
ರಾಮನಗರ: ನಗರದ ಛತ್ರದ ಬೀದಿಯಲ್ಲಿರುವ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಮಂಗಳವಾರ ರಾಘವೇಂದ್ರ ಸ್ವಾಮಿಯ 431ನೇ ವರ್ಧಂತಿ ಉತ್ಸವ ಶ್ರದ್ಧಾಭಕ್ತಿಯಿಂದ ಜರುಗಿತು. ಮಠವನ್ನು ತಳಿರು ತೋರಣ ಹಾಗೂ ಹೂಗಳಿಂದ ಮಠವನ್ನು ಅಲಂಕರಿಸಲಾಗಿತ್ತು.
ಉತ್ಸವದ ಪ್ರಯುಕ್ತ ಮಠದಲ್ಲಿ ಬೆಳಿಗ್ಗೆ ಪಂಚಾಮೃತ ಅಭಿಷೇಕ, ಹೂವಿನ ಅಲಂಕಾರ, ಪುಷ್ಪಾರ್ಚನೆ, ಕನಕಾಭಿಷೇಕ, ಭಕ್ತ ಮಂಡಳಿಯಿಂದ ಅಷ್ಟೋತ್ತರ ಪಾರಾಯಣ ನಡೆದವು. ಮಹಾಮಂಗಳಾರತಿ ಬಳಿಕ ಅನ್ನಸಂತರ್ಪಣೆ ನೆರವೇರಿತು. ಸಂಜೆ ವಿದುಷಿ ಸುಜಾತ ಅವರ ಸಂಗೀತ ಕಾರ್ಯಕ್ರಮ ಮತ್ತು ವಿಪ್ರ ಮಹಿಳಾ ಮಂಡಳಿಯಿಂದ ಸಂಗೀತ ಸೇವೆ ಜರುಗಿತು.
ಬಳಿಕ ರಥೋತ್ಸವ, ತೊಟ್ಟಿಲು ಸೇವಾ ಸ್ವಸ್ತಿವಚನ, ಮಹಾ ಮಂಗಳಾರತಿ, ಪ್ರಸಾದ ವಿತರಣೆ ನಡೆಯಿತು. ಮಠದ ವ್ಯವಸ್ಥಾಪಕ ಮದ್ವಾಚಾರ್, ಅರ್ಚಕರಾದ ನರಹರಿ ಆಚಾರ್, ಪ್ರವೀಣ್ ಆಚಾರ್, ಸಿಬ್ಬಂದಿ ಸೀತಾರಾಮ್, ನಾಗೇಂದ್ರ, ಸಂಜಯ್ ಬೇವೂರ್, ಪ್ರಮುಖರಾದ ದೀಪು, ಡಾ. ರಾಘವೇಂದ್ರ, ಪ್ರಭಾಂಜನಾಚಾರ್ ಹಾಗೂ ಇತರರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.