ADVERTISEMENT

ಚನ್ನಪಟ್ಟಣ: ಮಾರುಕಟ್ಟೆ ತುಂಬೆಲ್ಲಾ ಕಡಲೆ, ಅವರೆ, ಗೆಣಸು

​ಪ್ರಜಾವಾಣಿ ವಾರ್ತೆ
Published 15 ಜನವರಿ 2026, 7:08 IST
Last Updated 15 ಜನವರಿ 2026, 7:08 IST
ಚನ್ನಪಟ್ಟಣ ಪೇಟೆಬೀದಿಯಲ್ಲಿ ಎಳ್ಳು ಬೆಲ್ಲ ಖರೀದಿ
ಚನ್ನಪಟ್ಟಣ ಪೇಟೆಬೀದಿಯಲ್ಲಿ ಎಳ್ಳು ಬೆಲ್ಲ ಖರೀದಿ   

ಚನ್ನಪಟ್ಟಣ: ತಾಲ್ಲೂಕಿನಲ್ಲಿ ಬುಧವಾರ ಸಂಕ್ರಾಂತಿಗೆ ಸಾಮಗ್ರಿ ಖರೀದಿ ಜೋರಾಗಿತ್ತು.

ಜನರಲ್ಲಿ ಉತ್ಸಾಹ ಕಂಡು ಬಂದಂತೆಯೆ ವಸ್ತುಗಳ ಬೆಲೆಯೂ ಗಗನಕ್ಕೇರಿದ್ದು, ಗ್ರಾಹಕರಿಗೆ ಹಬ್ಬ ಕಹಿಯಾಗಿ ಪರಿಣಮಿಸಿದೆ. ಹೂವು, ಎಳ್ಳು, ಬೆಲ್ಲ, ಕಡಲೆಕಾಯಿ, ಸಕ್ಕರೆ ಅಚ್ಚು, ಅವರೆಕಾಯಿ, ಕಬ್ಬು ಮತ್ತಿತರ ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗಿತ್ತು.

ಎಳ್ಳು ಕೆ.ಜಿ.ಗೆ ₹150, ಸಕ್ಕರೆ ಅಚ್ಚು ಕೆ.ಜಿ.ಗೆ ₹100ರಿಂದ ₹150, ಬೆಲ್ಲ ₹60, ಸೇವಂತಿಗೆ ಮಾರು ₹50, ಬಾಳೆ ಹಣ್ಣು ಕೆ.ಜಿ.ಗೆ ₹60, ಕಡಲೆಕಾಯಿ ಸೇರಿಗೆ ₹30ರಿಂದ 35, ಗೆಣಸು ಕೆ.ಜಿ.ಗೆ ₹25 ರಿಂದ ₹30, ಕಬ್ಬು ಎರಡಕ್ಕೆ ₹80 ರಿಂದ 100, ಅವರೆಕಾಯಿ ಕೆ.ಜಿ.ಗೆ ₹50ರಂತೆ ಬಿಕರಿಯಾಯಿತು.

ADVERTISEMENT

ಮಾರುಕಟ್ಟೆಯಲ್ಲಿ ರಾಶಿ ರಾಶಿ ಅವರೆಕಾಯಿ, ಗೆಣಸು, ಕಬ್ಬು ಬಂದು ಬಿದ್ದಿವೆ. ಹಬ್ಬದ ಹಿನ್ನೆಲೆಯಲ್ಲಿ ಪಟ್ಟಣದ ತುಂಬೆಲ್ಲ ಜನವೋ ಜನ. ಬೆಲೆ ಏರಿಕೆಯ ನಡುವೆಯೂ ವ್ಯಾಪಾರಸ್ಥರಿಗೆ ಭರ್ಜರಿ ವ್ಯಾಪಾರ ನಡೆಯಿತು.

ಚನ್ನಪಟ್ಟಣದಲ್ಲಿ ಕಬ್ಬು ಖರೀದಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.