ADVERTISEMENT

ಕನಕಪುರ | ವಿಶೇಷ ಗ್ರಾಮ ಸಭೆ: ರೇಗಾ ಅಕ್ರಮ, ಸೌಲಭ್ಯ ಕೊರತೆ ಪ್ರಸ್ತಾವ

ಸಂಬೇಗೌಡನದೊಡ್ಡಿ: ವಿಶೇಷ ಗ್ರಾಮ ಸಭೆ

​ಪ್ರಜಾವಾಣಿ ವಾರ್ತೆ
Published 8 ಡಿಸೆಂಬರ್ 2025, 2:07 IST
Last Updated 8 ಡಿಸೆಂಬರ್ 2025, 2:07 IST
ಕನಕಪುರ ಸಂಬೇಗೌಡನದೊಡ್ಡಿ ಗ್ರಾಮದಲ್ಲಿ ವಿಶೇಷ ಗ್ರಾಮ ಸಭೆಯಲ್ಲಿ ಸಾರ್ವಜನಿಕರು ಸಮಸ್ಯೆಗಳ ಬಗ್ಗೆ ಪ್ರಸ್ತಾಪಿಸಿದರು
ಕನಕಪುರ ಸಂಬೇಗೌಡನದೊಡ್ಡಿ ಗ್ರಾಮದಲ್ಲಿ ವಿಶೇಷ ಗ್ರಾಮ ಸಭೆಯಲ್ಲಿ ಸಾರ್ವಜನಿಕರು ಸಮಸ್ಯೆಗಳ ಬಗ್ಗೆ ಪ್ರಸ್ತಾಪಿಸಿದರು   

ಕನಕಪುರ: ಸಾತನೂರು ಹೋಬಳಿ ಅರೆಕಟ್ಟೆದೊಡ್ಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸಂಬೇಗೌಡನದೊಡ್ಡಿ ಗ್ರಾಮದಲ್ಲಿ ಗುರುವಾರ ಸಾರ್ವಜನಿಕರ ಕೋರಿಕೆ ಮೇರೆಗೆ ವಿಶೇಷ ಗ್ರಾಮ ಸಭೆ ನಡೆಯಿತು.

ಪಂಚಾಯಿತಿ ಕಾರ್ಯನಿರ್ವಹಣೆಯಲ್ಲಿನ ನ್ಯೂನತೆ, ನರೇಗಾ ಯೋಜನೆ ಅನುಷ್ಠಾನದಲ್ಲಿನ ಅಕ್ರಮ, ಮೂಲಸೌಕರ್ಯದ ಕೊರತೆ ಮತ್ತಿತರ ಸಮಸ್ಯೆಗಳ ಬಗ್ಗೆ ಗ್ರಾಮಸ್ಥರು ಆರೋಪ ಮಾಡಿದರು.

ಗ್ರಾಮಸ್ಥರಾದ ಕಿರಣ್, ಲೋಕೇಶ್, ರಾಜು ಮತ್ತು ವೆಂಕಟೇಶ್ ಮಾತನಾಡಿ, ನಿವೇಶನಗಳ ಇ-ಖಾತೆಗಾಗಿ ಸಂಪೂರ್ಣ ಕಂದಾಯ ವಸೂಲು ಮಾಡಿದರೂ ಇ-ಖಾತೆ ನೀಡಿಲ್ಲ. ಸರ್ಕಾರಿ ಶಾಲೆಯ ಇ-ಖಾತೆ ಕೂಡ ಒಂದೂವರೆ ವರ್ಷದ ನಂತರವೂ ಮಾಡಿ ಕೊಡಲಾಗಿಲ್ಲ ಎಂದು ಟೀಕಿಸಿದರು.

ADVERTISEMENT

ಹಳ್ಳದ ಅಭಿವೃದ್ಧಿ ಕಾಮಗಾರಿಗೆ ಎರಡು ಬಾರಿ ಹಣ ಬಿಡುಗಡೆ ಮಾಡಲಾಗಿದೆ. ಚರಂಡಿ ಸ್ವಚ್ಛತೆ ಹಳೆ ಫೋಟೊ ಹಾಕಿ ಹಣ ಪಡೆದುಕೊಳ್ಳಲಾಗಿದೆ ಎಂದು ಆರೋಪಿಸಿದರು. ಜಲ ಜೀವನ ಮಿಷನ್ ಕಾಮಗಾರಿಯನ್ನು ಕ್ರಮಬದ್ಧವಾಗಿ ಮಾಡಿಲ್ಲ ಮತ್ತು ಕಳಪೆ ಗುಣಮಟ್ಟದ ಕೆಲಸ ಮಾಡಲಾಗಿದೆ. ತನಿಖೆ ನಡೆಸಿ ಕ್ರಮ ತೆಗೆದುಕೊಳ್ಳಬೇಕೆಂದು ಒತ್ತಾಯಿಸಿದರು.

ಸರ್ವೆ ನಂಬರ್ 87ರಲ್ಲಿರುವ 121 ಎಕರೆ ಸರ್ಕಾರಿ ಗೋಮಾಳವನ್ನು ರಕ್ಷಿಸಬೇಕು. ಅಲ್ಲಿ ಕಿರು ಅರಣ್ಯ ಅಥವಾ ಹುಲ್ಲುಗಾವಲು ಅಭಿವೃದ್ಧಿ ಮಾಡಬೇಕೆಂದು ಒತ್ತಾಯಿಸಿದರು. ಸ್ಮಶಾನ ಅಭಿವೃದ್ಧಿ ಕಾರ್ಯ ಅರ್ಧದಲ್ಲೇ ನಿಂತು ಹೋಗಿದೆ. ಅದನ್ನು ಪೂರ್ಣಗೊಳಿಸಲು ಅಥವಾ ತಂತಿ ಬೇಲಿ ಹಾಕಿ ರಕ್ಷಿಸಲು ಬೇಡಿಕೆ ಸಲ್ಲಿಸಿದರು.

ಗ್ರಾಮದಲ್ಲಿ ಕೋತಿಗಳ ಹಾವಳಿ ಮತ್ತು ಕುಡಿಯುವ ನೀರು ಸರಬರಾಜಿನ ತೀವ್ರ ಸಮಸ್ಯೆಗಳ ಬಗ್ಗೆ ಪ್ರಸ್ತಾಪಿಸಿದರು. ಪೈಪ್‌ಲೈನ್‌ ವ್ಯವಸ್ಥೆ ವೈಜ್ಞಾನಿಕವಲ್ಲದ ಕಾರಣ ತಗ್ಗು ಪ್ರದೇಶಗಳಿಗೆ ನೀರು ಹರಿದರೆ ಎತ್ತರದ ಪ್ರದೇಶದ ಮನೆಗಳಿಗೆ ನೀರು ಸಿಗುತ್ತಿಲ್ಲ. ಓವರ್ ಹೆಡ್ ಟ್ಯಾಂಕ್‌ನಲ್ಲಿ ನೀರು ಶೇಕರಣೆ ಆಗುತ್ತಿಲ್ಲ ಎಂದು ದೂರಿದರು. 

ಗ್ರಾಮದ ಸಮೀಪದ ಕೋಳಿ ಸಾಕಾಣಿಕೆಯಿಂದ ನೊಣಗಳ ಹಾವಳಿ ಹೆಚ್ಚಾಗಿ ಆರೋಗ್ಯಕ್ಕೆ ಹಾನಿಯಾಗುತ್ತಿದೆ ಎಂದು ದೂರಿದರು. 

ಪ್ರಭಾರ ಪಿಡಿಒ ರಮೇಶ್, ಗ್ರಾಮಸ್ಥರ ಎಲ್ಲ ಸಮಸ್ಯೆ ಬಗೆಹರಿಸಲಾಗುವುದು ಎಂದರು. 

ಗ್ರಾಮ ಪಂಚಾಯಿತಿ ಅಧ್ಯಕ್ಷೆ ಗೌರಮ್ಮ, ಕರ ವಸೂಲಿದಾರ ಗುಣಶೇಖರ್ ಮತ್ತು ಗ್ರಾಮಸ್ಥರು ಸಭೆಯಲ್ಲಿ ಉಪಸ್ಥಿತರಿದ್ದರು.

ತಾಲ್ಲೂಕಿನ ಸಾತನೂರು ಹೋಬಳಿ ಅರೆಕಟ್ಟೆದೊಡ್ಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸಂಬೇಗೌಡನ ದೊಡ್ಡಿ ಗ್ರಾಮದಲ್ಲಿ ಸಾರ್ವಜನಿಕರ ಕೋರಿಕೆ ಮೇರೆಗೆ ಗುರುವಾರ ವಿಶೇಷ ಗ್ರಾಮ ಸಭೆ ನಡೆಯಿತು.

ಗ್ರಾಮ ಸಭೆ ಪ್ರಾರಂಭವಾಗುತ್ತಿದ್ದಂತೆ ಸಾರ್ವಜನಿಕರು ಪಂಚಾಯಿತಿಯಲ್ಲಿನ ಲೋಪ ದೋಷ, ನರೇಗಾ ಅನುಷ್ಠಾನದಲ್ಲಿ ಆಗಿರುವ ಅಕ್ರಮ, ಗ್ರಾಮದಲ್ಲಿ ಮೂಲಸೌಕರ್ಯಗಳ ಕೊರತೆ ಮತ್ತು ಸಮಸ್ಯೆಗಳ ಬಗ್ಗೆ ಆರೋಪದ ಮಳೆ ಸುರಿಸಿದರು.

ಗ್ರಾಮಸ್ಥರಾದ ಕಿರಣ್, ಲೋಕೇಶ್, ರಾಜು, ವೆಂಕಟೇಶ್ ಮಾತನಾಡಿ ನಿವೇಶನಗಳಿಗೆ ಈ ಖಾತೆ ಮಾಡಿ ಕೊಡುವುದಾಗಿ ಸಂಪೂರ್ಣ ಕಂದಾಯವನ್ನು ಕಟ್ಟಿಸಿಕೊಳ್ಳಲಾಗಿದೆ, ಈವರೆಗೂ ಇ-ಖಾತೆ ಮಾಡಿಕೊಟ್ಟಿಲ್ಲ, ಸರ್ಕಾರಿ ಶಾಲೆಯ ಇ-ಖಾತೆಯನ್ನು ಒಂದೂವರೆ ವರ್ಷ ಆದರೂ ಮಾಡಿಕೊಟ್ಟಿಲ್ಲ, ಅದಕ್ಕೂ ಲಂಚ ಕೊಡಬೇಕಾ ಎಂದು ಕಿಡಿಕಾರಿದರು.

ಹಳ್ಳದ ಅಭಿವೃದ್ಧಿಯ ಒಂದೇ ಕಾಮಗಾರಿಗೆ ಎರಡು ಬಾರಿ ಹಣ ಬಿಡುಗಡೆ ಮಾಡಿದ್ದಾರೆ, ಚರಂಡಿ ಸ್ವಚ್ಛತೆ ಮಾಡಿದ್ದೇವೆ ಎಂದು ಹಳೇ ಫೋಟೋ ಹಾಕಿ ಹಣ ಬಿಡುಗಡೆ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿದರು.

ಜಲಜೀವನ್ ಮಿಷನ್ ಕಾಮಕಾರಿಯನ್ನು ವ್ಯವಸ್ಥಿತವಾಗಿ ಮಾಡಿಲ್ಲ, ಕಳಪೆ ಕಾಮಗಾರಿ ಮಾಡಿ ಕೈ ತೊಳೆದುಕೊಂಡಿದ್ದಾರೆ. ಇದರ ಬಗ್ಗೆ ತನಿಖೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಸರ್ವೆ ನಂಬರ್ 87ರಲ್ಲಿ 121 ಎಕರೆ ಸರ್ಕಾರಿ ಗೋಮಾಳ ಇದೆ, ಒತ್ತುವರಿಯಾಗದಂತೆ ರಕ್ಷಣೆ ಮಾಡಿ, ಅಲ್ಲಿ ಕಿರು ಅರಣ್ಯ ಅಥವಾ ರಾಸುಗಳಿಗೆ ಮೇವಿಗೆ ಅನುಕೂಲವಾಗುವಂತೆ ಹುಲ್ಲುಗಾವಲು ನಿರ್ಮಾಣ ಮಾಡಬೇಕು. ಸ್ಮಶಾನ ಅಭಿವೃದ್ಧಿ ಕಾಮಗಾರಿ ಅರ್ಧಕ್ಕೆ ಸ್ಥಗಿತಗೊಂಡಿದ್ದು ಅದನ್ನು ಪೂರ್ಣಗೊಳಿಸಿ, ಇಲ್ಲದಿದ್ದರೆ ಒತ್ತುವರಿಯಾಗದಂತೆ ತಂತಿ ಬೇಲಿ ಹಾಕಿ ರಕ್ಷಣೆ ಮಾಡಬೇಕು ಎಂದು ಒತ್ತಾಯಿಸಿದರು.

ಗ್ರಾಮದಲ್ಲಿ ಕೋತಿಗಳ ಹಾವಳಿ ಮಿತಿಮೀರಿದೆ, ಕುಡಿಯುವ ನೀರು ಮತ್ತು ದಿನಬಳಕೆ ನೀರು ಪೂರೈಕೆಯಲ್ಲಿ ಬಹಳ ಸಮಸ್ಯೆಗಳಿವೆ, ಅವೈಜ್ಞಾನಿಕವಾಗಿ ಪೈಪ್ ಲೈನ್ ಅಳವಡಿಸಿದ್ದು ತಗ್ಗು ಪ್ರದೇಶಗಳಿಗೆ ನೀರು ಹರಿದರೆ, ಎತ್ತರದ ಪ್ರದೇಶದಲ್ಲಿರುವ ಮನೆಗಳಿಗೆ ನೀರು ಪೂರೈಕೆಯಾಗುತ್ತಿಲ್ಲ. ಓವರ್ ಹೆಡ್ ಟ್ಯಾಂಕ್ ನಲ್ಲಿ ನೀರು ಶೇಖರಣೆ ಮಾಡುತ್ತಿಲ್ಲ ಎಂದು ದೂರಿದರು.

ಕುಡಿಯುವ ನೀರು ಬಳಕೆಗೆ ಯೋಗ್ಯವಾಗಿಲ್ಲ, ಅದನ್ನು ಪರೀಕ್ಷೆಗೆ ಒಳಪಡಿಸಬೇಕು. ಗ್ರಾಮದಲ್ಲಿ ನೀರಿನ ಸಮಸ್ಯೆ ಬಹಳಷ್ಟಿದೆ ಅಧಿಕಾರಿಗಳು ವಿಶೇಷ ಗಮನಹರಿಸಿ ಪ್ರತಿ ಮನೆಗಳಿಗೂ ಕಾವೇರಿ ನೀರು ಪೂರೈಕೆಯಾಗುವಂತೆ ಕ್ರಮವಹಿಸಬೇಕು ಎಂದು ಒತ್ತಾಯಿಸಿದರು.

ಗ್ರಾಮದ ಸಮೀಪದಲ್ಲಿ ಕೋಳಿ ಸಾಕಾಣಿಕೆ ಮಾಡುತ್ತಿದ್ದಾರೆ, ಇದರಿಂದ ಗ್ರಾಮದಲ್ಲಿ ನೊಣಗಳ ಕಾಟ ಹೆಚ್ಚಾಗಿದ್ದು ಗ್ರಾಮಸ್ಥರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದೆ. ಗ್ರಾಮದ ಸಮೀಪದಲ್ಲಿ ಕೋಳಿ ಸಾಕಾಣಿಕೆ ಮಾಡಲು ಅವಕಾಶವಿಲ್ಲ, ಆದರೂ ಸಹ ಅಧಿಕಾರಗಳು ಅದರ ಬಗ್ಗೆ ಯಾವುದೇ ಕ್ರಮ ಕೈಗೊಂಡಿಲ್ಲ, ಅವರಿಗೆ ಕೂಡಲೇ ನೋಟಿಸ್ ಕೊಟ್ಟು ಅದನ್ನು ತೆರವುಗೊಳಿಸಬೇಕು ಎಂದು ಅಗ್ರಹಿಸಿದರು.

ಈ ಹಿಂದೆ ಇದ್ದ ಅಭಿವೃದ್ಧಿ ಅಧಿಕಾರಿ ಗ್ರಾಮಕ್ಕೆ ಅಗತ್ಯ ಮೂಲಸೌಕರ್ಯ ಕಲ್ಪಿಸಲು ವಿಫಲರಾಗಿದ್ದಾರೆ. ಗ್ರಾಮಸ್ಥರಿಗೆ ಅವರಿಂದ ಯಾವುದೇ ಪ್ರಯೋಜನ ಆಗಿಲ್ಲ, ಇನ್ನಾದರೂ ಅಧಿಕಾರಿಗಳು ಎಚ್ಚೆತ್ತುಕೊಂಡು ಹಂತ ಹಂತವಾಗಿ ಸಮಸ್ಯೆಗಳನ್ನು ಬಗೆಹರಿಸಿ ಗ್ರಾಮಕ್ಕೆ ಅಗತ್ಯ ಸೌಕರ್ಯ ಕಲ್ಪಿಸಬೇಕು ಎಂದು ಒತ್ತಾಯಿಸಿದರು.

ಗ್ರಾಮ ಪಂಚಾಯ್ತಿ ಸದಸ್ಯ ಶಿವರಾಮು ಮಾತನಾಡಿ ಪ್ರತಿಯೊಬ್ಬರಿಗೂ ಇ-ಖಾತೆ ಮಾಡಕೊಡಲು ಡ್ರೋನ್ ಸರ್ವೆ ಮಾಡಲಾಗಿತ್ತು, ಆದರೆ ಡ್ರೋನ್ ಸರ್ವೆಯಲ್ಲಿ ಆಸ್ತಿಗಳ ವಿಸ್ತೀರ್ಣ ಬಹಳ ವ್ಯತ್ಯಾಸ ಆಗಿದೆ, ಹಾಗಾಗಿ ಇ-ಖಾತೆ ಕೊಡಲು ಸಾಧ್ಯವಾಗಿಲ್ಲ. ಗ್ರಾಮದಲ್ಲಿ ನೀರಿನ ಸಮಸ್ಯೆ ಇರುವ ಬಗ್ಗೆ ಇಲ್ಲಿನ ನೀರು ಗಂಟಿ ನನ್ನ ಗಮನಕ್ಕೆ ತಂದಿಲ್ಲ ಹಾಗಾಗಿ ಸಮಸ್ಯೆ ಆಗಿದೆ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸುವುದಾಗಿ ತಿಳಿಸಿದರು.

ಪ್ರಭಾರ ಪಿಡಿಒ ರಮೇಶ್ ಮಾತನಾಡಿ ಗ್ರಾಮಸ್ತರ ಎಲ್ಲಾ ಸಮಸ್ಯೆಗಳನ್ನು ಆಲಿಸಿದ್ದೇನೆ, ನಮ್ಮ ಹಂತದಲ್ಲಿ ಬಗೆಹರಿಯುವಂತ ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಅಗತ್ಯ ಕ್ರಮ ತೆಗೆದುಕೊಳ್ಳುತ್ತೇವೆ, ಅದಕ್ಕೆ ಗ್ರಾಮಸ್ಥರು ಸಹಕಾರ ಕೊಡಬೇಕು ಎಂದು ಮನವಿ ಮಾಡಿದರು.

ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಗೌರಮ್ಮ, ಕರ ವಸೂಲಿಗಾರ ಗುಣಶೇಖರ್ , ಗ್ರಾಮಸ್ಥರಾದ ಸುರೇಶ್, ಚಿಕ್ಕಣ್ಣ, ಶಿವಗಿರಿ, ಕಿರಣ್, ಲೋಕೇಶ್, ತಿಮ್ಮರಾಜು, ಪುಟ್ಟಸ್ವಾಮಿಗೌಡ, ಶಿವ ಗೂಳಿಗೌಡ, ರವೀಶ್, ರಾಜು ಗ್ರಾಮ ಸಭೆಯಲ್ಲಿ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.