
ವಾಣಿಜ್ಯ ಬಳಕೆ ಎಲ್‌ಪಿಜಿ ಸಿಲಿಂಡರ್
ಚನ್ನಪಟ್ಟಣ (ರಾಮನಗರ): ಚನ್ನಪಟ್ಟಣ ತಾಲ್ಲೂಕು ವ್ಯಾಪ್ತಿಯಲ್ಲಿ ಬರುವ ಎಲ್ಲಾ ಕಲ್ಯಾಣ ಮಂಟಪಗಳು, ಹೋಟೆಲ್‌ಗಳು, ಬೇಕರಿಗಳು, ಬೀದಿ ಬದಿಯ ತಿನಿಸು ವ್ಯಾಪಾರದ ಗಾಡಿಗಳಲ್ಲಿ ಗೃಹಬಳಕೆ ಸಿಲಿಂಡರ್‌ಗಳನ್ನು ಉಪಯೋಗಿಸುತ್ತಿರುವುದು ತಿಳಿದುಬಂದಿದೆ. ಇದು ಲಿಕ್ವಿಪೈಯ್ಡ್ ಪೆಟ್ರೋಲಿಂ ಗ್ಯಾಸ್ (ರೆಗುಲೇಷನ್ ಆಫ್ ಸಪ್ಲೈ ಆ್ಯಂಡ್ ಡಿಸ್ಟ್ರಿಬ್ಯೂಷನ್) ಆರ್ಡರ್-2000 ಉಲ್ಲಂಘಿಸಿದಂತಾಗುತ್ತದೆ.
ಹಾಗಾಗಿ,ವಾಣಿಜ್ಯ ಉದ್ದೇಶಗಳಿಗೆ ಗೃಹ ಬಳಕೆ ಸಿಲಿಂಡರ್‌ಗಳನ್ನು ಉಪಯೋಗಿಸುವಂತಿಲ್ಲ. ಇದು ಕಾನೂನು ಬಾಹಿರವಾಗಿರುತ್ತದೆ. ಆದರೂ ಯಾರಾದರೂ ಬಳಸುತ್ತಿರುವುದು ಕಂಡುಬಂದರೆ ಅನಿರೀಕ್ಷಿತವಾಗಿ ಭೇಟಿ ನೀಡಿ ತನಿಖೆ ನಡೆಸಲಾಗುವುದು. ತಪ್ಪಿತಸ್ತರ ವಿರುದ್ದ ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗುವುದು.
ಆದ್ದರಿಂದ ಎಲ್ಲಾ ಕಲ್ಯಾಣ ಮಂಟಪಗಳು, ಹೋಟೆಲ್‌ಗಳು, ಬೇಕರಿಗಳು, ಬೀದಿ ಬದಿಯ ತಿನಿಸು ವ್ಯಾಪಾರದ ಗಾಡಿಗಳಲ್ಲಿ ವಾಣಿಜ್ಯ ಬಳಕೆಯ ಸಿಲಿಂಡರ್‌ಗಳನ್ನು ಮಾತ್ರ ಉಪಯೋಗಿಸಬೇಕು ಎಂದು ಚನ್ನಪಟ್ಟಣ ತಹಶೀಲ್ದಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.