ADVERTISEMENT

ರಾಮನಗರ: ಇಬ್ಬರ ವರದಿಗಳೂ ನೆಗೆಟಿವ್

​ಪ್ರಜಾವಾಣಿ ವಾರ್ತೆ
Published 18 ಮಾರ್ಚ್ 2020, 9:14 IST
Last Updated 18 ಮಾರ್ಚ್ 2020, 9:14 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ರಾಮನಗರ: ಜಿಲ್ಲೆಯಲ್ಲಿ ಕೊರೋನಾ ವೈರಸ್ ತಗುಲಿದ್ದ ಶಂಕೆ ಮೇಲೆ ಆಸ್ಪತ್ರೆಗೆ ದಾಖಲಾಗಿದ್ದ ಇಬ್ಬರ ಗಂಟಲು ದ್ರವದ ವರದಿಗಳು ಬಂದಿದ್ದು, ಕೋವಿಡ್-19 ಸೋಂಕು ಕಂಡುಬಂದಿಲ್ಲ.

ಕಳೆದ ವಾರ ಚನ್ನಪಟ್ಟಣದ ಯುವತಿಯೊಬ್ಬರು ಜರ್ಮನಿಯಿಂದ ಪಟ್ಟಣಕ್ಕೆ ವಾಪಸ್ ಆಗಿದ್ದರು. ಸ್ವಲ್ಪ ಪ್ರಮಾಣದಲ್ಲಿ ಜ್ವರ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಜಿಲ್ಲಾ ಆಸ್ಪತ್ರೆಯಲ್ಲಿ ಅವರನ್ನು ದಾಖಲಿಸಿಕೊಂಡು ಚಿಕಿತ್ಸೆ ನೀಡಲಾಗುತಿತ್ತು.

ಅಂತೆಯೇ ಇಂಡೊನೇಷ್ಯಾ ಹಾಗೂಬಾಲಿಗೆ ಭೇಟಿ ನೀಡಿ ಬಂದಿದ್ದ ಮಾಗಡಿಯ ಯುವಕನೊಬ್ಬನನ್ನು ಮಾಗಡಿ ಸರ್ಕಾರಿ ಆಸ್ಪತ್ರೆಯಲ್ಲಿನ ವಿಶೇಷ ಘಟಕದಲ್ಲಿಟ್ಟು ನಿಗಾ ವಹಿಸಲಾಗಿತ್ತು. ಈ ಇಬ್ಬರ ಗಂಟಲ‌ ದ್ರವವನ್ನು ಪರೀಕ್ಷೆ ಮಾಡಲಾಗಿದ್ದು, ನೆಗೆಟಿವ್ ಎಂದು ವರದಿ ಬಂದಿದೆ. ಹೀಗಾಗಿ ಜಿಲ್ಲೆಯಲ್ಲಿ ಈವರೆಗೆ ಯಾವುದೇ ಪ್ರಕರಣ ಪತ್ತೆ ಆಗಿಲ್ಲ. ಜಿಲ್ಲೆಯ ಜನರು ಆತಂಕ ಪಡುವ ಅಗತ್ಯ ಇಲ್ಲ ಎಂದು ಜಿಲ್ಲಾಧಿಕಾರಿ ಎಂ.ಎಸ್. ಅರ್ಚನಾ ತಿಳಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.