ADVERTISEMENT

ರಾಮನಗರ: ವಂಡರ್‌ಲಾದಲ್ಲಿ ದಸರಾ ಉತ್ಸವದ ಸಂಭ್ರಮ

​ಪ್ರಜಾವಾಣಿ ವಾರ್ತೆ
Published 26 ಸೆಪ್ಟೆಂಬರ್ 2025, 2:22 IST
Last Updated 26 ಸೆಪ್ಟೆಂಬರ್ 2025, 2:22 IST
ದಸರಾ ಪ್ರಯುಕ್ತ ಸಿಂಗಾರಗೊಂಡಿರುವ ವಂಡರ್‌ಲಾ
ದಸರಾ ಪ್ರಯುಕ್ತ ಸಿಂಗಾರಗೊಂಡಿರುವ ವಂಡರ್‌ಲಾ   

ರಾಮನಗರ: ಬಿಡದಿ ಬಳಿಯ ವಂಡರ್‌ ಲಾದಲ್ಲಿ ಸೆ.20ರಿಂದ ಅ.5ರವರೆಗೆ 16 ದಿನ ದಸರಾ ಉತ್ಸವದ ಸಂಭ್ರಮ ಮನೆ ಮಾಡಲಿದೆ.

ಸಾಂಸ್ಕೃತಿಕ ಮೆರವಣಿಗೆ, ಬೆರಗುಗೊಳಿಸುವ ಬೆಳಕು ಮತ್ತು ಬೆಂಕಿ ಪ್ರದರ್ಶನ, ಹಬ್ಬದ ಅಲಂಕಾರ, ಡಿ.ಜೆ ಜೊತೆ ಪ್ರತಿ ಟಿಕೆಟ್‌ಗೆ  ರಿಯಾಯಿತಿ ಸೇರಿದಂತೆ ವಿಶೇಷ ಕೊಡುಗೆ ಸಿಗಲಿವೆ.

ಉತ್ಸವದ ಉದ್ದಕ್ಕೂ ವಂಡರ್‌ಲಾ ಸಿಗ್ನೇಚರ್ ಸವಾರಿ ಮತ್ತು ಆಕರ್ಷಣೆ ಜೊತೆಗೆ ಅತಿಥಿಗಳು ಸಂಗೀತ, ನೃತ್ಯ ಮತ್ತು ಸಾಂಸ್ಕೃತಿಕ ಪ್ರದರ್ಶನ ಆನಂದಿಸಬಹುದು. ವೇವ್ ಪೂಲ್‌ನಲ್ಲಿ ಡಿ.ಜೆ ಮತ್ತು ಸ್ಪಂದನಾತ್ಮಕ ಲಿಕ್ವಿಡ್ ಡ್ರಮ್ ಸೆಷನ್‌ಗಳಿಂದ ಹಿಡಿದು ಶ್ಯಾಡೊ ಪ್ಲೇ, ಪಪೆಟ್ ಷೋ ಮತ್ತು ಮ್ಯಾಜಿಕ್ ಪ್ರದರ್ಶನಗಳಲ್ಲಿ ತೊಡಗಿಸಿಕೊಳ್ಳಬಹುದು.

ADVERTISEMENT

ಅ.1ರಿಂದ 4ರವರೆಗೆ ಸಂಜೆ 3ಡಿ ಪ್ರೊಜೆಕ್ಷನ್ ಮ್ಯಾಪಿಂಗ್ ಬೆಳಕು ಮತ್ತು ಧ್ವನಿ ಪ್ರದರ್ಶನ ಮರೆಯಲಾಗದ ಅನುಭವ ನೀಡಲಿದೆ. ಡೊಳ್ಳು ಕುಣಿತ, ನೃತ್ಯ ಮತ್ತು ಡೋಲು ಸಾಂಸ್ಕೃತಿಕ ಪ್ರದರ್ಶನ ಗಮನ ಸೆಳೆಯಲಿದೆ ಎಂದು ವಂಡರ್‌ ಲಾ ಹಾಲಿಡೇಸ್ ಲಿಮಿಟೆಡ್‌ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಧೀರನ್ ಚೌಧರಿ ತಿಳಿಸಿದ್ದಾರೆ.

ರಿಯಾಯಿತಿ ಪ್ರವೇಶ ಪಾಸ್‌ ಮತ್ತು ಕಾಂಬೊ ಪ್ಯಾಕೇಜ್‌ ಪ್ರತಿ ಟಿಕೆಟ್‌ ಮೇಲೆ ₹600ವರೆಗೆ ರಿಯಾಯಿತಿ ಪಡೆಯಬಹುದು. ಎಲ್ಲಾ ವಿಶೇಷ ಕೊಡುಗೆ ವಂಡರ್‌ಲಾ ಆನ್‌ಲೈನ್ ಬುಕ್ಕಿಂಗ್‌ ಪೋರ್ಟಲ್‌: https://bookings.wonderla.com ನಲ್ಲಿ ಲಭ್ಯ ಇದೆ. ಮಾಹಿತಿಗೆ ಸಂಪರ್ಕ ಸಂಖ್ಯೆ: +91 80372 30333, +91 9945557777

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.