
ಚನ್ನಪಟ್ಟಣ: ತಾಲ್ಲೂಕಿನ ಹುಣಸನಹಳ್ಳಿಯ ಬಿಸಿಲೇಶ್ವರಿ ದೇವಿ ಜಾತ್ರಾ ಮಹೋತ್ಸವ ಹಾಗೂ ಸಿಡಿ ಉತ್ಸವ ಮಂಗಳವಾರ ವಿಜೃಂಭಣೆಯಿಂದ ನೆರವೇರಿತು.
ಫೆ.28 ರಿಂದಲೇ ದೇವತಾಕಾರ್ಯಗಳು ಆರಂಭಗೊಂಡಿದ್ದವು. ಮಾರ್ಚ್ 28ರಂದು ಹೂವಿನ ತೇರು, 29 ಹಾಗೂ 30 ರಂದು ಹುಲಿವಾಹನೋತ್ಸವ, ಫೆ. 31ರ ಭಾನುವಾರ ಯಳವಾರ, ಅಭಿಷೇಕ ಕಾರ್ಯಕ್ರಮ ನಡೆದಿತ್ತು. ಭಾನುವಾರ ಹುಣಸನಹಳ್ಳಿಯ ಅಕ್ಕಪಕ್ಕದ ಗ್ರಾಮಗಳಾದ ಕೋಡಂಬಹಳ್ಳಿ, ಕೊಂಡಾಪುರ, ಹುಚ್ಚಯ್ಯನದೊಡ್ಡಿ, ನಾಗಾಪುರ, ಅಕ್ಕೂರು ಸೇರಿದಂತೆ ಹಲವು ಗ್ರಾಮಗಳಿಂದ ಕೊಂಡಕ್ಕೆ ಸೌದೆ ಹಾಕುವ ಕಾರ್ಯಕ್ರಮ ನಡೆಯಿತು.
ಕೊಂಡ ಮಹೋತ್ಸವದಲ್ಲಿ ಹುಣಸನಹಳ್ಳಿಯ ಅಕ್ಕಪಕ್ಕದ ಗ್ರಾಮಗಳ ಭಕ್ತಾಧಿಗಳಿಂದ ಕೊಂಡಸೌದೆ ಮೆರವಣಿಗೆ, ನಂತರ ರಾತ್ರಿ ದೇವತಾ ಮೆರವಣಿಗೆ, ಸೋಮವಾರ ಮುಂಜಾನೆ ಕೊಂಡ ಹಾಯುವ ಕಾರ್ಯಕ್ರಮ ನಡೆದಿತ್ತು. ಈ ಸಂದರ್ಭದಲ್ಲಿ ಆಕರ್ಷಕ ಬಾಣಬಿರುಸು, ಹೆಬ್ಬಾರೆ ಕಾರ್ಯಕ್ರಮಗಳು ನಡೆದವು. ಸೋಮವಾರ ಮಧ್ಯಾಹ್ನ ರಥೋತ್ಸವ ನಡೆಯಿತು.
ಮಂಗಳವಾರ ನಡೆದ ಸಿಡಿ ಹಾಗೂ ಜಾತ್ರಾ ಮಹೋತ್ಸವಕ್ಕೆ ಅಕ್ಕಪಕ್ಕದ ಗ್ರಾಮ ಮತ್ತು ತಾಲ್ಲೂಕಿನ ವಿವಿಧ ಮೂಲೆಗಳಿಂದ ಭಕ್ತರು ಪಾಲ್ಗೊಂಡರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.