ADVERTISEMENT

ಕನಕಪುರ ನಗರಸಭೆ ಚುಕ್ಕಾಣಿ ಕಾಂಗ್ರೆಸ್‌ ಕೈಗೆ

ಲಕ್ಷ್ಮಿದೇವಮ್ಮ ಮೊದಲ ಮಹಿಳಾ ಅಧ್ಯಕ್ಷೆ, ಸಾದಿಕ್‌ ಉಪಾಧ್ಯಕ್ಷ * ಅವಿರೋಧ ಆಯ್ಕೆ* ಜೆಡಿಎಸ್‌ ಸದಸ್ಯ ಗೈರು

​ಪ್ರಜಾವಾಣಿ ವಾರ್ತೆ
Published 11 ಸೆಪ್ಟೆಂಬರ್ 2024, 6:09 IST
Last Updated 11 ಸೆಪ್ಟೆಂಬರ್ 2024, 6:09 IST
ಕನಕಪುರ ನಗರಸಭೆ ಅಧ್ಯಕ್ಷ ಉಪಾಧ್ಯಕ್ಷರಾಗಿ ಆಯ್ಕೆಯಾದ ಲಕ್ಷ್ಮಿದೇವಮ್ಮ ಮತ್ತು ಸೈಯದ್ ಸಾಧಿಕ್ ಅವರೊಂದಿಗೆ ನಗರಸಭೆ ಸದಸ್ಯರು  
ಕನಕಪುರ ನಗರಸಭೆ ಅಧ್ಯಕ್ಷ ಉಪಾಧ್ಯಕ್ಷರಾಗಿ ಆಯ್ಕೆಯಾದ ಲಕ್ಷ್ಮಿದೇವಮ್ಮ ಮತ್ತು ಸೈಯದ್ ಸಾಧಿಕ್ ಅವರೊಂದಿಗೆ ನಗರಸಭೆ ಸದಸ್ಯರು     

ಕನಕಪುರ: ಕನಕಪುರ ನಗರಸಭೆ ಹೊಸ ಅಧ್ಯಕ್ಷರಾಗಿ ಕಾಂಗ್ರೆಸ್ ಪಕ್ಷದ ಲಕ್ಷ್ಮಿದೇವಮ್ಮ ಮತ್ತು ಉಪಾಧ್ಯಕ್ಷರಾಗಿ ಸೈಯದ್ ಸಾದಿಕ್ ಅವಿರೋಧವಾಗಿ ಆಯ್ಕೆಯಾದರು.

ಕನಕಪುರ ಪುರಸಭೆಯು ನಗರಸಭೆಯಾಗಿ ಮೇಲ್ದರ್ಜೆಗೆ ಏರಿದ ನಂತರ ಆಯ್ಕೆಯಾದ ಮೊದಲ ಮಹಿಳಾ ಅಧ್ಯಕ್ಷೆ ಎಂಬ ಹೆಗ್ಗಳಿಕೆಗೆ ಲಕ್ಷ್ಮಿದೇವಮ್ಮ ಪಾತ್ರರಾಗಿದ್ದಾರೆ.

ನಗರಸಭೆ ಎರಡನೇ ಅವಧಿಗೆ ಅಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆಗೆ ಮತ್ತು ಉಪಾಧ್ಯಕ್ಷ ಸ್ಥಾನವು ಬಿಸಿಎಂ (ಎ) ಪ್ರವರ್ಗಕ್ಕೆ  ಮೀಸಲಾಗಿತ್ತು. 

ADVERTISEMENT

ಅಧ್ಯಕ್ಷ, ಉಪಾಧ್ಯಕ್ಷ ಆಯ್ಕೆಗೆ ಮಂಗಳವಾರ ನಡೆದ ಚುನಾವಣೆಗೆ ವಾರ್ಡ್ ನಂಬರ್ 17 ಜೆ.ಸಿ ಬಡಾವಣೆಯ ಸದಸ್ಯೆ ಲಕ್ಷ್ಮಿದೇವಮ್ಮ ಮತ್ತು ವಾರ್ಡ್ ನಂಬರ್ 21 ಅಜೀಜ್ ನಗರದ ಸದಸ್ಯ ಸೈಯದ್‌ ಸಾದಿಕ್‌ ಬಿಟ್ಟು ಯಾರೂ ನಾಮಪತ್ರ ಸಲ್ಲಿಸಲಿಲ್ಲ.  

ಚುನಾವಣಾ ಅಧಿಕಾರಿಯಾಗಿದ್ದ ರಾಮನಗರ ಜಿಲ್ಲಾ ಉಪ ವಿಭಾಗಾಧಿಕಾರಿ ಬಿ.ಕೆ.ಬಿನೋಯ್, ಇಬ್ಬರ ಅವಿರೋಧ ಆಯ್ಕೆ ಘೋಷಿಸಿದರು. ನಗರಸಭೆ ಕಮಿಷನರ್ ಎಂ‌ಎಸ್.ಮಹಾದೇವ್ ಸಹಾಯಕ ಚುನಾವಣಾ ಅಧಿಕಾರಿಯಾಗಿ ಕಾರ್ಯನಿರ್ವಹಿಸಿದರು.

ನಗರಸಭೆಯ ಒಟ್ಟು 31 ಸದಸ್ಯರಲ್ಲಿ  ಜೆಡಿಎಸ್ ಸದಸ್ಯ ಜೈರಾಮ್ ಗೈರು ಹಾಜರಾಗಿದ್ದರು. ಇನ್ನುಳಿದ 30 ಸದಸ್ಯರು ಭಾಗವಹಿಸಿದ್ದರು. ಕನಕಪುರ ನಗರಸಭೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ನಿಚ್ಚಳ ಬಹುಮತ ಇದ್ದ ಕಾರಣ ಫಲಿತಾಂಶ ನಿಚ್ಚಳವಾಗಿತ್ತು. ಹಾಗಾಗಿ ಸಂಸದ ಮತ್ತು ಶಾಸಕರು ಮತದಾನ ಮಾಡಲು ಬಂದಿರಲಿಲ್ಲ.   

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.