ADVERTISEMENT

ಭದ್ರಾವತಿ: 18ಕ್ಕೆ ಯಕ್ಷಗಾನ ಬಯಲಾಟ

​ಪ್ರಜಾವಾಣಿ ವಾರ್ತೆ
Published 13 ಫೆಬ್ರುವರಿ 2012, 6:25 IST
Last Updated 13 ಫೆಬ್ರುವರಿ 2012, 6:25 IST

ಭದ್ರಾವತಿ: ಇಲ್ಲಿನ ವಿಐಎಸ್‌ಎಲ್ ರಾಜಭಾಷ ವಿಭಾಗ, ಕಂಪು ಪ್ರತಿಷ್ಠಾನ ಹಾಗೂ ಯಕ್ಷಕಾರಂಜಿ ಸಹಯೋಗದಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಮಂಜುನಾಥೇಶ್ವರ ಕೃಪಾಪೋಷಿತ ಯಕ್ಷಗಾನ ಮಂಡಳಿ ಫೆ. 18ರಂದು ಸೇವಾ ಬಯಲಾಟ ನಡೆಸಿಕೊಡಲಿದೆ.

ಶ್ರೀಲಕ್ಷ್ಮೀಸ್ವಯಂವರ- ತಿರುಪತಿ ಕ್ಷೇತ್ರ ಮಹಾತ್ಮೆ ಪ್ರಸಂಗ ನ್ಯೂಟೌನ್ ವಿಐಎಸ್‌ಎಲ್ ಸಂತೆ ಮೈದಾನದಲ್ಲಿ ರಾತ್ರಿ 9.30ರಿಂದ ಬೆಳಗಿನ ಜಾವ ತನಕ ನಡೆಯಲಿದೆ ಎಂದು ಕಂಪು ಪ್ರತಿಷ್ಠಾನ ಡಾಕಪ್ಪ ತಿಳಿಸಿದ್ದಾರೆ.
ಅಂದು ಬೆಳಿಗ್ಗೆ 6.30ಕ್ಕೆ ಜನ್ನಾಪುರ ಮಹಾಗಣಪತಿ ದೇವಾಲಯಕ್ಕೆ ಸ್ವಾಮಿಯನ್ನು ಕರೆತಂದು, 9.30ಕ್ಕೆ ಮಹಾಗಣಪತಿ ಪೂಜಾ ಕೈಂಕರ್ಯ ನಡೆಯಲಿದೆ.

ಸಂತೆ 5.30ಕ್ಕೆ ದೇವಾಲಯ ಆವರಣದಿಂದ ಸ್ವಾಮಿಯರಾಜಬೀದಿ ಉತ್ಸವ ಸಾಗಿ ರಂಗಸ್ಥಳ ತಲುಪಲಿದೆ.
ಅಲ್ಲಿ ಯಥೋಚಿತ ಪೂಜಾ ಕಾರ್ಯಕ್ರಮ ನಡೆದ ನಂತರ ಪ್ರಸಂಗ ಆರಂಭಾವಗಲಿದೆ. ಸುರ್ಯೋದಯಕ್ಕೆ ಸರಿಯಾಗಿ ಮಂಗಳಾರತಿ, ಪ್ರಸಾದ ವಿನಿಯೋಗ ನಡೆಯಲಿದೆ. ಪ್ರವೇಶ ಉಚಿತವಿದ್ದು, ಸ್ತ್ರೀಯರಿಗೆ ಪ್ರತ್ಯೇಕ ಆಸನ ವ್ಯವಸ್ಥೆ ಮಾಡಲಾಗಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.