ಕನಕಪುರ: ನಾಡಹಬ್ಬ ದಸರಾ ಪ್ರಯುಕ್ತವಾಗಿ ಅಂಬೇಡ್ಕರ್ ಭವನದಲ್ಲಿ ಹತ್ತು ದಿನಗಳ ಪೌರಾಣಿಕ ನಾಟಕಗಳ ಪ್ರದರ್ಶನ ಕಾರ್ಯಕ್ರಮಕ್ಕೆ ಶುಕ್ರವಾರ ಮೊದಲ ದಿನ ‘ಶನಿ ಪ್ರಭಾವ’ ನಾಟಕದೊಂದಿಗೆ ಚಾಲನೆ ದೊರೆಯಿತು.
ಕಬ್ಬಾಳಮ್ಮ ವಿವಿಧೋದ್ದೇಶ ಪೌರಾಣಿಕ ಮತ್ತು ಸಾಂಸ್ಕೃತಿಕ ಕಲಾ ಟ್ರಸ್ಟ್ ಹಾಗೂ ಆಂಜನೇಯ ಸ್ವಾಮಿ ಕಲಾ ಬಳಗ ಜಂಟಿಯಾಗಿ ನಾಟಕ ಪ್ರದರ್ಶನ ಏರ್ಪಡಿಸಿದೆ.
ನಾಟಕ ಪ್ರದರ್ಶನಕ್ಕೆ ಚಾಲನೆ ನೀಡಿ ಮಾತನಾಡಿದ ಮರಳೆ ಗವಿಮಠದ ಮುಮ್ಮಡಿ ಶಿವರುದ್ರ ಸ್ವಾಮೀಜಿ, ನಾಡಿನ ಸಂಸ್ಕೃತಿ, ಪರಂಪರೆ, ಜೀವನದ ಮೌಲ್ಯದೊಂದಿಗೆ ಸಮಾಜಕ್ಕೆ ಒಳ್ಳೆಯ ಸಂದೇಶ, ಮನೋರಂಜನೆ ನೀಡುವ ಸಾಮಾಜಿಕ ಮಾಧ್ಯಮವೇ ನಾಟಕ ಎಂದರು.
ಹಿಂದಿನ ಕಾಲದಲ್ಲಿ ಚಲನಚಿತ್ರ, ಟಿವಿ ಮಾಧ್ಯಮ ಇರಲಿಲ್ಲ. ನಾಟಕಗಳೇ ಬಹುದೊಡ್ಡ ಮನರಂಜನೆ ಮಾಧ್ಯಮಗಳಾಗಿದ್ದವು. ಸಾವಿರಾರು ರಂಗ ಕಲಾವಿದರು ನಾಟಕವನ್ನು ಮುಖ್ಯ ಭೂಮಿಕೆಯಾಗಿಸಿಕೊಂಡಿದ್ದರು. ಬದಲಾದ ಪರಿಸ್ಥಿತಿಯಿಂದ ನಾಟಕ ಕಂಪನಿ ಮತ್ತು ಕಲಾವಿದರಿಗೆ ಹಿನ್ನಡೆಯಾಗಿದೆ. ನಾಟಕಗಳನ್ನು ಪ್ರೋತ್ಸಾಹಿಸುವ ಮೂಲಕ ನಾಟಕ ಸಂಸ್ಕೃತಿಯನ್ನು ಉಳಿಸಬೇಕು ಎಂದರು.
ಸ್ಥಳೀಯ ಕಲಾವಿದರು ಅಂಬೇಡ್ಕರ್ ಭವನದಲ್ಲಿ 10 ದಿನ ನಾಟಕ ಪ್ರದರ್ಶನ ಮಾಡಲಿದ್ದಾರೆ. ಪ್ರತಿದಿನವೂ 3 ತಾಸು ನಾಟಕ ಪ್ರದರ್ಶನವಾಗಲಿದೆ ಎಂದು ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯ ಕೆ.ಎನ್.ರಾಮು ಮಾಹಿತಿ ನೀಡಿದರು.
ಯಾವ ದಿನ ಯಾವ ನಾಟಕ?
ಸ್ಥಳೀಯ ಕಲಾವಿದರು ಅಭಿನಯಿಸಿದ ಪೌರಾಣಿಕ ನಾಟಕಗಳ ಪ್ರದರ್ಶನ ಅ.14 ರವರೆಗೆ ನಡೆಯಲಿದೆ. ಅ.5: ಧರ್ಮರಾಜ ಪ್ರತಿಷ್ಠಾಪನೆ ಅ.6: ಕುರುಕ್ಷೇತ್ರ ಅ.711 ಮತ್ತು 14: ಶ್ರೀ ಕೃಷ್ಣ ಸಂಧಾನ ಅ.912: ದಕ್ಷ ಯಜ್ಞಂಅ.10: ಬೃಗುಮುನಿ ಗರ್ವಭಂಗಅ.13: ಗೀತೋಪದೇಶ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.