ADVERTISEMENT

ಶಿವಮೊಗ್ಗ: 147 ಮಂದಿಗೆ ಕೊರೊನಾ

3703 ಜನರ ಗಂಟಲಿನ ದ್ರವ ಪರೀಕ್ಷೆ, 3020 ಜನರ ವರದಿ ನೆಗೆಟಿವ್ , ಇಬ್ಬರ ಸಾವು

​ಪ್ರಜಾವಾಣಿ ವಾರ್ತೆ
Published 15 ಅಕ್ಟೋಬರ್ 2020, 5:26 IST
Last Updated 15 ಅಕ್ಟೋಬರ್ 2020, 5:26 IST

ಶಿವಮೊಗ್ಗ:ಜಿಲ್ಲೆಯಲ್ಲಿ ಈಚೆಗೆ ಸೋಂಕಿತರಿಗಿಂತ ಗುಣಮುಖರಾದವರೇ ಹೆಚ್ಚಿದ್ದಾರೆ. ಬುಧವಾರವೂ 206 ಮಂದಿ ಗುಣಮುಖರಾಗಿದ್ದಾರೆ. 147 ಮಂದಿಗೆ ಸೋಂಕು ದೃಢಪಟ್ಟಿದೆ.ಇಬ್ಬರು ಮೃತಪಟ್ಟಿದ್ದಾರೆ.

ಒಂದೇ ದಿನ3703 ಜನರ ಗಂಟಲಿನ ದ್ರವ ಪರೀಕ್ಷೆ ಮಾಡಲಾಗಿದೆ. 3020 ಜನರ ವರದಿ ನೆಗೆಟಿವ್ ಬಂದಿದೆ.ಮನೆಯಲ್ಲಿ 1,031 ಸೇರಿ ಒಟ್ಟು 1,394 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ.ಇದುವರೆಗೆ ಕೋವಿಡ್‌-19ನಿಂದ ಮೃತಪಟ್ಟವರ ಸಂಖ್ಯೆ 325ಕ್ಕೆ ಏರಿದೆ. ಸೋಂಕಿತರ ಸಂಖ್ಯೆ 19,450ಕ್ಕೆ ತಲುಪಿದೆ.

ಶಿವಮೊಗ್ಗ ತಾಲ್ಲೂಕಿನಲ್ಲಿ65 ಸೋಂಕಿತರು ಪತ್ತೆಯಾಗಿದ್ದಾರೆ. ಭದ್ರಾವತಿಯಲ್ಲಿ 27, ಶಿಕಾರಿಪುರದಲ್ಲಿ 39, ತೀರ್ಥಹಳ್ಳಿಯಲ್ಲಿ 4, ಸೊರಬದಲ್ಲಿ 4, ಸಾಗರದಲ್ಲಿ 2, ಹೊಸನಗರ 5 ಹಾಗೂ ಇಲ್ಲಿಗೆ ಚಿಕಿತ್ಸೆಗೆ ಬಂದಿದ್ದ 4 ಜನರಿಗೆ ಸೋಂಕು ಖಚಿತಪಟ್ಟಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.