ಚನ್ನಪಟ್ಟಣ: ಬಾಣಗಹಳ್ಳಿ ಗ್ರಾಮ ಪಂಚಾಯತಿ ಕುಡಿಯುವ ನೀರು ಪೂರೈಸುವ ಪೈಪ್‌ಲೈನ್ ಅಳವಡಿಸದೆ ಅನಗತ್ಯ ತೊಂದರೆ ನೀಡುತ್ತಿದೆ ಎಂದು ಆರೋಪಿಸಿ ತಾಲ್ಲೂಕಿನ ನಾಗಾಪುರದ ವ್ಯಕ್ತಿಯೊಬ್ಬರು ಕುಟುಂಬ ಸದಸ್ಯರ ಸಮೇತ ತಾಲ್ಲೂಕು ಪಂಚಾಯಿತಿ ಕಚೇರಿ ಎದುರು ಸೋಮವಾರ ಪ್ರತಿಭಟನೆ ನಡೆಸಿದರು.
ನಾಗಾಪುರದ ಅನಂತ ಎಂಬುವರು ತಮ್ಮ ತಾಯಿ ಹಾಗೂ ಇಬ್ಬರು ಮಕ್ಕಳ ಜೊತೆ ಪ್ರತಿಭಟನೆ ನಡೆಸಿದರು.
‘ಗ್ರಾಮದ ಹೊರವಲಯದಲ್ಲಿರುವ ಮನೆಗೆ ನೀರು ಪೂರೈಸುವ ಪೈಪ್‌ಲೈನ್ ಅಳವಡಿಸಲು ಗ್ರಾ.ಪಂ. ಅಧಿಕಾರಿಗಳ ಸಲಹೆಯಂತೆ ಶುಲ್ಕ ಪಾವತಿಸಿದ್ದೇನೆ. ಶುಲ್ಕ ಕಟ್ಟಿದ ನಂತರವೂ ನೀರು ಪೂರೈಕೆ ಮಾಡದೆ ಅಲೆಸಲಾಗುತ್ತಿದೆ. ಈ ಬಗ್ಗೆ ಮನವಿ ಮಾಡಿಕೊಂಡರೂ ಪ್ರಯೋಜನವಾಗಿಲ್ಲ. ಹಾಗಾಗಿ ಸಮಸ್ಯೆಗೆ ಪರಿಹಾರ ಸಿಗುವವರೆಗೂ ಅಹೋರಾತ್ರಿ ಪ್ರತಿಭಟನೆ ಮಾಡುತ್ತೇವೆ’ ಎಂದು ಧರಣಿನಿರತರು ಪಟ್ಟು ಹಿಡಿದರು.
ಸ್ಥಳಕ್ಕೆ ಬಂದ ತಾ.ಪಂ. ಇ.ಒ ಸಂದೀಪ್, ಸಮಸ್ಯೆ ಇತ್ಯರ್ಥಕ್ಕೆ 15 ದಿನ ಸಮಯಾವಕಾಶ ಕೇಳಿದರು. ನಂತರ ಪ್ರತಿಭಟನೆ ವಾಪಸ್ ಪಡೆದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.