ಮಾಗಡಿ: ಬೆಂಗಳೂರಿನ ಗಾಂಧಿ ಕೃಷಿ ವಿಜ್ಞಾನ ಕೇಂದ್ರದಲ್ಲಿ ನವೆಂಬರ್ 13ರಿಂದ 16ರವರೆಗೆ ನಾಲ್ಕು ದಿನಗಳ ಕೃಷಿ ಮೇಳ–2025 ಆಯೋಜಿಸಲಾಗಿದೆ. ತಾಲ್ಲೂಕಿನ ಚಂದೂರಾಯನಹಳ್ಳಿ ಕೃಷಿ ವಿಜ್ಞಾನ ಕೇಂದ್ರದಲ್ಲಿ ಶುಕ್ರವಾರ ಕೃಷಿ ಮೇಳದ ಬಿತ್ತನೆ ಪತ್ರ ಬಿಡುಗಡೆ ಮಾಡಿದ ಬೆಂಗಳೂರು ವಿಶ್ವವಿದ್ಯಾಲಯದ ವಿಸ್ತರಣಾ ನಿರ್ದೇಶಕ ಡಾ.ವೈ.ಎನ್. ಶಿವಲಿಂಗಯ್ಯ ರೈತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಮಾಹಿತಿ ಪಡೆದುಕೊಳ್ಳಬೇಕೆಂದು ಮನವಿ ಮಾಡಿದರು.
ಈ ಮೇಳದಲ್ಲಿ 750ಕ್ಕೂ ಹೆಚ್ಚು ಮಳಿಗೆಗಳನ್ನು ಸ್ಥಾಪಿಸಲಾಗಿದೆ. ಒಣಭೂಮಿ, ತೋಟಗಾರಿಕೆ, ರೇಷ್ಮೆ, ಸಮಗ್ರ ಕೃಷಿ ವಿಭಾಗಗಳ ಮೂಲಕ ರೈತ ಉತ್ಪಾದಕರ ಪದಾರ್ಥಗಳ ಮಾರಾಟಕ್ಕೆ ಕಡಿಮೆ ದರದಲ್ಲಿ ಸ್ಟಾಲ್ ನೀಡಲಾಗಿದೆ. ಮೇಳದಲ್ಲಿ ಧಾನ್ಯ ಜೋಳ–162, ಸಿಎನ್ಜಿಎಸ್ ಚಾಮರಾಜನಗರ ಕಪ್ಪು ಅರಿಸಿನ, ಸೂರ್ಯಕಾಂತಿ ಕೆಬಿಎಚ್ಎಸ್–88, ಕೇರಳದ ಪ್ರತಿಭಾ ಅರಿಸಿನ ತಳಿ, ಮಾಗಡಿ ಎಂಎಲ್–32 ರಾಗಿ, ಎಚ್ಎ–5 ತೊಗರಿ, ಹೊಸ ಅಲಸಂದಿ ತಳಿ ಸೇರಿದ ಐದು ಹೊಸ ತಳಿಗಳನ್ನು ರೈತರಿಗೆ ಪರಿಚಯಿಸಲಾಗುವುದು ಎಂದರು.
ರಾಜ್ಯ, ಜಿಲ್ಲಾ ಮತ್ತು ತಾಲ್ಲೂಕು ಮಟ್ಟದಲ್ಲಿ ಯುವ ರೈತರು ಮತ್ತು ಯುವ ರೈತ ಮಹಿಳೆಯರಿಗೆ ಪ್ರಶಸ್ತಿ ನೀಡಲಾಗುವುದು. ರಾಜ್ಯಮಟ್ಟದ ಪ್ರಶಸ್ತಿಗಳಲ್ಲಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಸಮಗ್ರ ಪ್ರಶಸ್ತಿ, ಎಂ.ಎಚ್.ಮರಿಗೌಡ ಪ್ರಶಸ್ತಿ ಮತ್ತು ಕೆನರಾ ಬ್ಯಾಂಕ್ ಪ್ರಶಸ್ತಿ ಸೇರಿದೆ.
ನವೆಂಬರ್ 13ರಂದು ಬೆಳಗ್ಗೆ 11ಕ್ಕೆ ಉದ್ಘಾಟನೆ, ಮಧ್ಯಾಹ್ನ 2.30ಕ್ಕೆ ಬೆಂಗಳೂರು ಜಿಲ್ಲಾ ರೈತ ಪ್ರಶಸ್ತಿ ಪ್ರದಾನ ನಡೆಯಲಿದೆ. 14ರಂದು ಬೆಳಗ್ಗೆ 10.30ಕ್ಕೆ ರೈತರಿಗಾಗಿ ಚರ್ಚಾಗೋಷ್ಠಿ, ಮಧ್ಯಾಹ್ನ 2ಕ್ಕೆ ತುಮಕೂರು ಜಿಲ್ಲಾ ಪ್ರಶಸ್ತಿ ಪ್ರದಾನ. ನವೆಂಬರ್ 15ರಂದು ಬೆಳಗ್ಗೆ 10.30ಕ್ಕೆ ರೈತರಿಂದ ರೈತರಿಗಾಗಿ ಚರ್ಚಾಗೋಷ್ಠಿ, ಮಧ್ಯಾಹ್ನ 2ಕ್ಕೆ ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲಾ ಪ್ರಶಸ್ತಿ ಪ್ರದಾನ. ನವೆಂಬರ್ 16ರಂದು ದೇಸಿ ತಳಿ ಮತ್ತು ಕೃಷಿ ಪದ್ಧತಿಗಳು ಚರ್ಚಾಗೋಷ್ಠಿ, ಮಧ್ಯಾಹ್ನ 2.30ಕ್ಕೆ ರಾಜ್ಯಮಟ್ಟದ ಪ್ರಶಸ್ತಿ ಪ್ರಧಾನ ಮತ್ತು ಸಮಾರೋಪ ಸಮಾರಂಭ ನಡೆಯಲಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟನೆ ಮಾಡಲಿದ್ದರೆ. ರಾಜ್ಯಪಾಲರು ಪ್ರಶಸ್ತಿ ವಿತರಿಸಲಿದ್ದಾರೆ ಎಂದರು.
ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥರಾದ ಡಾ.ಶ್ವೇತ, ವಿಜ್ಞಾನಿಗಳಾದ ಡಾ.ನಾರಾಯಣ ರೆಡ್ಡಿ, ಡಾ.ರಾಜೇಂದ್ರ, ಡಾ.ದೀಪಪೂಜಾರ, ಡಾ.ಪ್ರಮೋದ್ ಇತರರು ಭಾಗವಹಿಸಿದ್ದರು.
750ಕ್ಕೂ ಹೆಚ್ಚು ಮಳಿಗೆ ನಿರ್ಮಾಣ
ಕೃಷಿ ಮೇಳದ ಆಕರ್ಷಣೆ ವಿವಿಧ ವಿಭಾಗದ ಮಳಿಗೆಗಳನ್ನು ಈ ಬಾರಿ ಆಯೋಜಿಸಿದ್ದು 750ಕ್ಕೂ ಹೆಚ್ಚು ಮಳಿಗಳು ತೆರೆಯಲಾಗಿದ್ದು ಅದರಲ್ಲಿ ಒಣ ಭೂಮಿ, ತೋಟಗಾರಿಕೆ, ರೇಷ್ಮೆ, ಸಮಗ್ರ, ಕೃಷಿ ವಿಭಾಗಗಳಾಗಿ ಮಾಡಿದ್ದು ರೈತ ಉತ್ಪಾದಕರ ತಯಾರಿಸಿದ ಪದಾರ್ಥಗಳನ್ನು ಮಾರಾಟ ಮಾಡಲು ಕೂಡ ಕಡಿಮೆ ದರದಲ್ಲಿ ಸ್ಟಾಲ್ ಗಳನ್ನು ಕೂಡ ನೀಡಲಾಗಿದೆ ಇದರ ಜತೆಗೆ 70ಕ್ಕೂ ಹೆಚ್ಚು ಆಹಾರ ಮೇಳಕ್ಕೆ ಸ್ಟಾಲ್, ಪುಸ್ತಕ ಮಳಿಗೆ ನಿರ್ಮಾಣ ಮಾಡುತ್ತಿದ್ದು ರೈತರಿಗೆ ಹೆಚ್ಚಿನ ಮಾಹಿತಿ ಲಭ್ಯವಾಗಲಿದೆ ಎಂದರು.
ಹೊಸ ಹೈಬ್ರಿಡ್ ತಳಿಗಳ ಪ್ರದರ್ಶನ
ಈ ಬಾರಿ ಕೃಷಿ ಮೇಳದಲ್ಲಿ ಹೊಸದಾಗಿ ಕಂಡುಹಿಡಿದಿರುವ ಹೊಸ ತಳಿಗಳ ಪರಿಚಯ ಮಾಡುವ ನಿಟ್ಟಿನಲ್ಲಿ ಮ್ಯೂಸಿಯಂ ನಿರ್ಮಾಣ ಮಾಡಲಾಗಿದ್ದು ಐದು ಹೊಸ ತಳಿಗಳನ್ನು ರೈತರಿಗೆ ಪರಿಚಯ ಮಾಡಲಾಗುತ್ತಿದೆ ಇದರಲ್ಲಿ ಧಾನ್ಯ ಜೋಳ -162 ಹೊಸ ತಳಿ ಸಿಎನ್ ಜಿಎಸ್ ಚಾಮರಾಜನಗರ, ಚಾಮರಾಜನಗರದ ಕಪ್ಪು ಅರಿಶಿಣ ಆಯುರ್ವೇದ ಬಳಕೆಗೆ ಉಪಯೋಗವಾಗಲಿದ್ದು ಇದರ ಜತೆಗೆ ಸೂರ್ಯಕಾಂತಿ ಕೆಬಿಎಚ್ಎಸ್ -88 ಹೊಸ ತಳಿ ಪರಿಚಯ ಮಾಡಲಾಗುತ್ತಿದೆ, ಕೇರಳದ ಪ್ರತಿಭಾ ಐಐಎಸ್ಆರ್ ಅರಿಶಿನ ತಳಿ ಕೂಡ ಪರಿಚಯ ಮಾಡಲಾಗುತ್ತಿದ್ದು ಇದು ಚಾಮರಾಜನಗರದಲ್ಲಿ ಬೆಳೆಯಲು ಉತ್ತಮ ವಾತಾವರಣ ಸೂಕ್ತ ಎಂಬುದು ತಿಳಿದು ಬಂದಿದೆ, ಮಾಗಡಿಯ ಎಂಎಲ್-32 ರಾಗಿ, ಎಚ್ಎ-5 ತೊಗರಿ, ಅಲಸಂದಿ ತಲೆಯನ್ನು ಪರಿಚಯ ಮಾಡುತ್ತಿದ್ದೇವೆ ಎಂದು ತಿಳಿಸಿದರು.
ರಾಜ್ಯ, ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ಯುವ ರೈತರು ಹಾಗೂ ಯುವ ರೈತ ಮಹಿಳೆ ಪ್ರಶಸ್ತಿಯನ್ನು ನೀಡಲಾಗುತ್ತಿದ್ದು ಪ್ರತಿ ತಾಲ್ಲೂಕಿನಿಂದ ಇಬ್ಬರೂ ಯುವ ರೈತರಿಗೆ ಪ್ರಶಸ್ತಿ ನೀಡುವ ಮೂಲಕ ಯುವಕರನ್ನು ಕೃಷಿಯಲ್ಲಿ ಆಕರ್ಷಿಸುವ ನಿಟ್ಟಿನಲ್ಲಿ ಪ್ರಶಸ್ತಿ ನೀಡಲಾಗುತ್ತಿದ್ದು ರಾಜ್ಯಮಟ್ಟದ ಪ್ರಶಸ್ತಿಗೆ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರ ಸಮಗ್ರ ಪ್ರಶಸ್ತಿ, ಎಂ.ಹೆಚ್.ಮರಿಗೌಡ ಪ್ರಶಸ್ತಿ, ಕೆನರಾ ಬ್ಯಾಂಕ್ ವತಿಯಿಂದ ನೀಡುತ್ತಿರುವ ಪ್ರಶಸ್ತಿ ಪ್ರಧಾನ ಸಮಾರಂಭ ನಡೆಯಲಿದೆ ಎಂದು ವಿವರಿಸಿದರು.
ಜಿಕೆವಿಕೆ ಕೃಷಿ ಮೇಳ ಕಾರ್ಯಕ್ರಮ ವಿವರ
ನಂಬರ್ 13 ರಂದು ಗುರುವಾರ ಬೆಳಗ್ಗೆ 11 ಗಂಟೆಗೆ ಉದ್ಘಾಟನಾ ಸಮಾರಂಭ ನಡೆಯಲಿದ್ದು ರಾಜ್ಯಮಟ್ಟದ ರೈತ ಪ್ರಶಸ್ತಿ ಪ್ರಧಾನ ಸಮಾರಂಭ ಮಧ್ಯಾಹ್ನ 2.30ಕ್ಕೆ ಬೆಂಗಳೂರು ನಗರ ಬೆಂಗಳೂರು ಗ್ರಾಮಾಂತರ ಮತ್ತು ಬೆಂಗಳೂರು ದಕ್ಷಿಣ ಜಿಲ್ಲೆಗಳ ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ರೈತ ಪ್ರಶಸ್ತಿ,
ನ.14 ರಂದು ಬೆಳಗ್ಗೆ 10:30ಕ್ಕೆ ರೈತರಿಗಾಗಿ ಚರ್ಚಾಗೋಷ್ಠಿ ಸಮೃದ್ಧಿ ಕೃಷಿಯಿಂದ ವಿಕಸಿತ ಭಾರತ, ಮಧ್ಯಾಹ್ನ 2 ಗಂಟೆಗೆ ತುಮಕೂರು ಜಿಲ್ಲೆ ಮತ್ತು ತಾಲೂಕು ಮಟ್ಟದ ಪ್ರಶಸ್ತಿ ಪ್ರಧಾನ ಅತ್ಯುತ್ತಮ ವೈಜ್ಞಾನಿಕ ಲೇಖನಗಳಿಗೆ ಡಾಕ್ಟರ್ ಆರ್ ದ್ವಾರಕೀನಾಥ್ ಮತ್ತು ಪ್ರೊ.ಬಿ.ವಿ. ವೆಂಕಟರಾವ್ ಪ್ರಶಸ್ತಿ ಪ್ರಧಾನ, ನ.15 ರಂದು ಬೆಳಗ್ಗೆ 10:30ಕ್ಕೆ ರೈತರಿಂದ ರೈತರಿಗಾಗಿ ಚರ್ಚಾ ಗೋಷ್ಠಿ ಕೃಷಿ ಪ್ರವಾಸೋದ್ಯಮ ಅವಕಾಶಗಳು ಮತ್ತು ಸವಾಲುಗಳು, ಮಧ್ಯಾಹ್ನ 2ಗಂಟೆಗೆ ಕೋಲಾರ ಮತ್ತು ಚಿಕ್ಕ ಬಳ್ಳಾಪುರ ಜಿಲ್ಲೆಗಳ ಪ್ರಶಸ್ತಿ ಪ್ರಧಾನ, ನ.16 ರಂದು ದೇಸಿ ತಳಿ ಮತ್ತು ಕೃಷಿ ಪದ್ಧತಿಗಳು ಚಚಾಗೋಷ್ಠಿ ಮಧ್ಯಾಹ್ನ 2:30ಕ್ಕೆ ರಾಜ್ಯಮಟ್ಟದ ಪ್ರಶಸ್ತಿ ಪ್ರಧಾನ ಮತ್ತು ಸಮಾರೋಪ ಸಮಾರಂಭಕ್ಕೆ ಮುಖ್ಯಮಂತ್ರಿಯ ಸಿದ್ದರಾಮಯ್ಯನವರು ಚಾಲನೆ ನೀಡಲಿದ್ದಾರೆ ಪ್ರಶಸ್ತಿಗಳನ್ನು ರಾಜ್ಯಪಾಲರು ವಿತರಣೆ ಮಾಡಲಿದ್ದಾರೆ ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥರಾದ ಡಾ. ಶ್ವೇತ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.