ADVERTISEMENT

ರಾಮನಗರ, ಚನ್ನಪಟ್ಟಣ ನಗರಸಭೆ: 62 ವಾರ್ಡುಗಳಲ್ಲಿ ಮತದಾನ

​ಪ್ರಜಾವಾಣಿ ವಾರ್ತೆ
Published 27 ಏಪ್ರಿಲ್ 2021, 5:57 IST
Last Updated 27 ಏಪ್ರಿಲ್ 2021, 5:57 IST
   

ರಾಮನಗರ: ಜಿಲ್ಲೆಯ ರಾಮನಗರ, ಚನ್ನಪಟ್ಟಣ ನಗರಸಭೆಗಳ 62 ವಾರ್ಡುಗಳಿಗೆ ಮಂಗಳವಾರ ಮತದಾನ ನಡೆದಿದೆ.

ಒಟ್ಟು 1.38 ಲಕ್ಷ ಮತದಾರರು ಮತ ಚಲಾವಣೆಯ ಹಕ್ಕು ಹೊಂದಿದ್ದು, 236 ಅಭ್ಯರ್ಥಿಗಳು ಕಣದಲ್ಲಿ ಇದ್ದಾರೆ. 132 ಮತಗಟ್ಟೆಗಳಲ್ಲಿ ಮತದಾನ ನಡೆದಿದ್ದು, 336 ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.

ಬೆಳಿಗ್ಗೆ 9 ಗಂಟೆ ವೇಳೆಗೆ ರಾಮನಗರ ನಗರಸಭೆಯಲ್ಲಿ‌ ಶೇ 7.55 ಹಾಗೂ ಚನ್ನಪಟ್ಟಣ ನಗರಸಭೆಯಲ್ಲಿ ಶೇ 10.55 ರಷ್ಟು ಮತದಾನ ನಡೆದಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.