ಹಾರೋಹಳ್ಳಿ: ಪುರಾತನ ಕಾಲದಿಂದಲೂ ಮಠಗಳು ಅಪಾರ ಜನ ಸೇವೆ ಮಾಡುತ್ತಿವೆ ಎಂದು ಕೇಂದ್ರ ಸಚಿವ ವಿ.ಸೋಮಣ್ಣ ಹೇಳಿದರು. ಮರಳವಾಡಿ ಹೋಬಳಿ ತಮಿಳುನಾಡು ಗಡಿ ಭಾಗದ ಮಲಿಗುಡ್ಡ ಮಠದ ನೂತನ ಕಟ್ಟಡ ಉದ್ಘಾಟಿಸಿ ಮಾತನಾಡಿದರು.
ಮಲಿಗುಡ್ಡೆ ಮಠದ ಮಠಾಧೀಶ ಭುವನೇಶ್ವರಾಧ್ಯ, ಮಠಗಳು ಸಮಾಜಕ್ಕೆ ಸಲ್ಲಿಸುವ ತ್ಯಾಗ ಮತ್ತು ಸೇವೆಯೇ ಮುಖ್ಯ. ಶೈಕ್ಷಣಿಕ ಮತ್ತು ಧಾರ್ಮಿಕವಾಗಿ ತಮ್ಮದೆ ಕೊಡುಗೆ ನೀಡಿವೆ. ಬಸವಣ್ಣ ಅವರು ಧಾರ್ಮಿಕ ಚಿಂತನೆಗಳ ಪ್ರಚಾರ ಮಾಡುವಾಗ ಕನ್ನಡ ಉಳಿಸುವ ಕೆಲಸ ಮಾಡಿದ್ದಾರೆ ಎಂದರು.
ದೇಗುಲ ಮಠದ ಶಿವರುದ್ರಸ್ವಾಮೀಜಿ, ಮರಳೆಗವಿ ಮಠದ ಮುಮ್ಮಡಿ ಶಿವರುದ್ರ ಸ್ವಾಮೀಜಿ, ಥಳಿ ಶಾಸಕ ಟಿ.ರಾಮಚಂದ್ರನ್, ಹೊಸೂರು ಶಾಸಕ ಪ್ರಕಾಶ್ ಸುತ್ತಮುತ್ತಲಿನ ಗ್ರಾಮಸ್ಥರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.