ADVERTISEMENT

ಕೈ–ದಳ ನಡುವೆ ಅರಳಿದ ಕಮಲ

ಶೂನ್ಯದಿಂದ ಶತಕದ ಸಾಧನೆ; ಸಂಖ್ಯಾಬಲದಲ್ಲಿ ಕಾಂಗ್ರೆಸ್‌ ಬೆಂಬಲಿತರು ಮುಂದು

​ಪ್ರಜಾವಾಣಿ ವಾರ್ತೆ
Published 1 ಜನವರಿ 2021, 2:39 IST
Last Updated 1 ಜನವರಿ 2021, 2:39 IST
ssss
ssss   

ರಾಮನಗರ: ಜಿಲ್ಲೆಯಲ್ಲಿ ಇದೇ ಮೊದಲ ಬಾರಿಗೆ ಗ್ರಾ.ಪಂ. ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತರ ಸಂಖ್ಯಾ ಬಲ ಮೂರಂಕಿ ದಾಟಿದ್ದು, ಕಾಂಗ್ರೆಸ್ ಹಾಗೂ ಜೆಡಿಎಸ್‌ ಪಾರುಪತ್ಯಕ್ಕೆ ತಕ್ಕ ಎದಿರೇಟು ನೀಡಿದೆ.

ಬಿಜೆಪಿ ಮಖಂಡರು ಹೇಳುವಂತೆ ಜಿಲ್ಲೆಯ 118 ಗ್ರಾ.ಪಂ,ಗಳ ಪೈಕಿ ಪಕ್ಷದ ಬೆಂಬಲಿತರಾಗಿ 235 ಅಭ್ಯರ್ಥಿಗಳು ಆರಿಸಿ ಬಂದಿದ್ದಾರೆ. ಪ್ರತಿ ಪಂಚಾಯಿತಿಗೆ ಸರಾಸರಿ ಇಬ್ಬರಂತೆ ಆಯ್ಕೆಯಾಗಿದ್ದಾರೆ. ಇಂತಹದ್ದೊಂದು ಅವಿಸ್ಮರಣೀಯ ಸಾಧನೆಯಿಂದ ಪಕ್ಷದ ಮುಖಂಡರು ಹಿಗ್ಗತೊಡಗಿದ್ದಾರೆ. ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಪಾಲಿಗೂ ಇದು ಎಚ್ಚರಿಕೆಯ ಗಂಟೆಯಾಗಿದೆ.

ಬೆಂಗಳೂರು ನಗರಕ್ಕೆ ಅತಿ ಸನಿಹದಲ್ಲೇ ಇದ್ದರೂ ಜಿಲ್ಲೆಯಲ್ಲಿ ಬಿಜೆಪಿ ಈವರೆಗೆ ಬಹುತೇಕ ಗ್ರಾ.ಪಂ.ಗಳಲ್ಲಿ ಖಾತೆ ತೆರೆಯಲು ಸಹ ಆಗಿರಲಿಲ್ಲ. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌, ಸಂಸದ ಡಿ.ಕೆ.ಸುರೇಶ್‌ ನೇತೃತ್ವದ
ಕಾಂಗ್ರೆಸ್‌ ಮತ್ತು ಇನ್ನೊಂದೆಡೆ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ನಾಯಕತ್ವದ ಜೆಡಿಎಸ್ ಈ ಎರಡೂ ಘಟಾನುಘಟಿ ನಾಯಕರ ನೇತೃತ್ವದ ಪಕ್ಷಗಳ ನಡುವೆ ಕಮಲ ಪಾಳಯ ತಿಣುಕಾಡುತ್ತಲೇ
ಇತ್ತು. ಈ ಬಾರಿ ಜಿಲ್ಲಾ ಉಸ್ತುವಾರಿ ಸಚಿವರೂ ಆದ ಉಪ ಮುಖ್ಯಮಂತ್ರಿ ಡಾ.ಸಿ.ಎನ್. ಅಶ್ವತ್ಥನಾರಾಯಣ ಸ್ವತಃ ಗ್ರಾ.ಪಂ. ಪ್ರಚಾರಕ್ಕೆ ಇಳಿಯುವ ಮೂಲಕ ಕಾರ್ಯಕರ್ತರಲ್ಲಿ ಉತ್ಸಾಹ ತುಂಬಿದ್ದರು. ಅಲ್ಲದೇ ಹೋಬಳಿ
ಮಟ್ಟದಲ್ಲಿ ಸಭೆಗಳನ್ನು ಆಯೋಜಿಸಿ ಗಮನ ಸೆಳೆದಿದ್ದರು. ಆಡಳಿತ ಪಕ್ಷದ ಪರವಾಗಿ ಇದರಿಂದ ಜನರ ಒಲವು ಹೆಚ್ಚಿದೆ. ಅದರಲ್ಲೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ರ ಕ್ಷೇತ್ರ
ವಾದ ಕನಕಪುರ ತಾಲ್ಲೂಕಿನಲ್ಲೇ
50ಕ್ಕೂ ಹೆಚ್ಚು ಬೆಂಬಲಿತರು ಆಯ್ಕೆ
ಯಾಗುವ ಮೂಲಕ ಗಮನ ಸೆಳೆದಿದ್ದಾರೆ. ಇಲ್ಲಿ ಬಿಜೆಪಿ ಬೆಂಬಲಿತರು ಜೆಡಿಎಸ್‌ಗೆ ಸಮನಾಗಿ ಸ್ಪರ್ಧೆ ನೀಡಿದ್ದಾರೆ. ಉಳಿ
ದಂತೆ ಮಾಗಡಿ ತಾಲ್ಲೂ
ಕಿನಲ್ಲಿ 40, ರಾಮನಗರ ತಾಲ್ಲೂಕಿನಲ್ಲಿ 22 ಸ್ಥಾನಗಳಲ್ಲಿ ಬಿಜೆಪಿ ಬೆಂಬಲಿತರು ಗೆದ್ದಿದ್ದಾರೆ. ಚನ್ನಪಟ್ಟಣದಲ್ಲಿ ಮಾತ್ರ ಬಿಜೆಪಿ ಬೆಂಬಲಿತರ ಸಾಧನೆ ನಿರೀಕ್ಷಿತ ಮಟ್ಟದಲ್ಲಿ ಇಲ್ಲ. ಇಲ್ಲಿ ವಿಧಾನ ಪರಿಷತ್‌ ಸದಸ್ಯ ಸಿ.ಪಿ. ಯೋಗೇಶ್ವರ್‌ ನೇತೃತ್ವದಲ್ಲಿ ಪ್ರಚಾರ ನಡೆದಿದ್ದು, ಅತಿ ಹೆಚ್ಚು ಸ್ಥಾನಗಳಲ್ಲಿ ಗೆಲ್ಲುವ ನಿರೀಕ್ಷೆ ಇತ್ತು.

ADVERTISEMENT

ಆದರೆ 120–140 ಸ್ಥಾನಗಳಲ್ಲಿ ಮಾತ್ರ ಪಕ್ಷದ ಬೆಂಬಲಿತರು ಗೆದ್ದಿದ್ದಾರೆ. ಇಲ್ಲಿ ಜೆಡಿಎಸ್‌ ಮೇಲುಗೈ ಸಾಧಿಸಿದೆ. ಆದರೆ ಈ ತಾಲ್ಲೂಕಿನಲ್ಲಿ ಕಾಂಗ್ರೆಸ್‌ ಸಾಧನೆ ಮಾತ್ರ ಬಿಜೆಪಿಗಿಂತ ಕಳಪೆ ಆಗಿ
ರುವುದು ಕೈ ಪಾಳಯದ ನಾಯಕರನ್ನು ಚಿಂತೆಗೀಡು ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.