ADVERTISEMENT

ಮಾಗಡಿ | ಚಿರತೆ ದಾಳಿ: ವ್ಯಕ್ತಿಗೆ ಗಾಯ

​ಪ್ರಜಾವಾಣಿ ವಾರ್ತೆ
Published 19 ಫೆಬ್ರುವರಿ 2025, 13:33 IST
Last Updated 19 ಫೆಬ್ರುವರಿ 2025, 13:33 IST
ಮಾಗಡಿ ತಾಲ್ಲೂಕಿನ ಹೂಜಗಲ್‌ನಲ್ಲಿ ಚಿರತೆ ದಾಳಿಗೆ ಗುರಿಯಾಗಿರುವ ಕುರಿ
ಮಾಗಡಿ ತಾಲ್ಲೂಕಿನ ಹೂಜಗಲ್‌ನಲ್ಲಿ ಚಿರತೆ ದಾಳಿಗೆ ಗುರಿಯಾಗಿರುವ ಕುರಿ   

ಮಾಗಡಿ: ತಾಲ್ಲೂಕಿನ ಹೂಜಗಲ್ ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ಚಿರತೆ ಕಾಟ ಹೆಚ್ಚಾಗಿದ್ದು, ವ್ಯಕ್ತಿ ಹಾಗೂ ಜಾನುವಾರುಗಳ ಮೇಲೆ ದಾಳಿ ನಡೆಸುತ್ತಿದ್ದು ಜನರು ಆತಂಕದಲ್ಲಿದ್ದಾರೆ.

ಮೂರು ದಿನದ ಹಿಂದೆ ಗುಡ್ಡಯ್ಯ ಎಂಬುವವರು ಜಮೀನಿನಲ್ಲಿ ಕೆಲಸ ಮಾಡುವಾಗ ಅವರ ಮೇಲೆ ಚಿರತೆ ದಾಳಿ ನಡೆಸಿ ಗಂಭೀರ ಗಾಯಗೊಳಿಸಿತ್ತು. ನಂತರ ಅವರಿಗೆ ಚಿಕಿತ್ಸೆ ಕೊಡಿಸಿದ್ದು, ಚೇತರಿಸಿಕೊಂಡಿದ್ದಾರೆ. ಜತೆಗೆ ಅಂದೇ ಜಯಮ್ಮ ಮತ್ತು ವೆಂಕಟಾಚಲಯ್ಯ ಎಂಬುವವರಿಗೆ ಸೇರಿದ ಕುರಿ ಮತ್ತು ಮೇಕೆ ದಾಳಿ ನಡೆಸಿ ಮೇಕೆಯನ್ನು ಹೊತ್ತೊಯ್ದಿದೆ. ನಂತರ ಮಂಗಳವಾರ ರಾತ್ರಿ ಸಹ ಕುರಿ ಮೇಲೆ ದಾಳಿ ನಡೆಸಿದ್ದು, ಗ್ರಾಮಸ್ಥರ ಕೂಗಾಟದಿಂದ ಹೆದರಿ ಚಿರತೆ ಕುರಿಯನ್ನು ಸ್ಥಳದಲ್ಲೇ ಬಿಟ್ಟು ಓಡಿ ಹೋಗಿದೆ. ಹಾಗಾಗಿ ಅರಣ್ಯ ಇಲಾಖೆಯವರು ಬೋನನ್ನು ಇಟ್ಟು ಚಿರತೆಯನ್ನು ಸೆರೆ ಹಿಡಿಯಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ಚಿರತೆ ದಾಳಿ ಬಗ್ಗೆ ಅರಣ್ಯ ಇಲಾಖೆ ಸಿಬ್ಬಂದಿ ಗಮನಕ್ಕೆ ತಂದರೂ ಚಿರತೆ ಸೆರೆಗೆ ಯಾವ ಕ್ರಮವೂ ವಹಿಸಿಲ್ಲ ಎಂದು ಗ್ರಾಮಸ್ಥರು ಆರೋಪಿಸಿದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.