ADVERTISEMENT

ರಾಮನಗರ | ಪ್ರಗತಿಪರ ರೈತನಿಗೆ ಸತ್ಕಾರ

​ಪ್ರಜಾವಾಣಿ ವಾರ್ತೆ
Published 22 ನವೆಂಬರ್ 2025, 2:25 IST
Last Updated 22 ನವೆಂಬರ್ 2025, 2:25 IST
ರಾಮನಗರದ ಪಟೇಲ್ ಆಂಗ್ಲಶಾಲೆಯಲ್ಲಿ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್‌ ವತಿಯಿಂದ ಅತ್ಯುತ್ತಮ ಪ್ರಗತಿಪರ ರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತ ರೈತ ನಂಜುಂಡಿ ಬಾನಂದೂರು ಅವರನ್ನು ಸನ್ಮಾನಿಸಲಾಯಿತು. ಸಾವಯವ ಕೃಷಿಕ ಎನ್.ಆರ್.ಸುರೇಂದ್ರ ಇತರರು ಹಾಜರಿದ್ದರು
ರಾಮನಗರದ ಪಟೇಲ್ ಆಂಗ್ಲಶಾಲೆಯಲ್ಲಿ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್‌ ವತಿಯಿಂದ ಅತ್ಯುತ್ತಮ ಪ್ರಗತಿಪರ ರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತ ರೈತ ನಂಜುಂಡಿ ಬಾನಂದೂರು ಅವರನ್ನು ಸನ್ಮಾನಿಸಲಾಯಿತು. ಸಾವಯವ ಕೃಷಿಕ ಎನ್.ಆರ್.ಸುರೇಂದ್ರ ಇತರರು ಹಾಜರಿದ್ದರು   

ರಾಮನಗರ: ‘ರೈತ ತಾನು ಬೆಳೆದ ಬೆಳೆಗೆ ತಾನೇ ದರ ನಿಗದಿ ಮಾಡಿಕೊಳ್ಳುವ ಕಾಲ ಬಂದಿದೆ’ ಎಂದು ರಾಷ್ಟ್ರೀಯ ಪ್ರಶಸ್ತಿ ವಿಜೇತ ರೈತ ನಂಜುಂಡಿ ಬಾನಂದೂರು ಹೇಳಿದರು.

ಶುಕ್ರವಾರ ನಗರದ ಪಟೇಲ್ ಆಂಗ್ಲ ಶಾಲೆಯಲ್ಲಿ ನಡೆದ ಅಭಿನಂದನಾ ಕಾರ್ಯಕ್ರಮದಲ್ಲಿ ತಿಳಿಸಿದರು. ‘ಸಾಮಾನ್ಯವಾಗಿ ರಾಗಿ ಬೆಲೆ ₹45-50 ಇದೆ. ಆದರೆ, ನಾನು ಸಾವಯವ ಕೃಷಿ ಮಾಡಿ ಬೆಳೆದ ರಾಗಿಯನ್ನು ₹85ಕ್ಕೂ ಹೆಚ್ಚಿಗೆ ಮಾರುತ್ತೇನೆ. ನನ್ನ ಬೆಳೆಗೆ ನಾನೇ ದರ ನಿಗದಿ ಮಾಡುತ್ತೇನೆ. ರಾಜ್ಯದ 12 ಜಿಲ್ಲೆಗಳಿಗೆ ಸರಬರಾಜು ಮಾಡುತ್ತೇನೆ’ ಎಂದರು.

ಸಾವಯವ ಕೃಷಿಕ ಎನ್.ಆರ್.ಸುರೇಂದ್ರ, ಭೂಮಿ ನಮಗೆ ಎಲ್ಲವನ್ನೂ ನೀಡಿದೆ. ಅದನ್ನು ಉಳಿಸುವುದು ಕರ್ತವ್ಯ. ಸುತ್ತಲೂ ಆಹಾರ ಮತ್ತು ಔಷಧ ಸಸ್ಯ ಬೆಳೆಸಿ ಆರೋಗ್ಯ ಸುಧಾರಿಸಬಹುದು ಎಂದರು.

ADVERTISEMENT

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಬಿ.ಟಿ.ನಾಗೇಶ್, ನಂಜುಂಡಿ ಅವರ ಸಾಧನೆ ಶ್ಲಾಘಿಸಿದರು.

ಬಿ.ಎಂ.ಕುಮಾರ್, ಬಿ.ಪಿ.ಬಾನುಪ್ರಕಾಶ್, ಬಿ.ಪಿ.ಕೇಶವಮೂರ್ತಿ, ಬಿ.ಟಿ.ದಿನೇಶ್ ಬಿಳಗುಂಬ, ಡಾ.ಎಂ. ಬೈರೇಗೌಡ ಸೇರಿದಂತೆ ಅನೇಕರು ಭಾಗವಹಿಸಿದ್ದರು.

ರೈತ ತಾನು ಬೆಳೆದ ಬೆಳೆಗೆ ತಾನೇ ದರ ನಿಗದಿ ಮಾಡಿಕೊಳ್ಳುವ ಕಾಲ ಬಂದಾಗಿದೆ ಎಂದು 2025ನೇ ಸಾಲಿನ ಅತ್ಯುತ್ತಮ ಪ್ರಗತಿಪರ ರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತ ರೈತ ನಂಜುಂಡಿ ಬಾನಂದೂರು ಹೇಳಿದರು.
ನಗರದ ಪಟೇಲ್ ಆಂಗ್ಲಶಾಲೆಯಲ್ಲಿ ಅವರು ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಶುಕ್ರವಾರ ಹಮ್ಮಿಕೊಂಡಿದ್ದ ಅಭಿನಂದನೆ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.


ರಾಗಿ ಬೆಲೆ ಸಾರ್ವಜನಿಕರಿಗೆ ರೂ. 45 ರಿಂದ ರೂ. 50 ವರೆಗೆ ಇದೆ. ಆದರೆ ನಾನು ಬೆಳೆದ ರಾಗಿಯನ್ನು ರೂ. 85ಕ್ಕೂ ಹೆಚ್ಚು ಬೆಲೆಗೆ ಮಾರಾಟ ಮಾಡುತ್ತಿದ್ದೇನೆ. ನನ್ನ ಬೆಳೆಗೆ ನಾನೆ ದರ ನಿಗದಿ ಮಾಡುತ್ತಿದ್ದೇನೆ. ಈ ಹಿನ್ನೆಲೆಯಲ್ಲಿ ಪ್ರಯೋಗಶೀಲನಾಗಿ ಸಾವಯವ ಕೃಷಿಯ ಮೂಲಕ ರಾಗಿಯನ್ನು ಬೆಳೆದು ರಾಜ್ಯದ 12 ಜಿಲ್ಲೆಗಳಿಗೆ ಬಿತ್ತನೆ ತಳಿಗಳನ್ನು ನೀಡುತ್ತಿದ್ದೇನೆ ಎಂದು ತಿಳಿಸಿದರು.


ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಸಾವಯವ ಕೃಷಿಕ ಎನ್.ಆರ್. ಸುರೇಂದ್ರ, ಭೂಮಿ ನಮ್ಮ ಬದುಕಿಗೆ ಅಗತ್ಯವಿರುವ ಎಲ್ಲವನ್ನು ನೀಡಿದೆ. ಈ ಸವಲತ್ತುಗಳನ್ನು ಬಳಸಿಕೊಂಡು ಭೂಮಿಯನ್ನು ಉಳಿಸುವ ಕೆಲಸವನ್ನು ಮಾಡಬೇಕಾಗಿದೆ. ಮೊದಲು ಭೂಮಿಯನ್ನು ಉಳಿಸಿಕೊಳ್ಳಲು ಏನು ಮಾಡಬೇಕು ಎಂಬ ನಿಟ್ಟಿನಲ್ಲಿ ನಾವು ಆಲೋಚನೆಯನ್ನೇ ಮಾಡುತ್ತಿಲ್ಲ. ನಮ್ಮ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಆಹಾರ ಪದಾರ್ಥಗಳನ್ನಷ್ಟೇ ಅಲ್ಲ ಅಗತ್ಯ ಔಷಧಿ ಸಸ್ಯಗಳನ್ನು ಬೆಳೆಸಿ ಅವುಗಳ ಸುತ್ತ ಓಡಾಡಿದರೆ ನಮ್ಮ ಆರೋಗ್ಯ ಸುಧಾರಿಸುತ್ತದೆ ಎಂದರು.


ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಬಿ.ಟಿ. ನಾಗೇಶ್ ಮಾತನಾಡಿ, ಪ್ರಕೃತಿಯ ಜೊತೆಗೆ ಜೀವನ ಕಟ್ಟಿಕೊಳ್ಳಬೇಕು. ಕೃಷಿ ನಮ್ಮ ಜೀವನಾಡಿ, ಸಾಧನೆ ಎಂಬುದು ಸಾಧಕರ ಸ್ವತ್ತು. ಈ ಹಿನ್ನೆಲೆಯಲ್ಲಿ ನಂಜುಂಡಿಯವರ ಸಾಧನೆ ಎಲ್ಲರು ಮೆಚ್ಚುವಂತಹದ್ದು ಎಂದು ಶ್ಲಾಘಿಸಿದರು.
ಬಾನಂದೂರು ಎಂಪಿಸಿಎಸ್ ಕಾರ್ಯದರ್ಶಿ ಬಿ.ಎಂ. ಕುಮಾರ್, ಸಮಾಜ ಸೇವಕ ಬಿ.ಪಿ.ಬಾನುಪ್ರಕಾಶ್, ಮಾಜಿ ಗ್ರಾಪಂ ಸದಸ್ಯ ಬಿ.ಪಿ.ಕೇಶವಮೂರ್ತಿ, ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಬಿ.ಟಿ.ದಿನೇಶ್ ಬಿಳಗುಂಬ, ಜಾನಪದ ವಿದ್ವಾಂಸ ಡಾ. ಎಂ. ಬೈರೇಗೌಡ ಮಾತನಾಡಿದರು.


ಜಿಲ್ಲಾ ಕಸಾಪ ಕೋಶಾಧ್ಯಕ್ಷ ರಾಜೇಶ್ ಕವಣಾಪುರ, ತಾಲ್ಲೂಕು ಕಸಾಪ ಕಾರ್ಯದರ್ಶಿ ಕಿರಣ್, ಮಲ್ಲೇಶ್ ನೇಗಿಲಯೋಗಿ, ಸರ್ಕಾರಿ ಪದವಿ ಕಾಲೇಜಿನ ಪ್ರಾಧ್ಯಾಪಕರಾದ ಡಾ.ಭೂಮಿಗೌಡ, ಡಾ.ರಾಜಣ್ಣ, ಇತರರು ಭಾಗವಹಿಸಿದ್ದರು.ಗಾಯಕ ಕೆಂಗಲ್ ವಿನಯ್ ಕುಮಾರ್ ಗಾಯನ ನಡೆಸಿಕೊಟ್ಟರು. ತಾಲ್ಲೂಕು ಕಸಾಪ ಸಂಘಟನಾ ಕಾರ್ಯದರ್ಶಿ ಅರುಣ್ ಅನುಮಾನಹಳ್ಳಿ ನಿರೂಪಿಸಿದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.