
ಪ್ರಜಾವಾಣಿ ವಾರ್ತೆಕುದೂರು: ಜೂಜು ಅಡ್ಡೆಯೊಂದರ ಮೇಲೆ ದಾಳಿ ನಡೆಸಿದ ಪೊಲೀಸರು ಐವರು ಜೂಜುಕೋರರನ್ನು ಬಂಧಿಸಿ, ನಾಲ್ಕು ದ್ವಿಚಕ್ರ ವಾಹನ ಹಾಗೂ ನಗದು ವಶಪಡಿಸಿಕೊಂಡಿದ್ದಾರೆ.
ಖಚಿತ ಮಾಹಿತಿಯ ಮೇರೆಗೆ ದಾಳಿ ನಡೆದಿದ್ದು, ತಿಪ್ಪಸಂದ್ರ ಗ್ರಾಮದ ಲಕ್ಷ್ಮಣ, ಗಂಗಾಧರ್, ನೇರಳೆಕೆರೆ ಗ್ರಾಮದ ವೆಂಕಟಾಚಲಯ್ಯ, ರಮೇಶ್, ಅಣ್ಣೇಶಾಸ್ತ್ರಿಪಾಳ್ಯದ ಹುಚ್ಚೇಗೌಡ ಎಂಬುವರನ್ನು ಬಂಧಿಸಲಾಗಿದೆ. ದಾಳಿ ವೇಳೆ ತಿಪ್ಪಸಂದ್ರ ಗ್ರಾಮದ ಸ್ವಾಮಿ ಎಂಬುವರು ತಪ್ಪಿಸಿಕೊಂಡಿದ್ದಾರೆ.
ಬಂಧಿತರಿಂದ ₹ 21,100 ವಶಪಡಿಸಿಕೊಳ್ಳಲಾಗಿದೆ. ವಿಚಾರಣೆ ಕೈಗೊಳ್ಳಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.