ADVERTISEMENT

ತೀರ್ಥಹಳ್ಳಿ | ಅಂತರರಾಷ್ಟ್ರೀಯ ನಾಟಕೋತ್ಸವಕ್ಕೆ ‘ಆ ಊರು, ಈ ಊರು‘ ಆಯ್ಕೆ

​ಪ್ರಜಾವಾಣಿ ವಾರ್ತೆ
Published 5 ಡಿಸೆಂಬರ್ 2025, 7:30 IST
Last Updated 5 ಡಿಸೆಂಬರ್ 2025, 7:30 IST
ನಟಮಿತ್ರರು ತಂಡದ ‘ಆ ಊರು, ಈ ಊರು‘ ನಾಟಕದ ಒಂದು ದೃಶ್ಯ
ನಟಮಿತ್ರರು ತಂಡದ ‘ಆ ಊರು, ಈ ಊರು‘ ನಾಟಕದ ಒಂದು ದೃಶ್ಯ   

ತೀರ್ಥಹಳ್ಳಿ : ಇಲ್ಲಿನ ನಟಮಿತ್ರರು ಹವ್ಯಾಸಿ ಕಲಾ ಬಳಗ ಅಭಿನಯಿಸಿದ ‘ಆ ಊರು, ಈ ಊರು’ ನಾಟಕ ಪ್ರತಿಷ್ಠಿತ ಭಾರತ ರಂಗಮಹೋತ್ಸವದ ಅಂತರರಾಷ್ಟ್ರೀಯ ನಾಟಕೋತ್ಸವಕ್ಕೆ ಆಯ್ಕೆಯಾಗಿದೆ.

ನಾಟಕಕಾರ ಜಿ.ಬಿ.ಜೋಷಿ ರಚನೆಯ ನಾಟಕವನ್ನು ರಂಗ ನಿರ್ದೇಶಕ ಹುಲುಗಪ್ಪ ಕಟ್ಟಿಮನಿ ನಿರ್ದೇಶಿಸಿದ್ದಾರೆ. ನವದೆಹಲಿಯ ರಾಷ್ಟ್ರೀಯ ನಾಟಕ ಶಾಲೆ ಆಯೋಜಿಸುತ್ತಿರುವ ನಾಟಕೋತ್ಸವದಲ್ಲಿ 10 ವಿದೇಶಿ ನಾಟಕ ಸೇರಿದಂತೆ ದೇಶದ ವಿವಿಧ ರಾಜ್ಯಗಳ ಒಟ್ಟು 105 ನಾಟಕಗಳು ಪ್ರದರ್ಶನಗೊಳ್ಳಲಿದೆ.

ಕನ್ನಡ ಭಾಷೆಯಿಂದ ಉಮಾಶ್ರೀ ಅಭಿನಯದ ಬೆಂಗಳೂರಿನ ರಂಗಸಂಪದ ತಂಡದ ‘ಶರ್ಮಿಷ್ಠೆ’, ರಂಗ ದಿಗ್ಗಜ ಬಿ.ವಿ. ಕಾರಂತ ನಿರ್ದೇಶನದ ಬೆನಕ ತಂಡದ 'ಹಯವದನ’, ಮೈಸೂರಿನ ನಟನ ರಂಗಸಂಸ್ಥೆಯ ಮಂಡ್ಯ ರಮೇಶ್ ನಿರ್ದೇಶನದ 'ಅಂಧ ಯುಗ' ಸೇರಿದಂತೆ 4 ನಾಟಕಗಳು ಪ್ರದರ್ಶನಗೊಳ್ಳಲಿದೆ. 2026ರ ಜನವರಿ ಮತ್ತು ಫೆಬ್ರುವರಿ ತಿಂಗಳಲ್ಲಿ ನಾಟಕೋತ್ಸವ ದೇಶದಾದ್ಯಂತ ಅನೇಕ ಪ್ರಮುಖ ನಗರಗಳಲ್ಲಿ ಪ್ರದರ್ಶನಗೊಳ್ಳಲಿವೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.