ಮಾಗಡಿ (ಕುದೂರು): ಕೆಂಪೇಗೌಡರು ನಿರ್ಮಿಸಿದ ಹೊಸಹಳ್ಳಿಯ ಐತಿಹಾಸಿಕ ಸೋಮೇಶ್ವರ ದೇವಸ್ಥಾನದ ಹಿಂಭಾಗದ ಬೃಹತ್ ಚಕ್ರ ಬಸವಣ್ಣ ವಿಗ್ರಹವನ್ನು ನಿಧಿ ಆಸೆಗಾಗಿ ಅರ್ಧ ಅಡಿಯಷ್ಟು ಪಕ್ಕಕ್ಕೆ ಸರಿಸಲಾಗಿದೆ.
ಮಂಗಳವಾರ ರಾತ್ರಿ ವಿಗ್ರಹದ ತಳಭಾಗವನ್ನು ಹಾರೆ ಕೋಲಿನಿಂದ ಅಗೆದಿರುವ ನಿಧಿಕಳ್ಳರು ವಿಗ್ರಹವನ್ನು ಪಕ್ಕಕ್ಕೆ ಸರಿಸಿ, ಹಾಗೆ ಬಿಟ್ಟು ಹೋಗಿದ್ದಾರೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ.
ಪ್ರತಿ ವರ್ಷದಂತೆ ಹೊಸಹಳ್ಳಿ ಗ್ರಾಮಸ್ಥರು ಸೋಮವಾರ ಸಂಜೆ ಮಳೆಗಾಗಿ ಬಸವಣ್ಣನ ವಿಗ್ರಹಕ್ಕೆ ಪೂಜೆ ಸಲ್ಲಿಸಿದ್ದರು.ದೇವಸ್ಥಾನದಲ್ಲಿ ಈ ಹಿಂದೆ ಕಳ್ಳತನ ಆಗಿತ್ತು. ದೇವಸ್ಥಾನದ ಮೂಲ ಗೋಪುರವನ್ನು ಕಳ್ಳರು ಒಡೆದು ಹಾಕಿದ್ದರು.
ಸೋಮೇಶ್ವರ ದೇವಸ್ಥಾನ ಪ್ರಾಚ್ಯವಸ್ತು ಇಲಾಖೆಗೆ ಸೇರಿದ್ದು ಇಂತಹ ಘಟನೆ ನಡೆದರೂ ಇಲಾಖೆ ಯಾವುದೇ ಕ್ರಮ ಜರುಗಿಸುತ್ತಿಲ್ಲ. ಅಭಿವೃದ್ಧಿಪಡಿಸುವ ಕೆಲಸವನ್ನು ಪ್ರಾಚ್ಯವಸ್ತು ಇಲಾಖೆ ಮಾಡುತ್ತಿಲ್ಲ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ಗ್ರಾಮಸ್ಥರು ಪ್ರತಿ ವರ್ಷ ಭರಣಿ ಮಳೆಗಾಗಿ ಬಸವಣ್ಣನಿಗೆ ಆರತಿ ಪೂಜೆ ಮಾಡುತ್ತಾರೆ. ರಾಜ್ಯ ಪ್ರಾಚ್ಯವಸ್ತು ಇಲಾಖೆ ದೇವಸ್ಥಾನದ ಅಭಿವೃದ್ಧಿಗೆ ಹೆಚ್ಚಿನ ಒತ್ತು ಕೊಡಬೇಕು ಮತ್ತು ನಿಧಿ ಕಳ್ಳರನ್ನು ಬಂಧಿಸಬೇಕು
-ಶಿವರಾಜುಹೊಸಹಳ್ಳಿ ಗ್ರಾಮಸ್ಥ
ನಿಧಿ ಕಳ್ಳರು ಚಕ್ರ ಬಸವಣ್ಣ ವಿಗ್ರಹಕ್ಕೆ ಧಕ್ಕೆ ಮಾಡಿಲ್ಲ. ಪಕ್ಕಕ್ಕೆ ಸರಿಸಿದ್ದಾರೆ. ಬಸವಣ್ಣ ವಿಗ್ರಹಕ್ಕೆ ಧಕ್ಕೆಯಾಗದ ಆಗದ ಕಾರಣ ಮತ್ತೆ ಶಾಸ್ತ್ರೋಕ್ತವಾಗಿ ಅದೇ ಜಾಗದಲ್ಲಿ ಪ್ರತಿಷ್ಠಾಪಿಸಲಾಗುವುದು
-ರಂಗಣ್ಣ ಗ್ರಾ.ಪಂ.ಮಾಜಿ ಅಧ್ಯಕ್ಷ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.