ADVERTISEMENT

ಬೆಂಗಳೂರು-ಮೈಸೂರು ಹೆದ್ದಾರಿ ಮೇಲ್ಸೇತುವೆ ಮೇಲೆ‌ ಒರಗಿ ನಿಂತ ಟಿಪ್ಪರ್ ಲಾರಿ

​ಪ್ರಜಾವಾಣಿ ವಾರ್ತೆ
Published 17 ಮಾರ್ಚ್ 2023, 8:31 IST
Last Updated 17 ಮಾರ್ಚ್ 2023, 8:31 IST
   

ರಾಮನಗರ. ತಾಲ್ಲೂಕಿನ ಸಂಗನಬಸವನ ದೊಡ್ಡಿ ಬಳಿ ಬೆಂಗಳೂರು- ಮೈಸೂರು ಹೆದ್ದಾರಿಯಲ್ಲಿ ಶುಕ್ರವಾರ ಟಿಪ್ಪರ್ ಲಾರಿಯೊಂದು ಮೇಲ್ಸೇತುವೆ ಮೇಲೆ ಒರಗಿ ನಿಂತಿದ್ದು, ಅನಾಹುತವೊಂದು ತಪ್ಪಿದೆ.

ಕಾರು ಹಾಗೂ‌ ಲಾರಿ ನಡುವೆ ಡಿಕ್ಕಿ ಸಂಭವಿಸಿದ್ದು, ಎಂ ಸ್ಯಾಂಡ್ ತುಂಬಿದ್ದ ಲಾರಿಯು ಹೆದ್ದಾರಿ ಮೇಲ್ಸೇತುವೆ ಮೇಲೆ ಒರಗಿ ನಿಂತಿತು. ಸೇತುವೆ ಕೆಳಗೆ ಎಕ್ಸ್ ಪ್ರೆಸ್ ವೇನಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ವಾಹನಗಳು ಸಂಚರಿಸುತ್ತಿದ್ದು, ಲಾರಿ ಕೆಳಗೆ ಉರುಳಿ ಬಿದ್ದಿದ್ದರೆ ಅವಘಡ ಸಂಭವಿಸುವ ಸಾಧ್ಯತೆ ಇತ್ತು.

ಘಟನೆಯಿಂದ ಯಾರಿಗೂ ಹೆಚ್ಚು ತೊಂದರೆ ಆಗಿಲ್ಲ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.