ADVERTISEMENT

ಪುನೀತ್‌ ಯುವಜನರ ಕಣ್ಮಣಿ

​ಪ್ರಜಾವಾಣಿ ವಾರ್ತೆ
Published 9 ನವೆಂಬರ್ 2021, 8:05 IST
Last Updated 9 ನವೆಂಬರ್ 2021, 8:05 IST
ಮಾಗಡಿ ಪಟ್ಟಣದ ಕಲ್ಯಾ ಬಾಗಿಲು ಬಳಿ ನಟ ಪುನೀತ್‌ ರಾಜ್‌ಕುಮಾರ್‌ ಅವರ ಪುಣ್ಯತಿಥಿ ಅಂಗವಾಗಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಲಾಯಿತು
ಮಾಗಡಿ ಪಟ್ಟಣದ ಕಲ್ಯಾ ಬಾಗಿಲು ಬಳಿ ನಟ ಪುನೀತ್‌ ರಾಜ್‌ಕುಮಾರ್‌ ಅವರ ಪುಣ್ಯತಿಥಿ ಅಂಗವಾಗಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಲಾಯಿತು   

ಮಾಗಡಿ: ಪಟ್ಟಣದ ಕಲ್ಯಾ ಬಾಗಿಲು ನಾರಸಿಂಹ ಸರ್ಕಲ್‌ನಲ್ಲಿ ಸೋಮವಾರ ಡಾ.ರಾಜ್‌ಕುಮಾರ್‌ ಅಭಿಮಾನಿಗಳ ಸಂಘ, ಪುನೀತ್‌ ರಾಜ್‌ಕುಮಾರ್‌ ಅಭಿಮಾನಿಗಳ ಬಳಗ ಮತ್ತು ತಾಲ್ಲೂಕು ಆರ್ಯ ಈಡಿಗರ ಸಂಘದಿಂದ ನಟ ಪುನೀತ್‌ ರಾಜ್‌ಕುಮಾರ್‌ ಅವರ 11ನೇ ದಿನದ ಪುಣ್ಯತಿಥಿನಡೆಯಿತು.ಬಳಿಕ ಸಾಮೂಹಿಕ ಅನ್ನದಾನನಡೆಯಿತು.

ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯ ಸಿ. ಜಯರಾಮ್‌ ಮಾತನಾಡಿ, ಪುನೀತ್‌ ಅವರಿಗೆ ದೇಹ ದಂಡಿಸುವ ಕಲೆ ಕರಗತವಾಗಿತ್ತು. ಕೊನೆಯ ದಿನದವರೆಗೂ ಫಿಟ್‌ನೆಸ್‌ ಮಂತ್ರ ಮರೆತಿರಲಿಲ್ಲ. ಅವರು ನಾಡಿನ ಯುವಜನತೆಯ ಕಣ್ಮಣಿಯಾಗಿದ್ದಾರೆ. ಅವರ ಆದರ್ಶಗಳನ್ನು ಉಳಿಸಲು ನಾವೆಲ್ಲರೂ ದುಡಿಯೋಣ ಎಂದು ಹೇಳಿದರು.

ಡಾ.ರಾಜ್‌ಕುಮಾರ್‌ ಅಭಿಮಾನಿಗಳ ಸಂಘದ ಅಧ್ಯಕ್ಷ ಗಂಗಣ್ಣ ಮಾತನಾಡಿ, ಕನ್ನಡ ನಾಡಿನ ಮೇರು ನಕ್ಷತ್ರದಂತೆ ಪುನೀತ್‌ ಕಂಗೊಳಿಸುಸುತ್ತಿದ್ದರು ಎಂದುತಿಳಿಸಿದರು.

ADVERTISEMENT

ಹೋರಾಟಗಾರ ದೊಡ್ಡಿಲಕ್ಷ್ಮಣ್‌, ಜಿ.ಪಂ. ಮಾಜಿ ಸದಸ್ಯ ಎಂ.ಕೆ. ಧನಂಜಯ, ತಾ.ಪಂ. ಮಾಜಿ ಅಧ್ಯಕ್ಷ ಕಾಂತರಾಜ್‌, ತಾಲ್ಲೂಕು ಆರ್ಯ ಈಡಿಗರ ಸಂಘದ ಅಧ್ಯಕ್ಷ ಎಂ.ಜಿ. ಗೋಪಾಲ್‌, ಕಾರ್ಯದರ್ಶಿ ಚಂದ್ರಶೇಖರ್‌, ಪುಟ್ಟಸ್ವಾಮಿ, ರೇಣುಕಪ್ಪ, ಎಂ.ಬಿ. ಬಸವರಾಜು, ಸಿದ್ದರಾಜು, ಬಸ್‌ ಏಜೆಂಟ್‌ ವಾಸುದೇವ್‌, ಎಂ.ವೈ. ರೇಣುಕಪ್ಪ, ರಮೇಶ್‌, ಕೃಷ್ಣಪ್ಪ, ಕದಂಬ ಗಂಗರಾಜು, ಶಿವಾನಂದ್‌, ಜ್ಯೋತಿಪಾಳ್ಯ ರಾಮಣ್ಣ, ನಿವೃತ್ತ ಶಿಕ್ಷಕರಾದ ಹನುಮೇಗೌಡ, ಎಲ್‌. ನಂಜಯ್ಯ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.