ಸಾಗರ: ಭೂ ಸುಧಾರಣಾ ಕಾಯ್ದೆ ಜಾರಿಗೆ ಬಂದು 50 ವರ್ಷಗಳು ತುಂಬಿದ ನೆನಪಿಗೆ ಮಾರ್ಚ್ 1ರಂದು ತಾಲ್ಲೂಕಿನ ತ್ಯಾಗರ್ತಿ ಗ್ರಾಮದಲ್ಲಿ ಕಾಯ್ದೆಯ ಫಲಾನುಭವಿ ಗೇಣಿ ರೈತರ ಸಮಾವೇಶವನ್ನು ರೈತ ಸಂಘ (ಎಚ್.ಗಣಪತಿಯಪ್ಪ ಸ್ಥಾಪಿತ) ಹಮ್ಮಿಕೊಂಡಿದೆ.
‘ಭೂ ಸುಧಾರಣಾ ಕಾಯ್ದೆಯಿಂದಾಗಿ ಗೇಣಿ ರೈತರಿಗೆ ಭೂಮಿಯ ಹಕ್ಕು ದೊರಕುವಂತಾಗಿದೆ. ಹೀಗಾಗಿ ಇದರ ಫಲಾನುಭವಿಗಳು ಕಾಯ್ದೆಗೆ 50 ವರ್ಷ ತುಂಬಿದ ಸಂದರ್ಭವನ್ನು ತಮ್ಮ ಮನೆಯ ಹಬ್ಬದಂತೆ ಆಚರಿಸಬೇಕು’ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ದಿನೇಶ್ ಶಿರವಾಳ ಹೇಳಿದರು.
‘ಭೂ ಸುಧಾರಣಾ ಕಾಯ್ದೆ ಜಾರಿಗೆ ಬರುವಲ್ಲಿ ಮತ್ತು ಅದು ರೈತ ಪರವಾಗಿರುವಲ್ಲಿ ಪ್ರಮುಖ ಪಾತ್ರ ವಹಿಸಿರುವ ವಿಧಾನಸಭೆಯ ಮಾಜಿ ಅಧ್ಯಕ್ಷ ಕಾಗೋಡು ತಿಮ್ಮಪ್ಪ ಅವರನ್ನು ಸಮಾವೇಶದಲ್ಲಿ ಸನ್ಮಾನಿಸಲಾಗುವುದು. ರೈತರ ಹಿತಕ್ಕೆ ಸಂಬಂಧಪಟ್ಟ ವಿಷಯಗಳು, ಪ್ರಸ್ತುತ ರೈತರನ್ನು ಕಾಡುತ್ತಿರುವ ಸಮಸ್ಯೆಗಳ ಕುರಿತು ಸಮಾವೇಶದಲ್ಲಿ ಚರ್ಚೆ ನಡೆಯಲಿದೆ’ ಎಂದು ಅವರು ತಿಳಿಸಿದರು.
ಪ್ರಮುಖರಾದ ರಮೇಶ್ ಕೆಳದಿ, ಹೊಯ್ಸಳ ಗಣಪತಿಯಪ್ಪ, ಶಶಿಲ್ ಸೋಮನ್, ಇಬ್ರಾಹಿಂ, ರಾಮಚಂದ್ರ ಮನೆಘಟ್ಟ, ಶಿವು ಮೈಲಾರಕೊಪ್ಪ, ಕೃಷ್ಣಮೂರ್ತಿ, ವಿಜಯಕುಮಾರ್, ಜಗನ್ನಾಥ, ರವಿಕುಮಾರ್, ಗಣಪತಿ, ಕೃಷ್ಣಪ್ಪ, ವಾಸು ಜಂಬೂರುಮನೆ, ಚಂದ್ರು ಸಿರಿವಂತೆ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.