ADVERTISEMENT

ಶಾಲಾ ಕಟ್ಟಡ ದುರಸ್ತಿಗೆ ಕ್ರಮ: ಮಧು ಬಂಗಾರಪ್ಪ

​ಪ್ರಜಾವಾಣಿ ವಾರ್ತೆ
Published 14 ಡಿಸೆಂಬರ್ 2013, 6:14 IST
Last Updated 14 ಡಿಸೆಂಬರ್ 2013, 6:14 IST

ಸೊರಬ: ವಿದ್ಯಾರ್ಥಿಗಳ ಸರ್ವ ತೋಮುಖ ಅಭಿವೃದ್ಧಿಗೆ ಹಾಗೂ ಅವರ ಬೌದ್ಧಿಕ ಬೆಳವಣಿಗೆಗೆ ಪ್ರತಿಭಾ ಕಾರಂಜಿಯಂಥ ಸಾಂಸ್ಕೃತಿಕ ಚಟುವಟಿಕೆಗಳು ವೇದಿಕೆಯಾಗಿದೆ  ಎಂದು ವಿರೋಧ ಪಕ್ಷದ ಮುಖ್ಯ ಸಚೇತಕ ಮಧು ಬಂಗಾರಪ್ಪ ಹೇಳಿದರು.    ಸಾರ್ವಜನಿಕ ಶಿಕ್ಷಣ ಇಲಾಖೆ, ಸರ್ವ ಶಿಕ್ಷಣ ಅಭಿಯಾನ, ಕ್ಷೇತ್ರ ಶಿಕ್ಷಣಾಧಿ ಕಾರಿಗಳ ಕಚೇರಿ  ಆಶ್ರಯದಲ್ಲಿ ಪಟ್ಟಣದ ಪದವಿ ಪೂರ್ವ ಕಾಲೇಜು ಆವರಣದಲ್ಲಿ ಶುಕ್ರವಾರ ನಡೆದ ತಾಲ್ಲೂಕು ಮಟ್ಟದ ಪ್ರತಿಭಾ ಕಾರಂಜಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

ತಾಲ್ಲೂಕಿನಲ್ಲಿರುವ ಸರ್ಕಾರಿ ಶಾಲೆಗಳ ಕಟ್ಟಡಗಳು ಹಳೆಯ ಕಟ್ಟಡದ್ದಾಗಿದ್ದು, ಶಿಥಿಲಾ ವಸ್ಥೆ ಬಗ್ಗೆ ಮಾಹಿತಿ ದೊರೆತಿದೆ. ಈ ನಿಟ್ಟಿನಲ್ಲಿ ಮಕ್ಕಳು ಶಾಲೆಗಳಲ್ಲಿ ಮಕ್ಕಳು ನಿರ್ಬೀತಿಯಿಂದ ಪಾಠ ಕೇಳುವ ವಾತಾವರಣ ನಿರ್ಮಾಣ ಮಾಡಲು ಕಟ್ಟಡಗಳ ದುರಸ್ತಿಯಾಗಬೇಕಿದೆ.  ಕಾರ್ಯ ಕ್ರಮದಲ್ಲಿ ಶಿಕ್ಷಣ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಕಿಮ್ಮನೆ ರತ್ನಾಕರ ಭಾಗವಹಿಸಿದ್ದರೆ ಅವರ ಗಮನಕ್ಕೆ ತರಬಹುದಿತ್ತು. ಆದರೂ, ಮುಂದಿನ ದಿನಗಳಲ್ಲಿ ಸಚಿವರ ಗಮನಕ್ಕೆ ತಂದು ದುರಸ್ತಿಗಾಗಿ ಪ್ರಯತ್ನ ಮಾಡಲಾಗುವುದು ಎಂದು ತಿಳಿಸಿದರು.

  ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆ ಗೀತಾ ಮಲ್ಲಿಕಾರ್ಜುನ ಮಾತನಾಡಿದರು.   ಮಕ್ಕಳನ್ನು ವಿಜ್ಞಾನ ಕ್ಷೇತ್ರದಲ್ಲಿ ಪ್ರೋತ್ಸಾಹಿಸುವ ದೃಷ್ಟಿಯಿಂದ ಸರ್ಕಾರ ನಡೆಸುವ ಇನ್ಸ್‌ಪೈರ್  ಸ್ಪರ್ಧೆಯಲ್ಲಿ ವಿಜೇತರಾದ 97 ಮಕ್ಕಳಿಗೆ ಶಾಸಕ ಮಧು ಬಂಗಾರಪ್ಪ ₨ 5000 ಚೆಕ್
ವಿತರಿಸಿದರು.

  ತಾಲ್ಲೂಕು ಪಂಚಾಯ್ತಿ ಅಧ್ಯಕ್ಷ ಬಸವಲಿಂಗಪ್ಪ ಅದ್ಯಕ್ಷತೆ ವಹಿಸಿದ್ದರು. ಜಿಲ್ಲಾ ಪಂಚಾಯ್ತಿ ಸದಸ್ಯರಾದ ಹುಣ ವಳ್ಳಿ ಗಂಗಾಧರಪ್ಪ, ಗುರುಕುಮಾರ್ ಪಾಟೀಲ್, ಕೋಮಲ ನಿರಂಜನ, ತಾಲ್ಲೂಕು ಪಂಚಾಯ್ತಿ ಉಪಾಧ್ಯಕ್ಷೆ ನೀಲಮ್ಮ ಸುರೇಶ್, ಕಾಲೇಜು ಅಭಿವೃದ್ಧಿ ಸಮಿತಿ ಅಧ್ಯಕ್ಷ  ಶ್ರೀಕಾಂತ್ ಶೇಟ್, ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಬಸವರಾಜಪ್ಪ,  ಬಿಇಓ ಎಂ.ನಾಗರಾಜ್. ಸಮನ್ವಯ ಅಧಿಕಾರಿ ಪರಶುರಾಮಪ್ಪ, ಇಒ ಮಹಮ್ಮದ್ ಇಸ್ಮಾಯಿಲ್ ಮತ್ತಿತರರು ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.