ADVERTISEMENT

ಸಂತ ಶಿಶುನಾಳ ಶರೀಫರ ಜಯಂತಿ

​ಪ್ರಜಾವಾಣಿ ವಾರ್ತೆ
Published 9 ಮಾರ್ಚ್ 2022, 8:25 IST
Last Updated 9 ಮಾರ್ಚ್ 2022, 8:25 IST
ಮಾಗಡಿ ಪಟ್ಟಣದ ಕಲ್ಯಾಬಾಗಿಲು ಕನ್ನಡ ಗೆಳೆಯರ ಬಳಗದಿಂದ ಸಂತ ಶಿಶುನಾಳ ಶರೀಫರ ಜಯಂತಿ ನಡೆಯಿತು. ಪುರಸಭೆ ಸದಸ್ಯ ಎಂ.ಎನ್‌. ಮಂಜುನಾಥ್‌, ಕದಂಬ ಗಂಗರಾಜು, ಬಿ. ನಂಜುಂಡಯ್ಯ, ಎಲ್‌. ನಂಜಯ್ಯ, ಶ್ರೀನಿವಾಸ್‌, ಕಡೆಮನೆ ಕುಮಾರ್‌, ಚಂದ್ರಶೇಖರ್‌ ಹಾಜರಿದ್ದರು
ಮಾಗಡಿ ಪಟ್ಟಣದ ಕಲ್ಯಾಬಾಗಿಲು ಕನ್ನಡ ಗೆಳೆಯರ ಬಳಗದಿಂದ ಸಂತ ಶಿಶುನಾಳ ಶರೀಫರ ಜಯಂತಿ ನಡೆಯಿತು. ಪುರಸಭೆ ಸದಸ್ಯ ಎಂ.ಎನ್‌. ಮಂಜುನಾಥ್‌, ಕದಂಬ ಗಂಗರಾಜು, ಬಿ. ನಂಜುಂಡಯ್ಯ, ಎಲ್‌. ನಂಜಯ್ಯ, ಶ್ರೀನಿವಾಸ್‌, ಕಡೆಮನೆ ಕುಮಾರ್‌, ಚಂದ್ರಶೇಖರ್‌ ಹಾಜರಿದ್ದರು   

ಮಾಗಡಿ: ಪಟ್ಟಣದ ಕಲ್ಯಾಬಾಗಿಲು ಕನ್ನಡ ಗೆಳೆಯರ ಬಳಗದಿಂದ ಮಂಗಳವಾರ ಸಂತ ಶಿಶುನಾಳ ಶರೀಫರ 203ನೇ ಜಯಂತಿಆಚರಿಸಲಾಯಿತು.

ತಿರುಮಲೆ ಕನ್ನಡ ಕೂಟದ ಸಂಚಾಲಕ ಟಿ.ಎಂ. ಶ್ರೀನಿವಾಸ ಮಾತನಾಡಿ, ಹೊಸಗನ್ನಡ ಅರುಣೋದಯ ಸಾಹಿತ್ಯದ ಮುಂಬೆಳಕಿನ ಕಾಲದಲ್ಲಿ ತಮ್ಮ ಅನುಭವ ಸಾಹಿತ್ಯದ ಹೊಂಗಿರಣವೊಂದನ್ನು ಹಾಯಿಸಿದ ಹಿರಿಮೆಯುಸಂತ ಶಿಶುನಾಳ ಶರೀಫರಿಗೆ ಸಲ್ಲುತ್ತದೆ ಎಂದು ಹೇಳಿದರು.

ಅನುಭಾವಿ ಕವಿ ಶರೀಫರು ತತ್ವಪದ, ಲಾವಣಿ, ಕರ್ಬಲಾ ಮೇಳಗಳಲ್ಲಿ ರಿವಾಯತ್‌ ಪದ ರಚಿಸಿಕೊಟ್ಟ ಮಹಾನುಭಾವರು. ಅವರ ಸಾಹಿತ್ಯವನ್ನು ನಾವೆಲ್ಲರೂ ಅಧ್ಯಯನ ಮಾಡುವ ಮೂಲಕ ಕರ್ನಾಟಕದಲ್ಲಿ ಬಹುತ್ವದ ನೆಲೆ ಉಳಿಸಲು ಶ್ರಮಿಸಬೇಕು ಎಂದು ಹೇಳಿದರು.

ADVERTISEMENT

ಪುರಸಭಾ ಸದಸ್ಯ ಎಂ.ಎನ್. ಮಂಜುನಾಥ ಮಾತನಾಡಿ, ಶರೀಫರು ಧಾರಾವಾಡದ ಗ್ರಾಮೀಣ ಸೊಗಡನ್ನು ತುಂಬಿ ಜೀವನದ ಏಳುಬೀಳುಗಳನ್ನು ತತ್ವಪದಗಳ ಮೂಲಕ ಹಾಡುತ್ತಿದ್ದರು. ಅವಿದ್ಯಾವಂತರಿಗೂ ಸಹಜವಾಗಿ ತಿಳಿಯುವ ತತ್ವಪದಗಳನ್ನು ರಚಿಸಿದ್ದಾರೆ ಎಂದರು.

ಪತ್ರಕರ್ತ ಮುನಿಯಪ್ಪ ಮಾತನಾಡಿ, ಹಿಂದೂ- ಮುಸ್ಲಿಂ ಭಾವೈಕ್ಯದ ಸಂಕೇತವಾಗಿದ್ದ ಶಿಶುನಾಳ ಶರೀಫರು ಗುರು ಗೋವಿಂದ ಭಟ್ಟರ ಮಾರ್ಗದರ್ಶನದಲ್ಲಿ ಕುರಾನ್, ವೇದ, ಉಪನಿಷತ್ತುಗಳನ್ನು ಅಧ್ಯಯನ ಮಾಡಿದರು. ದೇವನೊಬ್ಬ ನಾಮ ಹಲವು ಎನ್ನುವ ಭಾವನೆ ಹೊಂದಿದ್ದ ಅವರು ತತ್ವಪದಗಳ ಮೂಲಕ ಹೆಸರುವಾಸಿಯಾಗಿದ್ದಾರೆ ಎಂದು ಹೇಳಿದರು.

ವಾಯುಸೇನೆ ಮಾಜಿ ಅಧಿಕಾರಿ ಕೆ.ಎನ್. ಶಿವಲಿಂಗಯ್ಯ, ಟಿ. ಗಂಗರಾಜ್, ಸವಿತಾ ಸಮಾಜದ ಉಪಾಧ್ಯಕ್ಷ ಎಂ. ಮುನಿಕೃಷ್ಣ, ಕಲಾವಿದ ಶ್ರೀನಿವಾಸ್, ಚಿಲಿಪಿಲಿ ರಾಜು, ಎಂ.ಆರ್. ಚಂದ್ರಶೇಖರ್, ನಿವೃತ್ತ ಶಿಕ್ಷಕರಾದ ನಂಜುಂಡಯ್ಯ, ಎಲ್. ನಂಜಯ್ಯ, ಹುಲಿಕಟ್ಟೆ ಗಂಗಾಧರ್, ರಾಜಣ್ಣ, ಸಿದ್ದಪ್ಪ, ಎಂ.ಜೆ. ವಿಜಯ್, ಮಂಜು, ಯೋಗೀಶ್, ಬಿ.ಆರ್. ಸಿದ್ದಲಿಂಗಪ್ಪ, ಕಡೇಮನೆ ಕುಮಾರ್, ಗದ್ದೆ ಬಯಲಿನ ವೆಂಕಟೇಶ್, ಬಸವರಾಜ್, ಆನಂದ್ ಇದ್ದರು.

ಕಲಾವಿದ ಶ್ರೀನಿವಾಸ್‌ ಸಂತ ಶಿಶುನಾಳ ಶರೀಫರ ತತ್ವಪದಗಳನ್ನು ಹಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.