ADVERTISEMENT

ಮಳೆಗೆ ಸಿಲುಕಿ ನೆಲ ಕಚ್ಚಿದ ರಾಗಿ; ಕೊಳೆತ ಕುಂಬಳಕಾಯಿ

ಮಾಗಡಿಯಲ್ಲಿ ಬಹುತೇಕ ಕೆರೆಗಳು ಭರ್ತಿ

​ಪ್ರಜಾವಾಣಿ ವಾರ್ತೆ
Published 16 ನವೆಂಬರ್ 2021, 4:32 IST
Last Updated 16 ನವೆಂಬರ್ 2021, 4:32 IST
ಮಾಗಡಿ ತಾಲ್ಲೂಕಿನಲ್ಲಿ ಸತತವಾಗಿ ಸುರಿದ ಮಳೆಗೆ ಸಿಲುಕಿ ನೆಲಕಚ್ಚಿರುವ ರಾಗಿ ಬೆಳೆಯೊಂದಿಗೆ ರೈತ ಶಿವಣ್ಣ ರಾಘವೇಂದ್ರ
ಮಾಗಡಿ ತಾಲ್ಲೂಕಿನಲ್ಲಿ ಸತತವಾಗಿ ಸುರಿದ ಮಳೆಗೆ ಸಿಲುಕಿ ನೆಲಕಚ್ಚಿರುವ ರಾಗಿ ಬೆಳೆಯೊಂದಿಗೆ ರೈತ ಶಿವಣ್ಣ ರಾಘವೇಂದ್ರ   

ಮಾಗಡಿ: ತಾಲ್ಲೂಕಿನಲ್ಲಿ ಸತತವಾಗಿ ಸುರಿಯುತ್ತಿರುವ ಮಳೆಗೆ ಸಿಲುಕಿ ರಾಗಿಬೆಳೆ ನೆಲ ಕಚ್ಚಿದೆ.

ತಟವಾಳ್‌ ದಾಖಲೆ ಕಾಡುಗೊಲ್ಲರ ಹಟ್ಟಿ, ವಡ್ಡರಪಾಳ್ಯ, ಶ್ಯಾನುಭೋಗನಹಳ್ಳಿ, ಗಡೇಮಾರನಹಳ್ಳಿ, ಕರಲಮಂಗಲ, ಸಾವನದುರ್ಗ, ವೀರೇಗೌಡನ ದೊಡ್ಡಿ, ಮಾನಗಲ್‌, ತೂಬಿನಕೆರೆ, ಸಾತನೂರು, ಕೆಂಪಸಾಗರ, ಕಲ್ಯಾ, ಚಂದೂರಾಯನಹಳ್ಳಿ ಸುತ್ತಲಿನ ಗ್ರಾಮಗಳಲ್ಲಿ ತೆನೆಭರಿತ ರಾಗಿಬೆಳೆ ಮಳೆಗೆ ಸಿಲುಕಿ ನೆಲಕಚ್ಚಿದೆ. ತೆನೆಭರಿತ ಕಟಾವಿಗೆ ಬಂದಿದ್ದ ನೂರಾರು ಎಕೆರೆಯಲ್ಲಿದ್ದ ರಾಗಿ ಫಸಲು ಮಳೆಗೆ ಸಿಲುಕಿ ನಾಶವಾಗಿದೆ ಎಂದು ತಟವಾಳ್‌ ದಾಖಲೆ ಕಾಡುಗೊಲ್ಲರ ಹಟ್ಟಿಯ ಶಿವಣ್ಣ ರಾಘವೇಂದ್ರ ಸಂಕಟ ತೋಡಿಕೊಂಡರು.

ತಾಲ್ಲೂಕಿನಲ್ಲಿ ಸತತವಾಗಿ ಸುರಿಯುತ್ತಿರುವ ಮಳೆಯಿಂದ ಪಟ್ಟಣದ ಗೌರಮ್ಮನ ಕೆರೆ, ಗುಡೇಮಾರನಹಳ್ಳಿ ದೊಡ್ಡಕೆರೆಗಳು ತುಂಬಿ ಕೋಡಿಯಲ್ಲಿ ನೀರು ಹರಿಯುತ್ತಿದೆ.

ADVERTISEMENT

ಸೋಲೂರು ಹೋಬಳಿಯಲ್ಲಿನ ಬಹುತೇಕ ಕೆರೆಗಳು ಭರ್ತಿಯಾಗಿವೆ. ತಿಪ್ಪಸಂದ್ರ, ಕುದೂರು, ಮಾಡಬಾಳ್‌, ಕಸಬಾ ಹೋಬಳಿಯ ಕೆರೆಗಳಲ್ಲಿ ಹೆಚ್ಚಿನ ನೀರು ಸಂಗ್ರಹವಾಗಿದ್ದು, ಇನ್ನೆರಡು ದಿನ ಮಳೆ ಸುರಿದರೆ ಕೋಡಿಯಲ್ಲಿ ನೀರು ಹರಿಯಲಿದೆ. ಸತತವಾಗಿ ಮಳೆಯಿಂದ ತಂಪು ಹವೆ ಇದ್ದು, ನಾಲ್ಕು ದಿನಗಳಿಂದ ಸೂರ್ಯನ ದರ್ಶನವಾಗಿಲ್ಲ. ರೈತರಿಗೆ ಕೆರೆಗಳು ತುಂಬಿರುವುದು ನೋಡಿ ಸಂತೋಷ ಪಟ್ಟರೆ, ರಾಗಿ ಫಸಲು ನೆಲಕ್ಕೆ ಒರಗಿ ಭಾರಿ ನಷ್ಟ ಸಂಭವಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.