ADVERTISEMENT

ಶಿಷ್ಯನ ಸಾಧನೆಯಲ್ಲಿದೆ ಗುರು ಸಾರ್ಥಕತೆ: ಎಂ.ಜಿ. ಭರತ್ ರಾಜ್

ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ 22 ವರ್ಷದ ಹಿಂದಿನ ವಿದ್ಯಾರ್ಥಿಗಳಿಂದ ಗುರುವಂದನೆ

​ಪ್ರಜಾವಾಣಿ ವಾರ್ತೆ
Published 12 ಜನವರಿ 2026, 4:55 IST
Last Updated 12 ಜನವರಿ 2026, 4:55 IST
<div class="paragraphs"><p>ರಾಮನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಎಚ್‌ಇಪಿ ವಿಭಾಗದ 22 ವರ್ಷ ಹಿಂದಿನ ಹಳೆ ವಿದ್ಯಾರ್ಥಿಗಳಿಂದ ಗುರು ವಂದನೆ ಹಾಗೂ ಸ್ನೇಹ‌ ಸಮ್ಮಿಲನ ಕಾರ್ಯಕ್ರಮ ಜರುಗಿತು.&nbsp;</p></div>

ರಾಮನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಎಚ್‌ಇಪಿ ವಿಭಾಗದ 22 ವರ್ಷ ಹಿಂದಿನ ಹಳೆ ವಿದ್ಯಾರ್ಥಿಗಳಿಂದ ಗುರು ವಂದನೆ ಹಾಗೂ ಸ್ನೇಹ‌ ಸಮ್ಮಿಲನ ಕಾರ್ಯಕ್ರಮ ಜರುಗಿತು. 

   

ರಾಮನಗರ: ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಎಚ್‌ಇಪಿ ವಿಭಾಗದ 22 ವರ್ಷ ಹಿಂದಿನ ಹಳೆಯ ತಂಡದ ವಿದ್ಯಾರ್ಥಿಗಳು ಕಾಲೇಜಿನಲ್ಲಿ ಭಾನುವಾರ ಗುರು ವಂದನೆ ಹಾಗೂ ಸ್ನೇಹ‌ ಸಮ್ಮಿಲನ ಹಮ್ಮಿಕೊಂಡಿದ್ದರು.

ಪುಷ್ಪಮಳೆಗರೆಯುವ ಮೂಲಕ ಎಲ್ಲ ಅಧ್ಯಾಪಕರನ್ನು ಕಾರ್ಯಕ್ರಮಕ್ಕೆ ಬರ ಮಾಡಿಕೊಳ್ಳಲಾಯಿತು. ವಿದ್ಯಾರ್ಥಿಗಳು ತಮ್ಮ ಹಳೆಯ ನೆನಪುಗಳನ್ನು ಮೆಲಕು ಹಾಕಿದರು. ಮಧುಮಿತ ಭರತ ನಾಟ್ಯ ಪ್ರದರ್ಶಿಸಿದರು. 

ADVERTISEMENT

ಕಾರ್ಯಕ್ರಮ ಉದ್ಘಾಟಿಸಿದ ರಾಜ್ಯಶಾಸ್ತ್ರ ಪ್ರಾಧ್ಯಾಪಕ ಎಂ.ಜಿ. ಭರತ್ ರಾಜ್, ‘ ಶಿಷ್ಯಂದಿರ ಉನ್ನತ ಸಾಧನೆಯೇ ಗುರುವಿನ ಸಾರ್ಥಕತೆ.  ನಮ್ಮಿಂದ ಅಕ್ಷರ ಕಲಿತ ಶಿಷ್ಯರು ಉನ್ನತ ಸಾಧನೆ ಮಾಡಿದರೆ, ಸಮಾಜದಲ್ಲಿ ಉತ್ತಮ ಸ್ಥಾನಮಾನ ಗಳಿಸಿದರೆ ಅದೇ ಗುರುವಿಗೆ ಸಿಗುವ ದೊಡ್ಡ ಬಹುಮಾನ. ಕಲಿಸಿದ ಗುರುವಿಗೆ ಇದಕ್ಕಿಂತ ದೊಡ್ಡ ಸಾರ್ಥಕತೆ ಮತ್ತೊಂದಿಲ್ಲ’ ಎಂದರು.

ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲೆ ಕ್ಯಾಪ್ಟನ್ ಲಕ್ಷ್ಮಿ ಮಾತನಾಡಿ, ‘ಹಳೆ ವಿಧ್ಯಾರ್ಥಿಗಳು ತಮ್ಮ ಗುರುಗಳನ್ನು ನೆನಪಿಸಿಕೊಂಡು ಗುರು ವಂದನೆ ಕಾರ್ಯಕ್ರಮ ಮಾಡಿರುವುದು ಅವರಲ್ಲಿರುವ ಸಂಸ್ಕಾರಕ್ಕೆ ಸಾಕ್ಷಿಯಾಗಿದೆ. ಇಲ್ಲಿ ಕಲಿತವರು ಇತರರಿಗೆ ಮಾದರಿಯಾಗಿದ್ದಾರೆ’ ಎಂದು ಹೇಳಿದರು.

ನಿವೃತ ಪ್ರಾಂಶುಪಾಲ ಪ್ರೊ.ಎಂ. ಶಿವನಂಜಯ್ಯ ಮಾತನಾಡಿ, ‘ವಿದ್ಯಾರ್ಥಿ ಜೀವನದಲ್ಲಿ ಶಿಸ್ತು, ಸಂಯಮ ಬೆಳಸಿಕೊಂಡರೆ ಜೀವನದಲ್ಲಿ ಯಶಸ್ಸು ಗಳಿಸಬಹುದು. ಅಂತಹ ಸಾಧನೆ ಮತ್ತು ಯಶಸ್ಸನ್ನು ನಮ್ಮಿಂದ ಕಲಿತ ಎಷ್ಟೋ ವಿದ್ಯಾರ್ಥಿಗಳು ಮಾಡಿದ್ದಾರೆ’ ಎಂದರು.

ಕನ್ನಡ ಪ್ರಾಧ್ಯಾಪಕ, ಸಾಹಿತಿ ಡಾ. ಅಂಕನಹಳ್ಳಿ ಪಾರ್ಥ, ‘ಸಮಾಜದಲ್ಲಿ ಉತ್ತಮ ಸ್ಥಾನಮಾನ ಗಳಿಸುವ ವಿದ್ಯಾರ್ಥಿಗಳು ಕೇವಲ ಕುಟುಂಬಕ್ಕೆ ಸೀಮಿತರಾಗದೆ ಸಮಾಜಮುಖಿಯಾಗಿಯೂ ಯೋಚಿಸಬೇಕಾಗಿದೆ. ಸಮಾಜ ಪರಿವರ್ತನೆಗೆ ನಮ್ಮ ಕೈಲಾದ ಕೊಡುಗೆ ನೀಡಬೇಕಿದೆ’ ಎಂದು ಸಲಹೆ ನೀಡಿದರು.

ಕನ್ನಡ ಅಧ್ಯಾಪಕರಾದ ವಿ.ಎಚ್. ರಾಜಶೇಖರ್, ಎಲ್.ಸಿ. ರಾಜು, ನಿವೃತ್ತ ಜಂಟಿ ನಿರ್ದೇಶಕ ಎ. ರಮೇಶ್, ಇತಿಹಾಸ ಪ್ರಾಧ್ಯಾಪಕ ಡಾ. ಕನಕ ಟಿ.ಡಿ, ಡಾ. ವಿ. ವೆಂಕಟೇಶ್, ಕ್ಯಾಪ್ಟನ್ ರಾಘವೇಂದ್ರ ರಾವ್, ದೈಹಿಕ ಶಿಕ್ಷಣ ಶಿಕ್ಷಕ ನಟೇಶ್ ಬಾಬು, ಇಂಗ್ಲಿಷ್ ಪ್ರಾಧ್ಯಾಪಕ ಡಾ. ಅನುರಾಧ, ಬಿ.ಕೆ. ಸುನೀಲ್ ಕುಮಾರ್, ಸುಲೋಚನಾ ಹಾಗೂ ಅಟೆಂಡರ್ ದೊಡ್ಡಯ್ಯ ಗುರುವಂದನೆ ಸ್ವೀಕರಿಸಿ ಮಾತನಾಡಿದರು.

ಪೊಲೀಸ್ ಇಲಾಖೆಯ ರವೀಂದ್ರ ನಿರೂಪಿಸಿದರು. ಶಿಕ್ಷಿಕ ಶಾರದಾ ಪ್ರಾಸ್ತಾವಿಕ ಮಾತನಾಡಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.