
ಪ್ರಜಾವಾಣಿ ವಾರ್ತೆ
ರಾಮನಗರ: ರಾಮನಗರ ನಗರಕ್ಕೆ ನೆಟ್ಕಲ್ ಜಲಾಶಯ ಮೂಲದಿಂದ ಬೆಂಗಳೂರು ಜಲಮಂಡಳಿಯ 5ನೇ ಹಂತದ ಯೋಜನೆಯಡಿ ಕಾವೇರಿಯ ಕಚ್ಚಾ ನೀರು ಪೂರೈಕೆ ಮಾಡಿ, ಟಿ.ಕೆ. ಹಳ್ಳಿಯಲ್ಲಿರುವ ಶುದ್ದೀಕರಣ ಘಟಕದಿಂದ ಶುದ್ಧಿಕರಿಸಿದ ನೀರು ಸರಬರಾಜು ಮಾಡಲಾಗುತ್ತಿದೆ.
ಟಿ.ಕೆ. ಹಳ್ಳಿಯಿಂದ ರಾಮನಗರ ನಗರದವರೆಗಿನ ಕೊಳವೆ ಮಾರ್ಗದಲ್ಲಿ ವಿವಿಧ ಕ್ರಿಯಾತ್ಮಕ ವಾಲ್‌ಗಳನ್ನು ಅಳವಡಿಸುವ ಕಾಮಗಾರಿಗಳನ್ನು ತುರ್ತಾಗಿ ಕೈಗೊಳ್ಳಬೇಕಿದೆ. ಹಾಗಾಗಿ ಫೆ. 20 ಹಾಗೂ 21 ರಂದು ಎರಡು ದಿನ ರಾಮನಗರಕ್ಕೆ ನೀರು ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ.
ಎರಡು ದಿನ ಜನರು ನೀರನ್ನು ಮಿತವಾಗಿ ಬಳಸಿ, ಶೇಖರಿಸಿ ಉಪಯೋಗಿಸಬೇಕು. ಗ್ರಾಹಕರು ರಾಮನಗರ ನಗರಸಭೆ ಹಾಗೂ ಜಲಮಂಡಳಿಯೊಂದಿಗೆ ಸಹಕರಿಸಬೇಕುಎ ಂದು ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಚನ್ನಪಟ್ಟಣ ವಿಭಾಗದ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.