ADVERTISEMENT

ಅಡ್ಡ ಬಂದ ಬೈಕ್‌ ಸವಾರನಿಗೆ ಒದೆಯಲು ಮುಂದಾದ ಮೈಸೂರು SP ಮಲ್ಲಿಕಾರ್ಜುನ ಬಾಲದಂಡಿ

​ಪ್ರಜಾವಾಣಿ ವಾರ್ತೆ
Published 18 ಜನವರಿ 2026, 13:07 IST
Last Updated 18 ಜನವರಿ 2026, 13:07 IST
<div class="paragraphs"><p>ಮಲ್ಲಿಕಾರ್ಜುನ ಬಾಲದಂಡಿ</p></div>

ಮಲ್ಲಿಕಾರ್ಜುನ ಬಾಲದಂಡಿ

   

ಮೈಸೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸುತ್ತೂರು ಜಾತ್ರಾ ಮಹೋತ್ಸವದಲ್ಲಿ ಪಾಲ್ಗೊಂಡು ಹಿಂತಿರುಗುತ್ತಿದ್ದ ವೇಳೆ ಉಂಟಾದ ಸಂಚಾರ ದಟ್ಟಣೆ ನಿರ್ವಹಣೆ ಪ್ರಯತ್ನದಲ್ಲಿದ್ದ ಮೈಸೂರು ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ ಬೈಕ್ ಸವಾರನೊಬ್ಬನಿಗೆ ಒದೆಯಲು ಮುಂದಾದರು. ಆ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ.

ಮಧ್ಯಾಹ್ನ 1.30ರ ಸುಮಾರಿಗೆ ಸಿದ್ದರಾಮಯ್ಯ ಅವರು ಜಾತ್ರೆಯಲ್ಲಿನ ಕೃಷಿ ವಿಚಾರಸಂಕಿರಣವನ್ನು ಉದ್ಘಾಟಿಸಿ, ಸ್ನೇಹಿತ ನರಸೇಗೌಡ ಅವರ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳುವ ಸಲುವಾಗಿ ತರಾತುರಿಯಲ್ಲಿ ಕಾರ್ಯಕ್ರಮದಿಂದ ನಿರ್ಗಮಿಸಿದರು.

ADVERTISEMENT

ಜಾತ್ರೆಗೆ ಸಾವಿರಾರು ಸಂಖ್ಯೆಯಲ್ಲಿ ಜನರು ಸೇರಿದ್ದು, ಕಿಲೋಮೀಟರ್‌ಗಳವರೆಗೆ ಸಂಚಾರ ದಟ್ಟಣೆ ಉಂಟಾಗಿತ್ತು. ಇಕ್ಕಟ್ಟಾದ ರಸ್ತೆಗಳಲ್ಲಿ ಮುಖ್ಯಮಂತ್ರಿಗಳ ವಾಹನಕ್ಕೆ ಜಾಗ ಮಾಡಿಕೊಡಲು ಪೊಲೀಸರು ಹರಸಾಹಸ ಪಟ್ಟರು.

ಖುದ್ದು ಬಾಲದಂಡಿ ಅವರೇ ರಸ್ತೆಗೆ ಇಳಿದಿದ್ದರು. ಮುಖ್ಯಮಂತ್ರಿಯವರ ವಾಹನಕ್ಕೆ ದಾರಿ ಮಾಡಿಕೊಟ್ಟ ನಂತರವೂ ವಾಹನಗಳ ಸಂಚಾರ ನಿಯಂತ್ರಿಸುತ್ತಿದ್ದರು. ಈ ವೇಳೆ ಬಸ್‌ಗೆ ಅಡ್ಡಲಾಗಿ ಬೈಕ್ ಓಡಿಸಲು ಸವಾರ ಮುಂದಾಗಿದ್ದರಿಂದ ಸಿಟ್ಟಿಗೆದ್ದ ಅಧಿಕಾರಿಯು, ಅವರತ್ತ ಕಾಲೆತ್ತಿದರು. ಇದನ್ನು ಸಾರ್ವಜನಿಕರು ವಿಡಿಯೊ ಮಾಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.