ADVERTISEMENT

‘ಪ್ರಚಾರಕರ ಜೀವನ ಸನ್ಯಾಸಿಗಳಿಗಿಂತ ಕಠಿಣ’

ವಿಎಚ್‌ಪಿ ಮುಖಂಡ ವಿಷ್ಣು ಸದಾಶಿವ ಕೋಕಚೆ ಅಭಿಮತ

​ಪ್ರಜಾವಾಣಿ ವಾರ್ತೆ
Published 22 ಆಗಸ್ಟ್ 2019, 19:54 IST
Last Updated 22 ಆಗಸ್ಟ್ 2019, 19:54 IST
ದತ್ತಾತ್ರೇಯ ಹೊಸಬಾಳೆ ಅವರು 'ಜೋಗಿಯ ಕಿಂದರಿ' ಪುಸ್ತಕ ಬಿಡುಗಡೆ ಮಾಡಿದರು. ಉನ್ನತ ಶಿಕ್ಷಣ ಇಲಾಖೆ ನಿವೃತ್ತ ಹೆಚ್ಚುವರಿ ನಿರ್ದೇಶಕ ಟಿ.ಎನ್. ಪ್ರಭಾಕರ್, ಸಂಘದ ದಕ್ಷಿಣ ಮಧ್ಯಕ್ಷೇತ್ರದ ಸಂಘ ಚಾಲಕ ವಿ. ನಾಗರಾಜ್, ವಿಷ್ಣು ಸದಾಶಿವ ಕೋಕಜೆ, ಬಾಬುರಾವ್ ದೇಸಾಯಿ ಇದ್ದರು –ಪ್ರಜಾವಾಣಿ ಚಿತ್ರ
ದತ್ತಾತ್ರೇಯ ಹೊಸಬಾಳೆ ಅವರು 'ಜೋಗಿಯ ಕಿಂದರಿ' ಪುಸ್ತಕ ಬಿಡುಗಡೆ ಮಾಡಿದರು. ಉನ್ನತ ಶಿಕ್ಷಣ ಇಲಾಖೆ ನಿವೃತ್ತ ಹೆಚ್ಚುವರಿ ನಿರ್ದೇಶಕ ಟಿ.ಎನ್. ಪ್ರಭಾಕರ್, ಸಂಘದ ದಕ್ಷಿಣ ಮಧ್ಯಕ್ಷೇತ್ರದ ಸಂಘ ಚಾಲಕ ವಿ. ನಾಗರಾಜ್, ವಿಷ್ಣು ಸದಾಶಿವ ಕೋಕಜೆ, ಬಾಬುರಾವ್ ದೇಸಾಯಿ ಇದ್ದರು –ಪ್ರಜಾವಾಣಿ ಚಿತ್ರ   

ಬೆಂಗಳೂರು: ‘ನಿಗದಿತ ಧ್ಯೇಯ ಸಾಧನೆಗೆ ಶ್ರಮಿಸುವ ಸಂಘದ ಪ್ರಚಾರಕರ ಜೀವನವು ಸನ್ಯಾಸಿಗಳ ಜೀವನಕ್ಕಿಂತ ಕಠಿಣವಾಗಿರುತ್ತದೆ’ ಎಂದು ವಿಶ್ವ ಹಿಂದು ಪರಿಷತ್‌ನ (ವಿಎಚ್‌ಪಿ) ಅಂತರರಾಷ್ಟ್ರೀಯ ಅಧ್ಯಕ್ಷರಾದ ನಿವೃತ್ತ ನ್ಯಾಯಮೂರ್ತಿ ವಿಷ್ಣು ಸದಾಶಿವ ಕೋಕಜೆ ಅಭಿಪ್ರಾಯ ವ್ಯಕ್ತಪಡಿಸಿದರು.

ವಿಶ್ವ ಹಿಂದು ಪರಿಷತ್‌ ಏರ್ಪಡಿಸಿದ್ದ ಹಿರಿಯ ಸಂಘ ಪ್ರಚಾರಕ ಬಾಬೂರಾವ್ ದೇಸಾಯಿ ಅವರ 95ರ ಸಂಭ್ರಮ ಕಾರ್ಯಕ್ರಮದಲ್ಲಿ ಮಾತನಾಡಿದರು.

‘ಸನ್ಯಾಸಿಗಳಿಗೆ ಸಮಾಜದಲ್ಲಿ ಸನ್ಮಾನ ಸಿಗುತ್ತದೆ. ಆದರೆ, ಪ್ರಚಾರಕರು ಜೀವನದುದ್ದಕ್ಕೂ ಸ್ವಯಂ ಜ್ಯೋತಿಯಾಗಿ ಸಾಮಾಜಿಕ ಕಾರ್ಯದಲ್ಲಿ ನಿರತರಾಗುತ್ತಾರೆ. ಹಾಗಾಗಿ ಸಾಮಾಜಿಕ ಕಾರ್ಯಚಟುವಟಿಕೆಯಲ್ಲಿ ನಿರತರಾಗಿರುವ ಪ್ರಚಾರಕರನ್ನು ಗುರುತಿಸುವ ಕೆಲಸವಾಗಬೇಕು’ ಎಂದು ತಿಳಿಸಿದರು.

ADVERTISEMENT

ರಾಷ್ಟ್ರೀಯ ಸ್ವಯಂಸೇವಕ ಸಂಘದ ಸಹ ಸರಕಾರ್ಯವಾಹ ದತ್ತಾತ್ರೇಯ ಹೊಸಬಾಳೆ, ‘ಸಂಘಕ್ಕಾಗಿ ಅನೇಕ ಪ್ರಚಾರಕರು ನಂದಾದೀಪಗಳಂತೆ ಬೆಳಕು ನೀಡಿದ್ದಾರೆ. ಒಂದು ಧ್ಯೇಯವನ್ನು ಇರಿಸಿಕೊಂಡು ಗಂಧದಂತೆ ಬದುಕು ತೇಯುವ ಪ್ರಚಾರಕರು ಸಫಲತೆಗಿಂತ ಹೆಚ್ಚಾಗಿ ಸಾರ್ಥಕ್ಯ ಕಾಣುತ್ತಾರೆ. ಬಾಬೂರಾವ್ ಅವರೂ ಜೀವನವನ್ನು ತಿಳಿನೀರಿನ ಹಾಗೆ ಇಟ್ಟು ಕೊಂಡು ಬದುಕುತ್ತಿದ್ದಾರೆ’ ಎಂದರು.

ಬಾಬೂರಾವ್ ದೇಸಾಯಿ, ‘ಸಂಘದಲ್ಲಿ ಕೆಲಸ ಮಾಡಿದ್ದರಿಂದ ನನಗೆ ಮಹಾನ್ ನಾಯಕರ ಒಡನಾಟ ಸಿಗುವಂತಾಯಿತು. ಜನರು ಹೇಗೇ ಇದ್ದರೂ ಅವರಲ್ಲಿ ರಾಷ್ಟ್ರಜಾಗೃತಿಯನ್ನು ಪ್ರೇರೇಪಿಸುವುದೇ ನಮ್ಮ ಕರ್ತವ್ಯ ಎಂದು ಹಿರಿಯ ನಾಯಕರು ಹೇಳುತ್ತಿದ್ದರು. ಈ ಗುರಿಯನ್ನು ಇಟ್ಟುಕೊಂಡು ಇಂದಿಗೂ ಕೆಲಸ ಮಾಡುತ್ತಿದ್ದೇನೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.