ADVERTISEMENT

ಮಾಗಡಿ: ಚಲಿಸುತ್ತಿದ್ದ ಶಾಲಾ ಬಸ್‌ನಿಂದ ಬಿದ್ದು ವಿದ್ಯಾರ್ಥಿ ಸಾವು

​ಪ್ರಜಾವಾಣಿ ವಾರ್ತೆ
Published 19 ಜುಲೈ 2025, 4:30 IST
Last Updated 19 ಜುಲೈ 2025, 4:30 IST
ಮಾಗಡಿ ಪಟ್ಟಣದ ಎಸ್ ಪಿ ಎಸ್ ಸೇರಿದ ಶಾಲಾ ಬಸ್ ನಲ್ಲಿ ಶುಕ್ರವಾರ ಬಾಲಕ ರಸ್ತೆಗೆ ಬಿದ್ದು ಮೃತಪಟ್ಟಿದ್ದಾನೆ.
ಮಾಗಡಿ ಪಟ್ಟಣದ ಎಸ್ ಪಿ ಎಸ್ ಸೇರಿದ ಶಾಲಾ ಬಸ್ ನಲ್ಲಿ ಶುಕ್ರವಾರ ಬಾಲಕ ರಸ್ತೆಗೆ ಬಿದ್ದು ಮೃತಪಟ್ಟಿದ್ದಾನೆ.   

ಮಾಗಡಿ: ಚಲಿಸುತ್ತಿದ್ದ ಶಾಲಾ ಬಸ್‌ನಿಂದ ನಿಯಂತ್ರಣ ತಪ್ಪಿ ರಸ್ತೆಗೆ ಬಿದ್ದ ವಿದ್ಯಾರ್ಥಿ ಮೇಲೆ ಬಸ್‌ ಚಕ್ರ ಹರಿದು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಶುಕ್ರವಾರ ನಡೆದಿದೆ. 

ಎನ್ಇಎಸ್ ಬಡಾವಣೆ ಎಸ್.ಪಿ.ಎಸ್ ಶಾಲೆ ಎರಡನೇ ತರಗತಿ ವಿದ್ಯಾರ್ಥಿ ಹೊಸಪಾಳ್ಯ ಜನತಾ ಕಾಲೊನಿ ನಿವಾಸಿ ಲೋಕೇಶ್-ರಾಧಾ ದಂಪತಿ ಪುತ್ರ ರಜತ್ (7) ಮೃತ ಶಾಲಾ ವಿದ್ಯಾರ್ಥಿ.

ಶುಕ್ರವಾರ ಸಂಜೆ ಶಾಲೆ ಮುಗಿಸಿ ವಾಪಸ್‌ ಬರುತ್ತಿದ್ದಾಗ ರಸ್ತೆ ತಿರುವಿನಲ್ಲಿ ನಿಯಂತ್ರಣ ತಪ್ಪಿದ ರಜತ್ ರಸ್ತೆಗೆ ಬಿದ್ದಿದ್ದಾನೆ. ಹಿಂದಿನ ಚಕ್ರ ಮುಖದ ಮೇಲೆ ಹರಿದ ಪರಿಣಾಮ ರಕ್ತಸ್ರಾವದಿಂದ ಸ್ಥಳದಲ್ಲೇ ಮೃತಪಟ್ಟಿದ್ದಾನೆ.

ADVERTISEMENT

ಚಾಲಕನ ನಿರ್ಲಕ್ಷ್ಯವೇ ಮಗನ ಸಾವಿಗೆ ಕಾರಣ ಎಂದು ಪೋಷಕರು ಆರೋಪಿಸಿದ್ದಾರೆ. ಅತಿವೇಗ ಹಾಗೂ ಬಸ್‌ನ ಬಾಗಿಲು ಸರಿಯಾಗಿ ಹಾಕದ ಕಾರಣ ಬಾಗಿಲು ತೆರೆದುಕೊಂಡಿದೆ. ಇದರಿಂದ ಅವಘಡ ಸಂಭವಿಸಿದೆ ಎಂದು ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.  

ಬಾಲಕನ ಪೋಷಕರು ಮೂಲತಃ ಕೊಳ್ಳೇಗಾಲದ ಹನ್ನೂರಿನವರು. ಕೂಲಿ ಕೆಲಸಕ್ಕೆಂದು ವಲಸೆ ಬಂದು ನೆಲೆಸಿತ್ತು. ಮಾಗಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.