ADVERTISEMENT

ಸಿನಿಮಾ ಪ್ರೇಕ್ಷಕರಿಗೆ ಸಸಿ ವಿತರಣೆ

​ಪ್ರಜಾವಾಣಿ ವಾರ್ತೆ
Published 15 ಜೂನ್ 2019, 12:57 IST
Last Updated 15 ಜೂನ್ 2019, 12:57 IST
ಉಪೇಂದ್ರ ಅಭಿನಯದ 'ಐ ಲವ್ ಯೂ' ಚಿತ್ರದ ಪ್ರದರ್ಶನದ ಅಂಗವಾಗಿ ಉತ್ತಮ ಪ್ರಜಾಕೀಯ ಪಕ್ಷದ ಪದಾಧಿಕಾರಿಗಳು ಪ್ರೇಕ್ಷಕರಿಗೆ ಸಸಿಗಳನ್ನು ಶನಿವಾರ ವಿತರಿಸಿದರು
ಉಪೇಂದ್ರ ಅಭಿನಯದ 'ಐ ಲವ್ ಯೂ' ಚಿತ್ರದ ಪ್ರದರ್ಶನದ ಅಂಗವಾಗಿ ಉತ್ತಮ ಪ್ರಜಾಕೀಯ ಪಕ್ಷದ ಪದಾಧಿಕಾರಿಗಳು ಪ್ರೇಕ್ಷಕರಿಗೆ ಸಸಿಗಳನ್ನು ಶನಿವಾರ ವಿತರಿಸಿದರು   

ರಾಮನಗರ: ಪರಿಸರ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶದಿಂದ ಉತ್ತಮ ಪ್ರಜಾಕೀಯ ಪಕ್ಷದ ಕಾರ್ಯಕರ್ತರು ಶನಿವಾರ ಇಲ್ಲಿನ ಶಾನ್ ಚಿತ್ರಮಂದಿರದಲ್ಲಿ ಸಿನಿಮಾ ವೀಕ್ಷಕರಿಗೆ ಸಸಿ ವಿತರಿಸಿದರು.

ಶಾನ್ ಚಿತ್ರ ಮಂದಿರದಲ್ಲಿ ನಟ ಉಪೇಂದ್ರ ಅವರ ಸಿನಿಮಾ 'ಐ ಲವ್ ಯು' ವೀಕ್ಷಿಸಿದ ನೂರಕ್ಕೂ ಅಧಿಕ ಜನರಿಗೆ ಹಣ್ಣಿನ ಗಿಡವನ್ನು ವಿತರಿಸಿದ ಕಾರ್ಯಕರ್ತರು, ನಿಮ್ಮ ಮನೆಯಲ್ಲಿ ನೆಟ್ಟು ಪೋಷಿಸುವ ಮೂಲಕ ಪರಿಸರ ರಕ್ಷಿಸಿ ಎಂದು ಮನವಿ ಮಾಡಿದರು.

‘ಪರಿಸರಪರ ಕಾಳಜಿಯನ್ನು ಜನರಲ್ಲಿ ಮೂಡಿಸಲು ಐದು ಸಾವಿರ ಗಿಡಗಳನ್ನು ನೆಡುವ ಸಂಕಲ್ಪ ಮಾಡಿದ್ದೇವೆ. 1 ಸಾವಿರ ಗಿಡಗಳನ್ನು ವಿತರಿಸಲಾಗುತ್ತಿದೆ. ನಾವು ವಿತರಿಸುವ ಎಲ್ಲಾ ಗಿಡಗಳು ವಿವಿಧ ಹಣ್ಣುಗಳದ್ದಾಗಿದೆ. ಇಂಥ ಗಿಡಗಳಿಂದ ದೊರೆಯುವ ಹಣ್ಣುಗಳು ಮನುಷ್ಯರಿಗೆ ಸೇರಿದಂತೆ ಪ್ರಾಣಿ-ಪಕ್ಷಿಗಳಿಗೂ ಆಹಾರ ಒದಗಿಸುತ್ತದೆ. ಅಲ್ಲದೆ ಶುದ್ಧ ಪರಿಸರ ನಿಮಾರ್ಣಕ್ಕೆ ಕಾರಣವಾಗುತ್ತದೆ’ ಎಂದು ಉತ್ತಮ ಪ್ರಜಾಕೀಯ ಪಕ್ಷದ ಮುಖಂಡ ಪುಟ್ಟ ಮಾದಯ್ಯ ತಿಳಿಸಿದರು.

ADVERTISEMENT

ಉತ್ತಮ ಪ್ರಜಾಕೀಯ ಪಕ್ಷದ ಪ್ರಮುಖರಾದ ವೆಂಕಟರಾಜು, ಸಂತೋಷ, ಹನುಮಂತ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.