ADVERTISEMENT

ಮಂಚನಬೆಲೆ ಜಲಾಶಯಕ್ಕೆ ತಿಪ್ಪಗೊಂಡನಹಳ್ಳಿ ಜಲಾಶಯದ ನೀರು

​ಪ್ರಜಾವಾಣಿ ವಾರ್ತೆ
Published 6 ಫೆಬ್ರುವರಿ 2019, 14:32 IST
Last Updated 6 ಫೆಬ್ರುವರಿ 2019, 14:32 IST
ಮಾಗಡಿ ತಾಲ್ಲೂಕಿನ ಮಂಚನಬೆಲೆ ಜಲಾಶಯಕ್ಕೆ ತಿಪ್ಪಗೊಂಡನಹಳ್ಳಿ ಜಲಾಶಯದ ಕಲುಷಿತ ನೀರು ಹರಿದು ಮಲಿನಗೊಂಡಿದೆ
ಮಾಗಡಿ ತಾಲ್ಲೂಕಿನ ಮಂಚನಬೆಲೆ ಜಲಾಶಯಕ್ಕೆ ತಿಪ್ಪಗೊಂಡನಹಳ್ಳಿ ಜಲಾಶಯದ ಕಲುಷಿತ ನೀರು ಹರಿದು ಮಲಿನಗೊಂಡಿದೆ   

ಮಾಗಡಿ: ಬಹುಕೋಟಿ ವೆಚ್ಚದಲ್ಲಿ ತಿಪ್ಪಗೊಂಡನಹಳ್ಳಿ ಜಲಾಶಯದ ಹೂಳು ತೆಗೆಯುವ ಉದ್ದೇಶದಿಂದಜಲಾಶಯದ ನೀರನ್ನು ಮಂಚನಬೆಲೆ ಜಲಾಶಯಕ್ಕೆ ಹರಿಯ ಬಿಡಲಾಗಿದ್ದು, ಕುಡಿಯುವ ನೀರು ಕಲುಷಿತವಾಗುತ್ತಿದೆ ಎಂದು ತಾಲ್ಲೂಕು ಜಲಮೂಲ ಸಂರಕ್ಷಣಾ ಸಮಿತಿಯ ಸಂಚಾಲಕ ನೆಸೆಪಾಳ್ಯ ಮಂಜುನಾಥ ಆರೋಪಿಸಿದ್ದಾರೆ.

ತಿಪ್ಪಗೊಂಡನಹಳ್ಳಿ ಚಾಮರಾಜಸಾಗರದ ದುರಸ್ತಿ ಮತ್ತು ಅದರಲ್ಲಿ ತುಂಬಿರುವ ಹೂಳು ತೆಗೆಯಲು ಬೆಂಗಳೂರಿನ ಜಲಮಂಡಳಿ ಬಹುಕೋಟಿ ವೆಚ್ಚದಲ್ಲಿ ಕಾಮಗಾರಿ ಆರಂಭಿಸಿದೆ. ಈ ಕಾರಣ ಜಲಾಶಯದಲ್ಲಿ ತುಂಬಿದ್ದ ಕಲುಷಿತ ನೀರನ್ನು ಒಂದು ವಾರದಿಂದ ಮಂಚನಬೆಲೆ ಜಲಾಶಯಕ್ಕೆ ಹರಿಬಿಟ್ಟಿದೆ. ನೆಲಮಂಗಲದಿಂದ ಹರಿದು ಬರುವ ಕಾರ್ಖಾನೆ ಮತ್ತು ಒಳಚರಂಡಿ ಕಲುಷಿತ ನೀರು ತಿಪ್ಪಗೊಂಡನಹಳ್ಳಿ ಜಲಾಶಯದಲ್ಲಿ ತುಂಬಿತ್ತು. ಅದೇ ಕಲುಷಿತ ನೀರನ್ನು ಮಂಚನಬೆಲೆ ಜಲಾಶಯಕ್ಕೆ ಬಿಡುವುದನ್ನು ತಕ್ಷಣ ನಿಲ್ಲಿಸಬೇಕು ಎಂದು ಒತ್ತಾಯಿಸಿದರು.

‘ಮಂಚನಬೆಲೆ ಜಲಾಶಯದ ನೀರನ್ನು ಮಾಗಡಿ ಪಟ್ಟಣ ಮತ್ತು 26 ಹಳ್ಳಿಗಳ ಜನತೆ ಕುಡಿಯಲು ಬಳಸುತ್ತಿದ್ದೇವೆ. ಜಲಮಂಡಳಿಯ ಅವಿವೇಕದ ನಿರ್ಧಾರದಿಂದಾಗಿ ತಾಲ್ಲೂಕಿನ ಜನತೆ ಸಾಂಕ್ರಾಮಿಕ ರೋಗಗಳಿಗೆ ತುತ್ತಾಗಬೇಕಿದೆ. ಅರೆಬೆಂದ ಅಧಿಕಾರಿಗಳ ಹಣ ಮಾಡುವ ನಿರ್ಧಾರದಿಂದ ರೈತರ ಬದುಕು ನಾಶವಾಗಲಿದೆ. ಅಲ್ಲದೆ ತಿಪ್ಪಗೊಂಡನಹಳ್ಳಿ ಜಲಾಶಯದಲ್ಲಿ ನೀರು ಇದ್ದರೆ, ತಾಲ್ಲೂಕಿನ ಬಹುತೇಕ ಕೊಳವೆಬಾವಿಗಳಲ್ಲಿನ ಅಂತರ್ಜಲ ತುಂಬಿರುತ್ತದೆ’ ಎಂದರು.

ADVERTISEMENT

ಸಮಿತಿಯ ಪದಾಧಿಕಾರಿಗಳು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.