ಕುದೂರು: ಸೋಲೂರು ಹೋಬಳಿಯ ತಟ್ಟೇಕರೆ-ಪಾಲನಹಳ್ಳಿ ರಸ್ತೆಯಲ್ಲಿ ಸೋಮವಾರ ವಿದ್ಯುತ್ ಕಂಬ ಮತ್ತು ಟ್ರಾನ್ಸ್‌ಫಾರ್ಮರ್ ಸಾಗಿಸುತ್ತಿದ್ದ ಟ್ರ್ಯಾಕ್ಟರ್ ಪಲ್ಟಿಯಾಗಿ ಕೂಲಿ ಕಾರ್ಮಿಕನೊಬ್ಬ ಸ್ಥಳದಲ್ಲೇ ಮೃತಪಟ್ಟಿದ್ದಾನೆ.
ಕೊಪ್ಪಳ ಜಿಲ್ಲೆಯ ಕುಕನೂರು ತಾಲ್ಲೂಕಿನ ಚಿಕ್ಕಬಿದನಾಳು ಗ್ರಾಮದ ಪ್ರಶಾಂತ್ (17) ಮೃತ ಕೂಲಿಕಾರ್ಮಿಕ.
ಮಾದಿಗೊಂಡನಹಳ್ಳಿ ಬಳಿಯ ಗೋದಾಮಿನಲ್ಲಿ ವಿದ್ಯುತ್ ಕಂಬ ಮತ್ತು ಟ್ರಾನ್ಸ್‌ಫಾರ್ಮರ್ ಹೇರಿಕೊಂಡ ಟ್ರ್ಯಾಕ್ಟರ್ ಪಾಲನಹಳ್ಳಿ ಕಡೆಗೆ ಹೊರಟಿತ್ತು. ಟ್ರ್ಯಾಕ್ಟರ್ ಚಾಲಕ ಹಾಗೂ ಅತನ ಬಳಿ ಕುಳಿತಿದ್ದ ಶಿವನಪ್ಪ, ಸಂತೋಷ್, ಮಂಜುನಾಥ್ ಎಂಬುವರಿಗೆ ಸಣ್ಣಪುಟ್ಟ ಗಾಯಗಳಾಗಿವೆ.
ಕುದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.