ADVERTISEMENT

ಅಲ್ ಖೈದಾ ಮೂಗು ತೂರಿಸುವ ಅಗತ್ಯ ಇಲ್ಲ; ಅಶ್ವತ್ಥನಾರಾಯಣ

​ಪ್ರಜಾವಾಣಿ ವಾರ್ತೆ
Published 8 ಏಪ್ರಿಲ್ 2022, 7:54 IST
Last Updated 8 ಏಪ್ರಿಲ್ 2022, 7:54 IST
   

ರಾಮನಗರ: ದೇಶದ ವ್ಯವಸ್ಥೆ, ಧರ್ಮದ ವಿಚಾರದಲ್ಲಿ ಅಲ್ ಖೈದಾದಂತಹ ಸಂಘಟನೆಗಳು ಮೂಗು ತೂರಿಸುವ ಅಗತ್ಯ ಇಲ್ಲ ಎಂದು ಉನ್ನತ ಶಿಕ್ಷಣ ಸಚಿವ ಡಾ. ಸಿ.ಎನ್. ಅಶ್ವತ್ಥನಾರಾಯಣ ಹೇಳಿದರು.

ನಗರದಲ್ಲಿ ಶುಕ್ರವಾರ ಪತ್ರಕರ್ತರ ಜೊತೆ ಅವರು ಮಾತನಾಡಿದರು. ಆರ್ ಎಸ್ ಎಸ್ ನವರೇ ವಿಡಿಯೊ ಬಿಡುಗಡೆ ಮಾಡಿದ್ದಾರೆ ಎಂಬ ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು ' ಹಿರಿಯರಾದ ಸಿದ್ದರಾಮಯ್ಯ ಸಾಕ್ಷ್ಯ ನೀಡಬೇಕು. ಸುಮ್ಮನೆ ಹೇಳಿಕೆ ನೀಡಬಾರದು' ಎಂದರು.

ಸರ್ಕಾರ ಎಂದಿಗೂ ಧರ್ಮ ಆಧರಿತ ರಾಜಕಾರಣ‌ ಮಾಡುವುದಿಲ್ಲ.‌ ಸಂವಿಧಾನ ಆಧಾರಿತವಾಗಿ ಕೆಲಸ ಮಾಡುತ್ತೇವೆ ಎಂದರು.

ADVERTISEMENT

ಮಾರುಕಟ್ಟೆಗಳಲ್ಲಿ‌ ಮುಸ್ಲಿಮರಿಗೆ ಬಹಿಷ್ಕಾರ ಹಾಕುವಂತೆ ಕರೆ ನೀಡುತ್ತಿರುವ ಕುರಿತು ಪ್ರತಿಕ್ರಿಯಿಸಿದ ಅವರು ' ಸರ್ಕಾರಿ ಮಾರುಕಟ್ಟೆಗಳಲ್ಲಿ‌ ಎಲ್ಲರಿಗೂ‌ ಮುಕ್ತ ಅವಕಾಶ ಇದೆ. ರೈತರಿಗೂ ತಮ್ಮ‌ ಉತ್ಪನ್ನ ಯಾರಿಗಾದರೂ‌ ಮಾರುವ ಅವಕಾಶ ಇದೆ. ಸರ್ಕಾರ ಅಂತಹ ಯಾವುದೇ ಬಹಿಷ್ಕಾರ ಹೇಳಿಕೆಗಳನ್ನು ಬೆಂಬಲಿಸುವುದಿಲ್ಲ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.