್ಷ ರೂಪಾಯಿ ವರೆಗೆ ಹಸು ಖರೀದಿಗೆ ರೈತರಿಗೆ ಸಾಲದ ಅವಕಾಶವಿದೆ ಎಂದು ಅವರು ಹೇಳಿದರು.

ರೈತರು ಯಂತ್ರೋಪಕರಣಗಳನ್ನು ಬಳಸಿಕೊಂಡು ಪಶುಪಾಲನೆಯನ್ನು ಸುಲಭಗೊಳಿಸಿಕೊಳ್ಳಬೇಕು ಎಂದು ಅಶೋಕ್ ಅವರು ಕೋರಿದರು. ಬಮೂಲ್ ಸಂಸ್ಥೆಯೂ ರೈತರಿಗೆ ಸಾಕಷ್ಟು ಸೌಲಭ್ಯಗಳನ್ನು ಮಾಡಿಕೊಡುತ್ತದೆ ಎಂದರು.

ಪಶುಪಾಲನಾ ಇಲಾಖೆಯ ತಾಲ್ಲೂಕು ಸಹಾಯಕ ನಿರ್ದೇಶಕ ನಾಗಭೂಷಣ್ ಅವರು, ಕಾಲು-ಬಾಯಿ ರೋಗ ಮತ್ತು ಬರಡು ಹಸುಗಳ ಸಮಸ್ಯೆಯಿಂದಾಗಿ ರೈತರು ವಾರ್ಷಿಕ ಸುಮಾರು 3500 ಕೋಟಿ ರೂಪಾಯಿ ನಷ್ಟ ಅನುಭವಿಸುತ್ತಿದ್ದಾರೆ ಎಂದು ತಿಳಿಸಿದರು. ರೋಗ ನಿಯಂತ್ರಣಕ್ಕಾಗಿ ಇಲಾಖೆಯು ನಿಯಮಿತ ಆರೋಗ್ಯ ಶಿಬಿರಗಳನ್ನು ಏರ್ಪಡಿಸುತ್ತದೆ ಎಂದರು. ಈ ಅವಸರದಲ್ಲಿ, 50% ರಿಯಾಯಿತಿ ಸಹಾಯಧನದ ಮೇರೆಗೆ 15 ಫಲಾನುಭವಿ ರೈತರಿಗೆ ಮೇವು ಕತ್ತರಿಸುವ ಯಂತ್ರಗಳನ್ನು ವಿತರಿಸಲಾಯಿತು.

ಕಾರ್ಯಕ್ರಮದಲ್ಲಿ ಬಮೂಲ್ ಸಂಸ್ಥೆಯ ಉಪ ವ್ಯವಸ್ಥಾಪಕ ಡಾ. ಅಜಯ್, ತಾ.ಪಂ. ಸದಸ್ಯ ಜೈಪಾಲ್, ಪಶು ವೈದ್ಯರು ಡಾ. ಜಯಶ್ರೀ ಮತ್ತು ಡಾ. ರೆಡ್ಡಿ, ಮಾಜಿ ಎಪಿಎಂಸಿ ಅಧ್ಯಕ್ಷ ಚಕ್ರಬಾವಿ ಮಾರೇಗೌಡ ಮತ್ತು ಇತರ ಫಲಾನುಭವಿ ರೈತರು ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.