ಹಾರೋಹಳ್ಳಿ: ತಾಲ್ಲೂಕಿನ ಗುಳ್ಳಹಟ್ಟಿ ಕಾವಲ್ ಗ್ರಾಮದಲ್ಲಿ ಶುಕ್ರವಾರ ಕಾಣಿಸಿಕೊಂಡಿದ್ದ ಆರು ಅಡಿ ಹೆಬ್ಬಾವನ್ನು ಅರಣ್ಯ ಇಲಾಖೆಯವರು ರಕ್ಷಿಸಿ ಬನ್ನೇರುಘಟ್ಟ ಅರಣ್ಯ ಪ್ರದೇಶಕ್ಕೆ ಬಿಡಲಾಗಿದೆ.
ಶುಕ್ರವಾರ ಮಧ್ಯಾಹ್ನ ಗ್ರಾಮದಲ್ಲಿ ಮಕ್ಕಳು ಆಟ ಆಡುವಾಗ ಹೆಬ್ಬಾವು ಕಾಣಿಸಿಕೊಂಡಿದ್ದು ಮಕ್ಕಳು ಕಿರುಚಾಡಿದ್ದಾರೆ. ಗಾಬರಿಯಿಂದ ಕೂಡಲೇ ಸ್ಥಳಕ್ಕೆ ಧಾವಿಸಿದ ಗ್ರಾಮಸ್ಥರು ಹೆಬ್ಬಾವು ಹಿಡಿಯಲು ಸೆಣಸಾಟ ನಡೆಸಿದರು. ನಂತರ ಅರಣ್ಯ ಇಲಾಖೆಯ ಸಹಯೋಗದಲ್ಲಿ ಹೆಬ್ಬಾವನ್ನು ಹಿಡಿದು ಬನ್ನೇರುಘಟ್ಟ ಅರಣ್ಯ ಪ್ರದೇಶಕ್ಕೆ ಸುರಕ್ಷಿತವಾಗಿ ಬಿಡಲಾಗಿದೆ.
ಅರಣ್ಯ ಪಾಲಕರಾದ ಸಾಗರ್, ನಾಗಯ್ಯ, ಮುನಿಭೈರಯ್ಯ, ಗ್ರಾಮಸ್ಥರಾದ ಕೆಂಚಯ್ಯ, ನಾಗರಾಜು, ಡಾ.ಸತ್ಯಮೂರ್ತಿ ಇತರರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.