ADVERTISEMENT

ರಾಮನಗರ | ಕೊಂಚ ಸಡಿಲವಾಯ್ತು ಭಾನುವಾರದ ಲಾಕ್‌ಡೌನ್‌

​ಪ್ರಜಾವಾಣಿ ವಾರ್ತೆ
Published 19 ಜುಲೈ 2020, 16:27 IST
Last Updated 19 ಜುಲೈ 2020, 16:27 IST
ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ವಾಹನ ಸಂಚಾರ ವಿರಳವಾಗಿತ್ತು
ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ವಾಹನ ಸಂಚಾರ ವಿರಳವಾಗಿತ್ತು   

ರಾಮನಗರ: ಕೋವಿಡ್‌ ಸೋಂಕಿನ ಸರಪಳಿ ತುಂಡರಿಸುವ ಸಲುವಾಗಿ ಸರ್ಕಾರವು ಹೇರಿದ್ದ ಲಾಕ್‌ಡೌನ್‌ಗೆ ಮೂರನೇ ಭಾನುವಾರವೂ ಜನರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು.

ಹಿಂದಿನ ವಾರಕ್ಕೆ ಹೋಲಿಸಿದರೆ ಈ ವಾರದ ಲಾಕ್‌ಡೌನ್‌ ಕೊಂಚ ಸಡಿಲವಾಗಿದ್ದು, ದ್ವಿಚಕ್ರ ವಾಹನಗಳ ಓಡಾಟ ಹೆಚ್ಚಿತ್ತು. ಪ್ರಮುಖ ರಸ್ತೆಗಳಲ್ಲಿ ಸಂಚಾರ ವಿರಳವಾಗಿದ್ದರೂ ಒಳ ರಸ್ತೆಗಳಲ್ಲಿ ಓಡಾಟ ಕಂಡು ಬಂದಿತು. ಮಾಂಸದ ಅಂಗಡಿಗಳ ಮುಂದೆ ಜನರ ಸಾಲು ಹೆಚ್ಚಿತ್ತು.

ಜನರು ಅಗತ್ಯ ವಸ್ತುಗಳ ಖರೀದಿ ನೆಪದಲ್ಲಿ ಬೀದಿಗೆ ಇಳಿದಿದ್ದರು. ದಿನಬಳಕೆ ವಸ್ತುಗಳಾದ ದಿನಸಿ, ಹಾಲು, ಮಾಂಸದಂಗಡಿ, ಮೆಡಿಕಲ್ ಸ್ಟೋರ್‌, ಪೆಟ್ರೋಲ್ ಬಂಕ್‍ಗಳು ಎಂದಿನಂತೆ ಕಾರ್ಯ ನಿರ್ವಹಿಸಿದವು. ಎಪಿಎಂಸಿ, ರೇಷ್ಮೆ ಮಾರುಕಟ್ಟೆ ಬಂದ್ ಆಗಿತ್ತು. ಕೆಎಸ್‌ಆರ್‌ಟಿಸಿ ಬಸ್‌ಗಳು, ಆಟೊಗಳ ಸಂಚಾರ ಇರಲಿಲ್ಲ. ಗ್ರಾಮಾಂತರ ಪ್ರದೇಶದಲ್ಲಿ ಲಾಕ್‌ಡೌನ್‌ ಹೆಚ್ಚು ಪರಿಣಾಮ ಬೀರಲಿಲ್ಲ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.