ಮಾಗಡಿ: ತಾಲ್ಲೂಕಿನ ಚಕ್ರಬಾವಿಯ ಕೋಡಿ ಬಸವಣ್ಣ ಹಾಗೂ ಬೆಟ್ಟದ ಸಿದ್ದಪ್ಪ ಸ್ವಾಮಿಗೆ ಭಾನುವಾರ ಪೂಜೆ ಮಾಡಲಾಯಿತು.
ಪ್ರತಿ ವರ್ಷದಂತೆ ಉತ್ತಮ ಮಳೆ, ಬೆಳೆಗಾಗಿ ಗ್ರಾಮಸ್ಥರು ಹರಕೆ ಕಟ್ಟಿ ಬೆಟ್ಟದ ಸಿದ್ದಪ್ಪ ಸ್ವಾಮಿಗೆ ಪೂಜೆ ಸಲ್ಲಿಸಿ, ನೈವೇದ್ಯ ಅರ್ಪಿಸುತ್ತಾರೆ. ಕೊಡಿ ಬಸವಣ್ಣ ಸ್ವಾಮಿಗೆ ಪೂಜೆ ಸಲ್ಲಿಸಿದ ನಂತರ ಗ್ರಾಮಸ್ಥರು ಸಾಮೂಹಿಕ ಭೋಜನ ಮಾಡುತ್ತಾರೆ.
ಪ್ರತಿ ವರ್ಷವೂ ಬೆಟ್ಟದ ಸಿದ್ದಪ್ಪನಿಗೆ ಪೂಜೆ ಸಲ್ಲಿಸಿ ದೀಪ ಹಚ್ಚಿ ಬರುವುದರಿಂದ ಗ್ರಾಮಕ್ಕೆ ಒಳಿತಾಗುತ್ತಿದೆ ಎಂದು ಗ್ರಾಮದ ಸೀಮೆಎಣ್ಣೆ ರಾಜಣ್ಣ ಹೇಳಿದರು.
ಚಕ್ರಬಾವಿ ಗ್ರಾಮಸ್ಥರು ಸಾಮೂಹಿಕ ಭೋಜನಕ್ಕಾಗಿ ಗ್ರಾಮದ ಎಲ್ಲಾ ಮನೆಯಿಂದ ಅಕ್ಕಿ,ಬೆಳೆ, ತರಕಾರಿ ಹಾಗೂ ವಿವಿಧ ಧಾನ್ಯಗಳನ್ನು ಸಂಗ್ರಹಿಸಿ ತರುತ್ತಾರೆ. ಗ್ರಾಮಸ್ಥರೇ ಸೇರಿ ಪ್ರಸಾದ ತಯಾರಿಸಿ ಪ್ರತಿಯೊಬ್ಬರಿಗೂ ಬಡಿಸುತ್ತಾರೆ. ಗ್ರಾಮಕ್ಕೆ ಬಂದ ಬೆಂಗಳೂರು ಜಿಕೆವಿಕೆ ತಿಮ ವರ್ಷದ ಕೃಷಿ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಬಸವರಾಜು ಪುಟಾಣಿ ಕುಮಾರ್, ಪಂಚಾಕ್ಷರಿ, ಈರಯ್ಯ, ರವೀಂದ್ರ, ಅಂಗಡಿ ಕುಮಾರ್, ಬೈರೇಶ್, ಶ್ರೀಧರ್, ಜಗದೀಶ್, ಅಂಗಡಿ ಸೂರಿ, ಶೈಲೇಶ್, ನಾಗರಾಜು, ದೀಪಕ್, ಮಹೇಶ್, ಕಿರಣ್, ವಾಟರ್ ಮ್ಯಾನ್ ರಾಜಣ್ಣ, ದೇವರಾಜು, ಸುರೇಶ್, ಮನು, ಬಸವರಾಜು, ಬೆಳಗುಂಬ ವಿಶ್ವನಾಥ್ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.