ADVERTISEMENT

ಇ.ಡಿ. ವಿಚಾರಣೆಗೆ ಸಂಪೂರ್ಣ ಸಹಕಾರ: ಸುರೇಶ್

​ಪ್ರಜಾವಾಣಿ ವಾರ್ತೆ
Published 11 ಫೆಬ್ರುವರಿ 2020, 16:54 IST
Last Updated 11 ಫೆಬ್ರುವರಿ 2020, 16:54 IST
ಡಿ ಕೆ ಸುರೇಶ್
ಡಿ ಕೆ ಸುರೇಶ್   

ರಾಮನಗರ: ನ್ಯಾಯಾಲಯದ ‌ಆದೇಶದಂತೆ ನಮ್ಮ ಮನೆಯಲ್ಲಿಯೇ ವಿಚಾರಣೆ ನಡೆದಿದ್ದು, ತಾಯಿ ಗೌರಮ್ಮ ಇ.ಡಿ. ಅಧಿಕಾರಿಗಳ ಎಲ್ಲ ಪ್ರಶ್ನೆಗಳಿಗೆ ಉತ್ತರಿಸಿದ್ದಾರೆ. ಮುಂದೆಯೂ ವಿಚಾರಣೆ ನಡೆಸಿದರೆ ಸಹಕಾರ ನೀಡುತ್ತೇವೆ ಎಂದು ಸಂಸದ ಡಿ.ಕೆ. ಸುರೇಶ್ ತಿಳಿಸಿದರು.

ಕೋಡಿಹಳ್ಳಿ ನಿವಾಸದಲ್ಲಿ ಮಂಗಳವಾರ ರಾತ್ರಿ ಇ.ಡಿ. ಅಧಿಕಾರಿಗಳಿಂದ ಗೌರಮ್ಮ ಅವರ ವಿಚಾರಣೆ ಮುಕ್ತಾಯದ ಬಳಿಕ ಅವರು ಮಾಧ್ಯಮದವರಿಗೆ ಪ್ರತಿಕ್ರಿಯೆ ನೀಡಿದರು.

‘ಅಮ್ಮ‌ನಿಗೆ‌ ಜ್ವರ ಬಂದಿತ್ತು. 80 ವರ್ಷ ವಯಸ್ಸಾದರೂ ಅಧಿಕಾರಿಗಳ ಪ್ರಶ್ನೆಗಳಿಗೆ ಸೂಕ್ತ ರೀತಿಯಲ್ಲಿ ಉತ್ತರಿಸಿದ್ದಾರೆ. ಗೊಂದಲ‌ ಸೃಷ್ಟಿಯಾಗಬಾರದು ಎನ್ನುವ ಕಾರಣಕ್ಕೆ ಇಲ್ಲಿಗೆ ಬರದಂತೆ ಅಭಿಮಾನಿಗಳಿಗೆ, ಕಾರ್ಯಕರ್ತರಿಗೆ ಹೇಳಿದ್ದೆವು. ಸಹಕರಿಸಿದ ಎಲ್ಲರಿಗೂ ಧನ್ಯವಾದ ತಿಳಿಸುತ್ತೇವೆ’ ಎಂದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.