ADVERTISEMENT

‘ಪ್ರತಿಭಟನೆ ದನಿಗಳು’ ಲೋಕಾರ್ಪಣೆ

'Voices of Protest' book release

​ಪ್ರಜಾವಾಣಿ ವಾರ್ತೆ
Published 11 ಜನವರಿ 2023, 6:42 IST
Last Updated 11 ಜನವರಿ 2023, 6:42 IST
‘ಚನ್ನಪಟ್ಟಣದ ನೆಲದೊಡಲ ಪ್ರತಿಭಟನೆ ದನಿಗಳು‘ ಪುಸ್ತಕ ಬಿಡುಗಡೆ ಕಾರ್ಯಕ್ರಮ
‘ಚನ್ನಪಟ್ಟಣದ ನೆಲದೊಡಲ ಪ್ರತಿಭಟನೆ ದನಿಗಳು‘ ಪುಸ್ತಕ ಬಿಡುಗಡೆ ಕಾರ್ಯಕ್ರಮ   

ಚನ್ನಪಟ್ಟಣ: ಸಮರ್ಪಣಾ ಮನೋಭಾವದಿಂದ ಮಾತ್ರ ಹೊಸ ಸಮಾಜ ಕಟ್ಟಲು ಸಾಧ್ಯ ಎಂದು ಕಲಬುರಗಿ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ ಡಾ.ಅಪ್ಪಗೆರೆ ಸೋಮಶೇಖರ್ ಅಭಿಪ್ರಾಯಪಟ್ಟರು.

ನಗರದ ಶತಮಾನೋತ್ಸವ ಭವನದಲ್ಲಿ ಭಾರತ ಸಂವಿಧಾನ ಬಳಗ, ಚನ್ನಪಟ್ಟಣ ವತಿಯಿಂದ ಶನಿವಾರ ಆಯೋಜಿಸಿದ್ದ ‘ಚನ್ನಪಟ್ಟಣದ ನೆಲದೊಡಲ ಪ್ರತಿಭಟನೆ ದನಿಗಳು’ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದರು.
ಡಾ. ಅಂಬೇಡ್ಕರ್, ಬುದ್ಧ, ಬಸವ, ನಾರಾಯಣಗುರು ಹಾದಿಯಲ್ಲಿ ಹೊಸ ತಲೆಮಾರಿನ ಯುವಕರು ಶ್ರಮಿಸಬೇಕು ಎಂದರು.

ಅಧ್ಯಕ್ಷತೆ ವಹಿಸಿದ್ದ ತಾಲ್ಲೂಕು ಜೆಡಿಎಸ್ ಅಧ್ಯಕ್ಷ ಎಚ್.ಸಿ. ಜಯಮುತ್ತು ಮಾತನಾಡಿ, ಸಮಾಜದಲ್ಲಿ ಪ್ರತಿಯೊಬ್ಬರಿಗೂ ತನ್ನದೇ ಗೌರವ, ಸ್ಥಾನಮಾನ ಇದೆ. ತಮ್ಮಲ್ಲಿನ ಕೀಳರಿಮೆ ಬಿಟ್ಟು, ಹಿರಿಯ ಚೇತನಗಳನ್ನು ಸ್ಫೂರ್ತಿಯನ್ನಾಗಿ ಇಟ್ಟುಕೊಂಡು ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಬೇಕು ಎಂದರು.

ADVERTISEMENT

ವೈದ್ಯ ಡಾ.ಡಿ.ಆರ್. ಭಗತ್ ರಾಮ್, ಹಿರಿಯ ದಲಿತ ಮುಖಂಡ ಸಿದ್ದರಾಮಯ್ಯ ಪುಸ್ತಕ ಬಿಡುಗಡೆ ಮಾಡಿದರು.

ತಾಲ್ಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಸ್.ಆರ್. ಪ್ರಮೋದ್, ಬಿಜೆಪಿ ಮುಖಂಡ ಎಂ.ಎನ್. ಆನಂದಸ್ವಾಮಿ, ಛಲವಾದಿ ಮಹಾಸಭಾ ತಾಲ್ಲೂಕು ಅಧ್ಯಕ್ಷ ವೈ.ಟಿ. ಹಳ್ಳಿ ಶಿವು, ಹಿರಿಯ ದಲಿತ ಮುಖಂಡರಾದ ಎಸ್.ಸಿ. ಶೇಖರ್, ಪಟ್ಲು ವೆಂಕಟೇಶ್, ನಾರಾಯಣಮೂರ್ತಿ, ಎಂ.ಎಲ್. ಶಂಕರಪ್ಪ, ಮಂಗಳವಾರಪೇಟೆ ಕೆ. ವೆಂಕಟೇಶ್, ಎಸ್. ಕಾಂತರಾಜು, ತೀರ್ಥಪ್ರಸಾದ್ ಹಾಗೂ ಸಂವಿಧಾನ ಬಳಗದ ರವಿಕುಮಾರ್, ಮತ್ತೀಕೆರೆ ಹನುಮಂತಯ್ಯ, ಸುರೇಶ್ ಗೌತಮ್, ಶಶಿಕುಮಾರ್, ಪಿ.ವಿಷಕಂಠಯ್ಯ, ಸಿದ್ದರಾಮು, ಭರತ್, ಸತೀಶ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.