ಮಾಗಡಿ: ಕನ್ನಡ ಸಿನಿಮಾದ ಮೇರು ನಟ ಡಾ.ವಿಷ್ಣುವರ್ಧನ್ ಅವರ 75ನೇ ಜನ್ಮದಿನವನ್ನು ಅಭಿಮಾನಿಗಳು ಗುರುವಾರ ಅದ್ದೂರಿಯಾಗಿ ಆಚರಿಸಿದರು. ಪಟ್ಟಣದ ಬಸ್ ನಿಲ್ದಾಣದ ಬಳಿ ಇರುವ ಅವರ ಪ್ರತಿಮೆಗೆ ಅಭಿಮಾನಿಗಳು ಮಾಲಾರ್ಪಣೆ ಮಾಡಿದರು.
ಅಭಿಮಾನಿ ಹಳ್ಳಿಕಾರ್ ಹನುಮಂತು ಮಾತನಾಡಿ, ‘ರಾಜ್ಯ ಸರ್ಕಾರ ವಿಷ್ಣುವರ್ಧನ್ ಅವರಿಗೆ ಮರಣೋತ್ತರ ಕರ್ನಾಟಕ ರತ್ನ ಪ್ರಶಸ್ತಿ ನೀಡಿದ್ದು ಸಂತೋಷದ ವಿಷಯ. ಆದರೆ, ಅವರ ಸಮಾಧಿಯನ್ನು ಕೆಡವಿದ್ದನ್ನು ತೀವ್ರವಾಗಿ ವಿರೋಧಿಸುತ್ತೇವೆ ಎಂದರು.
ರೈತ ಸಂಘದ ಅಧ್ಯಕ್ಷ ಲೋಕೇಶ್, ವಿಷ್ಣುವರ್ಧನ್ ಸಮಾಧಿ ಸ್ಥಳದಲ್ಲಿ ಹೊಸ ಸ್ಮಾರಕ ನಿರ್ಮಿಸಬೇಕು ಎಂದು ಮನವಿ ಮಾಡಿದರು.
ಪುರಸಭಾ ಸದಸ್ಯ ಪುರುಷೋತ್ತಮ್, ವಿಷ್ಣುವರ್ಧನ್ ಅಭಿಯನದ ಚಿತ್ರಗಳಲ್ಲಿನ ಸಾಮಾಜಿಕ ಸಂದೇಶ ಸ್ಮರಿಸಿದರು. ಪುರಸಭಾ ಸದಸ್ಯ ಅಶ್ವಥ್, ನವ ನಿರ್ಮಾಣ ವೇದಿಕೆ ರಾಜ್ಯಾಧ್ಯಕ್ಷ ಶ್ರೀಪತಿಹಳ್ಳಿ ರಾಜಣ್ಣ, ಮಾರಣ್ಣ ಮಾತನಾಡಿದರು.
ಕಾರ್ಯಕ್ರಮದ ಅಂಗವಾಗಿ ಅನ್ನಸಂತರ್ಪಣೆ ನಡೆಸಲಾಯಿತು. ಜನ್ಮದಿನದ ಅಂಗವಾಗಿ ಸರ್ಕಾರಿ ಶಾಲೆ ಮಕ್ಕಳಿಗೆ ಪಠ್ಯ ಸಾಮಗ್ರಿ ವಿತರಿಸಲಾಯಿತು. ಜಿಲ್ಲಾ ರೈತ ಯುವ ಘಟಕ ಅಧ್ಯಕ್ಷ ರವಿ, ಮುಖಂಡರಾದ ರೇವಣ್ಣ ಮಹಾಂತೇಶ್, ನವೀನ್, ಗಂಗರೇವಣ್ಣ, ಮುರಳಿ, ತಟವಾಳ್ ನಾಗರಾಜು, ಹೊಸಹಳ್ಳಿ ರಂಗಣಿ, ಚಿಕ್ಕಣ್ಣ ಸೇರಿದಂತೆ ಇತರರು ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.