ADVERTISEMENT

ಕೋವಿಡ್‌ಗೆ ಪತಿ ಬಲಿ: ಪತ್ನಿ ಆತ್ಮಹತ್ಯೆ

​ಪ್ರಜಾವಾಣಿ ವಾರ್ತೆ
Published 21 ಮೇ 2021, 2:51 IST
Last Updated 21 ಮೇ 2021, 2:51 IST
   

ಕನಕಪುರ: ಇಲ್ಲಿನ ಬಸವೇಶ್ವರ ನಗರದಲ್ಲಿ ಪತಿಯ ಸಾವಿನಿಂದ ಮನನೊಂದ ಮೂರು ತಿಂಗಳ ಗರ್ಭಿಣಿಯಾಗಿದ್ದ ಪತ್ನಿ ಗುರುವಾರ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಬೆಸ್ಕಾಂ ವಿಭಾಗೀಯ ಕಚೇರಿಯಲ್ಲಿ ಸಹಾಯಕರಾಗಿದ್ದ ನಂದಿನಿ (28) ಆತ್ಮಹತ್ಯೆ ಮಾಡಿಕೊಂಡವರು.

ತಂದೆ ಶಾಂತಮಲ್ಲಪ್ಪ ಅವರು ಕೆಇಬಿಯಲ್ಲಿ ಲೈನ್‌ಮನ್‌ ಆಗಿದ್ದು, ಕೆಲಸದಲ್ಲಿ ಇರುವಾಗಲೇ ತೀರಿಕೊಂಡಿ
ದ್ದರು. ಅನುಕಂಪದ ಆಧಾರದ ಮೇಲೆ ನಂದಿನಿ ಅವರಿಗೆ 3 ವರ್ಷಗಳ ಹಿಂದೆ ಬೆಸ್ಕಾಂನಲ್ಲಿ ತಂದೆಯ ಕೆಲಸ ಸಿಕ್ಕಿತ್ತು.

ADVERTISEMENT

ಎರಡು ವರ್ಷದ ಹಿಂದೆ ಮೈಸೂರು ಮೂಲದ ಉದ್ಯಮಿ ಸತೀಶ್‌ ಎಂಬುವರನ್ನು ಪ್ರೀತಿಸಿ ವಿವಾಹವಾಗಿದ್ದರು. ಇಲ್ಲಿನ ಬಸವೇಶ್ವರ ನಗರದಲ್ಲಿ ಮನೆ ಮಾಡಿಕೊಂಡು ನೆಲೆಸಿದ್ದರು. ಸತೀಶ್‌ ತಾಯಿ ಮೈಸೂರಿನಲ್ಲಿ ನೆಲೆಸಿದ್ದರು.

ಒಂದು ವಾರದ ಹಿಂದೆ ಸತೀಶ್‌ ತಾಯಿ ಕೊರೊನಾ ಸೋಂಕಿಗೆ ಬಲಿಯಾಗಿದ್ದರು. ಸತೀಶ್‌ಗೂ ಸೋಂಕು ದೃಢಪಟ್ಟು ಆಸ್ಪತ್ರೆಗೆ ದಾಖಲಾಗಿದ್ದರು. ಚಿಕಿತ್ಸೆಗೆ ಸ್ಪಂದಿಸದೆ ಮೂರು ದಿನಗಳ ಹಿಂದೆಯಷ್ಟೇ ಮೃತಪಟ್ಟಿದ್ದರು.ಪತಿಯ ಸಾವಿನ ನಂತರ ನಂದಿನಿ ಮಾನಸಿಕವಾಗಿ ನೊಂದಿದ್ದರು.ಗುರುವಾರ ಮಧ್ಯಾಹ್ನ ಸುಮಾರು 1 ಗಂಟೆಯಲ್ಲಿ ರೂಂನಲ್ಲಿ ಕೆಲಸವಿದೆ ಎಂದು ಹೇಳಿ ಹೋಗಿದ್ದಾರೆ. ಬಹಳಸಮಯವಾದರೂ ಹೊರಗೆ ಬಂದಿಲ್ಲವೆಂದು ಆತಂಕಗೊಂಡ ತಾಯಿ ಮತ್ತು ತಂಗಿಯರು ರೂಮಿನ ಒಳಗೆ ಹೋಗಿ ನೋಡಿದಾಗ ಆತ್ಮಹತ್ಯೆ ಮಾಡಿಕೊಂಡಿರುವುದು ಗೊತ್ತಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.