
ತೀರ್ಥಹಳ್ಳಿ : ಸೌರ ಶಕ್ತಿ ಬಳಸಿಕೊಂಡು ಹಲವು ಆಧುನಿಕ ಯಂತ್ರೋಪಕರ ತಯಾರಾಗುತ್ತಿದೆ. ನವೀಕರಿಸಬಹುದಾದ ಇಂಧನ ಕ್ಷೇತ್ರದಲ್ಲಿ ಈಗಾಗಲೇ ಅಪಾರ ಉದ್ಯೋಗವಕಾಶ ಸೃಷ್ಟಿಯಾಗುತ್ತಿದೆ. ವಿದ್ಯಾರ್ಥಿಗಳು ಅದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಮಹಾತ್ಮ ಗಾಂಧಿ ಗ್ರಾಮೀಣ ಇಂಧನ ಅಭಿವೃದ್ಧಿ ಸಂಸ್ಥೆಯ ಹಿರಿಯ ಪ್ರಾಧ್ಯಾಪಕ ರವಿ ತಿಳಿಸಿದರು.
ಗುರುವಾರ ಭಾರತೀಯ ವಿಕಾಸ ಟ್ರಸ್ಟ್, ಸರ್ಕಾರಿ ಐಟಿಐ ಕಾಲೇಜು ಸಂಯುಕ್ತ ಆಶ್ರಯದಲ್ಲಿ ನಡೆದ ಮೂರು ದಿನಗಳ ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿ, ತಾಂತ್ರಿಕ, ಪ್ರಾಯೋಗಿಕ ಶಿಕ್ಷಣ ಪಡೆಯುವ ವಿದ್ಯಾರ್ಥಿಗಳಿಗೆ ಉತ್ತಮ ಅವಕಾಶಗಳು ಇದೆ. ತಮ್ಮ ಊರುಗಳಲ್ಲೇ ಸ್ವ-ಉದ್ಯೋಗ ಪ್ರಾರಂಭಿಸಬಹುದು ಎಂದರು.
ಸಂಪನ್ಮೂಲ ವ್ಯಕ್ತಿ ಶ್ರೀಧರ್ ರಾವ್, ಅರುಣ್ ಜಿ.ಪಿ., ಸರಕಾರಿ ಐಟಿಐ ನ ಕಿರಿಯ ತರಬೇತಿ ಅಧಿಕಾರಿಗಳಾದ ಆಶಾ ಆರ್, ನವ್ಯಶ್ರೀ, ಮಹೇಶ ಎನ್. ಶ್ರೀಧರ ಎ.ವಿ., ಸೆಲ್ಕೋ ಸಂಸ್ಥೆ ಸಾಗರ ಶಾಖೆಯ ಈಶ್ವರ್ ಎಂ. ತೀರ್ಥಹಳ್ಳಿ ಭಾಗದ ರವೀಶ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.