ADVERTISEMENT

ಹೊತ್ತಿ ಉರಿದ ಎಲೆಕ್ಟ್ರಿಕ್ ಸ್ಕೂಟರ್

​ಪ್ರಜಾವಾಣಿ ವಾರ್ತೆ
Published 8 ಜುಲೈ 2025, 2:30 IST
Last Updated 8 ಜುಲೈ 2025, 2:30 IST
ರಾಮನಗರ ಹೊರವಲಯದ ಕುಂಬಾಪುರ ಗೇಟ್‌ ಬಳಿ ಎಲೆಕ್ಟ್ರಿಕ್‌ ಸ್ಕೂಟರ್‌ನಲ್ಲಿ ಏಕಾಏಕಿ ಹೊಗೆ ಬಂದು ಬೆಂಕಿ ಕಾಣಿಸಿಕೊಂಡು ಹೊತ್ತಿ ಉರಿಯಿತು
ರಾಮನಗರ ಹೊರವಲಯದ ಕುಂಬಾಪುರ ಗೇಟ್‌ ಬಳಿ ಎಲೆಕ್ಟ್ರಿಕ್‌ ಸ್ಕೂಟರ್‌ನಲ್ಲಿ ಏಕಾಏಕಿ ಹೊಗೆ ಬಂದು ಬೆಂಕಿ ಕಾಣಿಸಿಕೊಂಡು ಹೊತ್ತಿ ಉರಿಯಿತು   

ರಾಮನಗರ: ನಗರದ ಹೊರವಲಯದ  ತಾಲ್ಲೂಕಿನ ಕುಂಬಾಪುರ ಗೇಟ್‌ ಬಳಿಯ ಬೆಂಗಳೂರು–ಮೈಸೂರು ಹಳೆ ಹೆದ್ದಾರಿಯಲ್ಲಿ ಭಾನುವಾರ ರಾತ್ರಿ ಸಂಜಯ್ ಎಂಬುವವರ ಓಲಾ ಎಲೆಕ್ಟ್ರಿಕ್‌ ಸ್ಕೂಟರ್‌ನಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡು ಹೊತ್ತಿ ಉರಿದಿದೆ.

ಜಿಲ್ಲಾಸ್ಪತ್ರೆಯಲ್ಲಿ ಕೆಲಸ ಮಾಡುವ ಚನ್ನಪಟ್ಟಣ ತಾಲ್ಲೂಕಿನ ಕುಕ್ಕೂರಿನ ಸಂಜಯ್ ಅವರು, ಊರಿನಿಂದ ರಾತ್ರಿ 7 ಗಂಟೆ ಸುಮಾರಿಗೆ ರಾಮನಗರಕ್ಕೆ ಸ್ಕೂಟರ್‌ನಲ್ಲಿ ಬರುತ್ತಿದ್ದರು. ಕುಂಬಾಪುರ ಗೇಟ್ ಬಳಿ ಸ್ಕೂಟರ್‌ ಇದ್ದಕ್ಕಿದ್ದಂತೆ ಆಫ್ ಆಯಿತು. ಸಂಜಯ್ ಅವರು ಸ್ಟಾರ್ಟ್ ಮಾಡಲು ಯತ್ನಿಸುತ್ತಿದ್ದಾಗ ಹೊಗೆ ಬರಲಾರಂಭಿಸಿತು.

ಅದಾದ ಕೆಲವೇ ಕ್ಷಣಗಳಲ್ಲಿ ಬೆಂಕಿ ಹೊತ್ತಿಕೊಂಡು ಇಡೀ ಸ್ಕೂಟರ್‌ ಸುಟ್ಟು ಹೋಯಿತು. ಸಂಜಯ್ ಹಾಗೂ ರಸ್ತೆ ಬಳಿ ಇದ್ದ ಸ್ಥಳೀಯರು ಬೆಂಕಿ ನಂದಿಸಲು ಯತ್ನಿಸಿದರೂ ಸಾಧ್ಯವಾಗಲಿಲ್ಲ. ಘಟನೆ ಕುರಿತು ಸಂಜಯ್ ಅವರು ನೀಡಿದ ದೂರಿನ ಮೇರೆಗೆ ರಾಮನಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ADVERTISEMENT
ರಾಮನಗರ ಹೊರವಲಯದ ಕುಂಬಾಪುರ ಗೇಟ್‌ ಬಳಿ ಸಂಜಯ್ ಎಂಬುವರಿಗೆ ಸೇರಿದ ಎಲೆಕ್ಟ್ರಿಕ್‌ ಸ್ಕೂಟರ್‌ನಲ್ಲಿ ಏಕಾಏಕಿ ಹೊಗೆ ಬಂದು ಬೆಂಕಿ ಕಾಣಿಸಿಕೊಂಡು ಹೊತ್ತಿ ಉರಿಯಿತು
ರಾಮನಗರ ಹೊರವಲಯದ ಕುಂಬಾಪುರ ಗೇಟ್‌ ಬಳಿ ಸಂಜಯ್ ಎಂಬುವರಿಗೆ ಸೇರಿದ ಎಲೆಕ್ಟ್ರಿಕ್‌ ಸ್ಕೂಟರ್‌ನಲ್ಲಿ ಏಕಾಏಕಿ ಹೊಗೆ ಬಂದು ಬೆಂಕಿ ಕಾಣಿಸಿಕೊಂಡು ಹೊತ್ತಿ ಉರಿಯಿತು
ರಾಮನಗರ ಹೊರವಲಯದ ಕುಂಬಾಪುರ ಗೇಟ್‌ ಬಳಿ ಎಲೆಕ್ಟ್ರಿಕ್‌ ಸ್ಕೂಟರ್‌ನಲ್ಲಿ ಏಕಾಏಕಿ ಹೊಗೆ ಬಂದು ಬೆಂಕಿ ಕಾಣಿಸಿಕೊಂಡು ಹೊತ್ತಿ ಉರಿಯಿತು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.