ADVERTISEMENT

ಕನಕಪುರ | ಸಾತನೂರು ಸೊಸೈಟಿಗೆ ₹28 ‌ಲಕ್ಷ ಲಾಭಾಂಶ

​ಪ್ರಜಾವಾಣಿ ವಾರ್ತೆ
Published 29 ಸೆಪ್ಟೆಂಬರ್ 2025, 2:45 IST
Last Updated 29 ಸೆಪ್ಟೆಂಬರ್ 2025, 2:45 IST
<div class="paragraphs"><p>ಕನಕಪುರ ಸಾತನೂರು ಸೊಸೈಟಿಯಲ್ಲಿ ನಡೆದ ವಾರ್ಷಿಕ ಮಹಾಸಭೆಯಲ್ಲಿ ಪಾಲ್ಗೊಂಡಿದ್ದ ಬ್ಯಾಂಕಿನ ನಿರ್ದೇಶಕರು ಅಧಿಕಾರಿಗಳು ಮತ್ತು ಮುಖಂಡರು</p></div>

ಕನಕಪುರ ಸಾತನೂರು ಸೊಸೈಟಿಯಲ್ಲಿ ನಡೆದ ವಾರ್ಷಿಕ ಮಹಾಸಭೆಯಲ್ಲಿ ಪಾಲ್ಗೊಂಡಿದ್ದ ಬ್ಯಾಂಕಿನ ನಿರ್ದೇಶಕರು ಅಧಿಕಾರಿಗಳು ಮತ್ತು ಮುಖಂಡರು

   

ಕನಕಪುರ: ತಾಲ್ಲೂಕಿನ ಸಾತನೂರು ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ ಮಹಾಸಭೆಯು ಸಂಘದ ಅಧ್ಯಕ್ಷ ಎಸ್.ಆರ್.ನಿಜಲಿಂಗಪ್ಪ ಅಧ್ಯಕ್ಷತೆಯಲ್ಲಿ ನಡೆಯಿತು.

ಕಟ್ಟಡ ನಿರ್ಮಾಣ ಮಾಡಲು ಅನುದಾನದ ಕೊರತೆ ಇದೆ. ಅದಕ್ಕೆ ಬೇಕಾಗುವ ಅನುದಾನವನ್ನು ಡಿಸಿಎಂ ಡಿ.ಕೆ.ಶಿವಕುಮಾರ್ ಮತ್ತು ಬಮುಲ್ ಅಧ್ಯಕ್ಷ ಡಿ.ಕೆ.ಸುರೇಶ್ ಅವರಲ್ಲಿ ಮನವಿ ಮಾಡಿದ್ದು ಅವರು ವಿಶೇಷ ಕಾಳಜಿಯಿಂದ ಸೊಸೈಟಿಗೆ ಅನುದಾನದ ಭರವಸೆ ನೀಡಿದ್ದಾರೆ ಎಂದು ಎಸ್‌.ಆರ್‌.ನಿಜಲಿಂಗಪ್ಪ ಹೇಳಿದರು.

ADVERTISEMENT

ಸಂಘದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಅಭಿಷೇಕ್.ಪಿ, 2024-25ನೇ ಸಾಲಿನ ವಾರ್ಷಿಕ ವರದಿಯನ್ನು ಸಭೆಯಲ್ಲಿ ಮಂಡಿಸಿದರು. ಸೊಸೈಟಿಯು ವಾರ್ಷಿಕವಾಗಿ ₹13.50 ಕೋಟಿ ವಹಿವಾಟು ನಡೆಸಿ ₹28,39,555 ಲಾಭಗಳಿಸಿದೆ ಎಂದು ಸಭೆಗೆ ಮಾಹಿತಿ ನೀಡಿದರು.

ಸಂಘದ ಉಪಾಧ್ಯಕ್ಷೆ ಗೀತಾ.ವಿ.ಎಸ್, ನಿರ್ದೇಶಕರಾದ ಕೆ.ನಾರಾಯಣಗೌಡ, ಆರ್.ಮಧುಸೂಧನ್, ಎಸ್.ಸಿ.ಅನಿಲ್ ಕುಮಾರ್, ಕೆ.ಎಸ್.ಧನಂಜಯ ಕುಮಾರ್, ಎಂ.ರಾಜು, ಸಿದ್ದಪ್ಪ, ಸುರೇಶ್, ಮಹದೇವಮ್ಮ, ರಾಜಶೇಖರ ಮೂರ್ತಿ, ಬಿಡಿಸಿಸಿ ಬ್ಯಾಂಕ್ ಮೇಲ್ವಿಚಾರಕ ಆನಂದ್, ಮುಖಂಡರಾದ ಎಸ್.ಎಸ್.ಶಂಕರ್, ರಾಮಣ್ಣ, ಸಾತನೂರು ನಾಗರಾಜು, ಮುತ್ತರಾಜು ಸೊಸೈಟಿ ಸಿಬ್ಬಂದಿ ಯೋಗೇಶ್, ಪ್ರಭುಸ್ವಾಮಿ, ಸುರೇಶ್ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.