ADVERTISEMENT

ಅಡಿಕೆಗೆ ಮರಣ ಶಾಸನ ಬರೆದ ಸರ್ಕಾರ: ಟೀಕೆ

​ಪ್ರಜಾವಾಣಿ ವಾರ್ತೆ
Published 6 ಜನವರಿ 2014, 5:40 IST
Last Updated 6 ಜನವರಿ 2014, 5:40 IST

ಹೊಸನಗರ: ಅಡಿಕೆ ಕೃಷಿ ಕುರಿತಂತೆ ಕೇಂದ್ರ ಸರ್ಕಾರದ ತಪ್ಪು ನೀತಿಯಿಂದ ಅಡಿಕೆ ಬೆಳೆಗಾರರಿಗೆ  ಮರಣ ಶಾಸನ ಬರೆದಂತಾಗಿದೆ ಎಂದು ಸಂಸತ್ ಸದಸ್ಯ ಬಿ.ವೈ.ರಾಘವೇಂದ್ರ ದೂರಿದರು.

ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಡಿಕೆ ನಿಷೇಧ ಪ್ರಕ್ರಿಯೆ ಬಹುರಾಷ್ಟ್ರೀಯ ಸಿಗರೇಟ್ ಕಂಪೆನಿಗಳ ಪಿತೂರಿ ಎಂದು ದೂರಿದರು. ಈ ಕುರಿತಂತೆ ಕೇಂದ್ರ ಕೃಷಿ ಸಚಿವ ಶರದ್ ಪವಾರ್ ಜತೆ ಚರ್ಚೆ ನಡೆಸಿ ಎಂದರು.

 ವಿಲೀನ: ಬಿಜೆಪಿ–ಕೆಜೆಪಿ ವಿಲೀನ ಪ್ರಕ್ರಿಯೆ ಸಂಪೂರ್ಣ ಮುಗಿದ ಅಧ್ಯಾಯ. ನರೇಂದ್ರ ಮೋದಿ ಮುಂದಿನ ಪ್ರಧಾನಿ ಆಗಬೇಕು ಎಂಬ ಒಂದೇ ಗುರಿಯಿಂದ ಯಾವುದೇ ಸ್ಥಾನ ಮಾನದ ಒತ್ತಡ ನೀಡದೆ ವಿಲೀನ ಆಗಿದೆ ಎಂದರು.

ಮುಂದಿನ ಲೋಕಸಭಾ ಚುನಾವಣೆಯಲ್ಲಿ ಅಭ್ಯರ್ಥಿ ಸ್ಥಾನಕ್ಕೆ ಸ್ಪರ್ಧಿಸುವ  ಕುರಿತ ಪ್ರಶ್ನೆಗೆ ಉತ್ತರಿಸಿದ ಅವರು, ಪಕ್ಷ ಯಾವುದೇ ಹೊಣೆಗಾರಿಕೆ ನೀಡಿದರೂ ತಾವು ಅದಕ್ಕೆ ತಲೆಬಾಗುವುದಾಗಿ ತಿಳಿಸಿದರು.

ಕಳೆದ 5 ವರ್ಷದಿಂದ ತಮ್ಮ ಆಡಳಿತಾವಧಿಯಲ್ಲಿ ಸಂಸತ್ ಸದಸ್ಯನಾಗಿ ಜನತೆ ಸಹಕಾರದಿಂದ ಶಿವಮೊಗ್ಗ ಲೋಕಸಭಾ ಕ್ಷೇತ್ರಕ್ಕೆ ಪಕ್ಷಾತೀತ ಹಾಗೂ ತಾಲ್ಲೂಕುವಾರು ತಾರತಮ್ಯ ಇಲ್ಲದೆ ಸಾಕಷ್ಟು ಅಭಿವೃದ್ಧಿ ಮಾಡಿದ್ದೇನೆ ಎಂದು
ಎಂದರು.

ಸುದ್ದಿಗೊಷ್ಠಿಯಲ್ಲಿ ಬಿಜೆಪಿ ತಾಲ್ಲೂಕು ಅಧ್ಯಕ್ಷ ಕೆ.ವಿ.ಕೃಷ್ಣಮೂರ್ತಿ, ಮುಖಂಡರಾದ ಬಿ.ಯುವರಾಜ್, ವಾಟಗೋಡು ಸುರೇಶ್‌, ಎಂ.ಎನ್. ಸುಧಾಕರ್, ಸುಮಾ ಸುಬ್ರಹ್ಮಣ್ಯ, ದೊಡ್ಲೆಪಾಲ್‌ ಚಂದ್ರಶೇಖರ್ ಮತ್ತಿತರರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT